/newsfirstlive-kannada/media/media_files/2025/10/15/smriti-mandana-2025-10-15-11-00-29.jpg)
ಭಾರತ ಮಹಿಳಾ ತಂಡದ ಸ್ಟೈಲಿಷ್ ಬ್ಯಾಟರ್​ ಸ್ಮೃತಿ ಮಂದಾನ ಇಂಟರ್​ನೆಟ್ ಸೆನ್ಸೇಷನ್ ಆಗಿದ್ದಾಳೆ. ಆನ್​ಫೀಲ್ಡ್​ನಲ್ಲಿ ಬ್ಯಾಟ್ ಹಿಡಿದು ಅಬ್ಬರಿಸುವ ಸ್ಮೃತಿ, ಆಫ್​ ದ ಫೀಲ್ಡ್​​ನಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾಳೆ. ಅಷ್ಟಕ್ಕೂ ಸ್ಮೃತಿ ಮಾಡಿದ್ದೇನು? ಅಭಿಮಾನಿಗಳು ಸ್ಮೃತಿಗೆ ಫಿದಾ ಆಗಿರೋದು ಯಾಕೆ ಅನ್ನೋದ್ರ ವಿವರ ಇಲ್ಲಿದೆ.
ಸ್ಮೃತಿ ಮಂದಾನ.. ಈ ಹೆಸರು ಕೇಳಿದ್ರೆ ಸಾಕು ಕ್ರಿಕೆಟ್​​​ ಅಭಿಮಾನಿಗಳ ಮೈಯಲ್ಲಿ, ರೋಮಾಂಚನವಾಗುತ್ತದೆ. ಆಕೆಯ ಆಟ, ಕಣ್ಣೋಟ, ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಇನ್ನು ಆಕೆಯ ಸ್ಮೈಲ್ ಮತ್ತು ಲುಕ್ಸ್,​​ ಎಂಥವರನ್ನೂ ತನ್ನತ್ತ ಸೆಳೆಯುವಂತೆ ಮಾಡುತ್ತದೆ.
/filters:format(webp)/newsfirstlive-kannada/media/media_files/2025/08/13/smriti-mandana-2025-08-13-15-32-34.jpg)
ಟೀಮ್ ಇಂಡಿಯಾದ ಉಪನಾಯಕಿ ಸ್ಮೃತಿ ಮಂದಾನ, ಸದ್ಯ ನ್ಯಾಷನಲ್ ಕ್ರಷ್ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಸ್ಮೃತಿಯ ಫಿಟ್ನೆಸ್​​​​​​ಗೆ ಕ್ಲೀನ್ ಬೋಲ್ಡ್ ಆಗಿರೋ ಪಡ್ಡೆ ಹುಡುಗರು, ಸಾಂಗ್ಲಿ ಹುಡುಗಿಗೆ ಮನಸೋತಿದ್ದಾರೆ.
ಸ್ಮೃತಿ ಫಿಟ್ನೆಸ್​​​​ಗೆ ಸೈಕ್ ಆದ ಫ್ಯಾನ್ಸ್
ಇತ್ತೀಚೆಗೆ ಸ್ಮೃತಿ ಮಂದಾನರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ಆ ಫೋಟೋದಲ್ಲಿ ಸ್ಮೃತಿಯ ಸಿಕ್ಸ್​​ಪ್ಯಾಕ್ ಌಬ್ಸ್, ಎಲ್ಲರ ಗಮನ ಸೆಳೆದಿತ್ತು. ಹಾಫ್ ಸ್ಲೀವ್ಸ್ ಟಿ-ಶರ್ಟ್​​ನಲ್ಲಿ ಸ್ಮೃತಿ ಬೈಸಿಪ್ಸ್​ ಕೂಡ ಸಖತ್ತಾಗಿ ಕಾಣ್ತಿತ್ತು. ಈ ಫೋಟೋಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಎಡಗೈ ಬ್ಯಾಟರ್ ಸ್ಮೃತಿ ಸ್ಮೈಲ್​​ಗೆ, ಮನಸೋಲದವರು ಯಾರಿಲ್ಲ ಹೇಳಿ? ಆಕೆ ನಗುತ್ತಿದ್ರೆ ಅವಳನ್ನೇ ನೋಡುತ್ತಿರಬೇಕು ಅನಿಸುತ್ತದೆ. ಆಕೆಯ ನಗುವಿನಲ್ಲಿ ಎಲ್ಲರನ್ನೂ ಸೆಳೆಯೋ ಶಕ್ತಿ ಇದೆ. ಸ್ಮೃತಿಯ ಸ್ಟೈಲ್​​ ಕೂಡ ಬೊಂಬಾಟ್. ಆಕೆಯ ಸ್ಟೈಲಿಷ್ ಲುಕ್ಸ್​ಗೆ​, ಎಷ್ಟೋ ಮಂದಿ ಕ್ಲೀನ್ ಬೋಲ್ಡ್ ಆಗುತ್ತಾರೆ. ಸ್ಮೃತಿ, ಟೀಮ್ ಇಂಡಿಯಾದ ಸ್ಟೈಲ್ ಐಕಾನ್.
ಇದನ್ನೂ ಓದಿ: ನಿಮ್ಮ ಮಗುವಿನ ಹೆಸರಲ್ಲಿ instagram ಖಾತೆ ಇದ್ಯಾ? ಹೊಸ ಗೈಡ್​ಲೈನ್ಸ್..!
ಸ್ಮೃತಿ, ಸೌಂದರ್ಯದಲ್ಲಿ ಬಾಲಿವುಡ್ ನಟಿಯರನ್ನೂ ಮೀರಿಸುತ್ತಾಳೆ. ನೀವು ಸ್ಮೃತಿಯನ್ನ ಫಂಕ್ಷನ್​ಗಳಲ್ಲಿ ಗಮನಿಸುತ್ತಿರುತ್ತೀರಾ? ಆಕೆ ರೆಡಿಯಾಗಿ ಬಂದ್ರೆ ಯಾಕೆಯ ಮುಂದೆ ಯಾರೂ ಲೆಕ್ಕಕ್ಕಿಲ್ಲ ಅನಿಸುತ್ತದೆ. ಸ್ಮೃತಿ ಮುಂದೆ ಎಲ್ಲಾ ನಟಿಯರೂ, ಡಲ್ ಆಗಿಬಿಡ್ತಾರೆ. ಆನ್​ಫೀಲ್ಡ್​ನಲ್ಲಿ ಸ್ಮೃತಿ ಮಂದಾನ ಬ್ಯಾಟಿಂಗ್ ಬಗ್ಗೆ ಮಾತಾಡೋ ಹಾಗಿಲ್ಲ. ಆಕೆಯ ಆಟಕ್ಕೆ, ದೇಶ ವಿದೇಶಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆಕೆಯ ಕವರ್ ಡ್ರೈವ್ಸ್, ಸ್ಕೇರ್ ಕಟ್, ಪುಲ್ ಶಾಟ್​, ಇನ್​ಸೈಡ್ ಔಟ್ ಶಾಟ್, ನೋಡಿರುವ ಪ್ರತಿಯೊಬ್ಬರು ಆಕೆಗೆ ಅಭಿಮಾನಿಗಳಾಗಿ ಬಿಡ್ತಾರೆ.
ಸ್ಮೃತಿಯದ್ದೇ ಸದ್ದು
ಸದ್ಯ ಏಕದಿನ ಕ್ರಿಕೆಟ್​ನಲ್ಲಿ ಸ್ಮೃತಿ ಮಂದಾನ, ಜೋರಾಗಿಯೇ ದರ್ಬಾರ್ ನಡೆಸ್ತಿದ್ದಾರೆ. ಕಳೆದೊಂದು ವರ್ಷದಲ್ಲಿ ಸ್ಮೃತಿ, 6 ಭರ್ಜರಿ ಶತಕಗಳನ್ನ ಸಿಡಿಸಿದ್ದಾರೆ. ಐಸಿಸಿ ಏಕದಿನ ಱಂಕಿಂಗ್​ನಲ್ಲಿ ​​ನಂಬರ್.1 ಪಟ್ಟ ಅಲಂಕರಿಸಿದ್ದಾರೆ. ಹಾಗೆಯೇ T20 ಕ್ರಿಕೆಟ್​ನಲ್ಲೂ ಸ್ಮೃತಿ, ಸಖತ್ ಶೈನ್ ಆಗಿದ್ದಾರೆ.
ಒಟ್ನಲ್ಲಿ.. ಈ ಲೇಡಿ ಸೂಪರ್​​ಸ್ಟಾರ್, ನನ್ನ ಸ್ಟೈಲು ಬೇರೆನೇ, ನನ್ನ ಲುಕ್ಕು ಬೇರೇನೇ, ನನ್ನ ಹಾಗೆ ಯಾರು ಇಲ್ಲ ಅಂತಿದ್ದಾರೆ. ಸ್ಮೃತಿ ದರ್ಬಾರ್ ಹೀಗೆ ಮುಂದುವರೆಯಲಿ ಅನ್ನೋದೇ ನಮ್ಮೆಲ್ಲರ ಆಶಯ.
ಇದನ್ನೂ ಓದಿ: ವಿಂಡೀಸ್​​​ ವಿರುದ್ಧ ಸರಣಿ ಗೆಲುವು.. ಟೀಂ ಇಂಡಿಯಾಗೆ 5 ಸಿಹಿ ಸುದ್ದಿ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ