/newsfirstlive-kannada/media/media_files/2025/10/15/team-india-1-2025-10-15-08-06-49.jpg)
ರಾಷ್ಟ್ರ ರಾಜಧಾನಿಯಲ್ಲಿ ವಿಂಡೀಸ್​ ಪಡೆಯನ್ನ ಉಡೀಸ್​ ಮಾಡಿದ ಟೀಮ್​ ಇಂಡಿಯಾ ವಿಜಯ ಕಹಳೆ ಮೊಳಗಿಸಿದೆ. ಇಡೀ ಸರಣಿಯಲ್ಲಿ ಟೀಮ್​ ಇಂಡಿಯಾದ ಡಾಮಿನೇಟಿಂಗ್​ ಪರ್ಫಾಮೆನ್ಸ್​ಗೆ ಕೆರಬಿಯನ್​ ಪಡೆ ಕಂಗಾಲಾಗಿ ಬಿಡ್ತು. ಬ್ಯಾಟಿಂಗ್​-ಬೌಲಿಂಗ್​- ಫೀಲ್ಡಿಂಗ್​ ಮೂರೂ ವಿಭಾಗದಲ್ಲಿ ಟೀಮ್​ ಇಂಡಿಯಾದ ಕ್ಲಿನಿಕಲ್​ ಪರ್ಫಾಮೆನ್ಸ್​​ ಹಂಗಿತ್ತು.
2-0 ಅಂತರದಲ್ಲಿ ಕ್ಲೀನ್​ಸ್ವೀಪ್​.!
4ನೇ ದಿನದಾಟದಲ್ಲಿ ವಿಂಡೀಸ್​ ಬ್ಯಾಟರ್ಸ್​​ ಹೋರಾಟ ನಡೆಸಿದ ಪರಿಣಾಮ ಪಂದ್ಯ ಕೊನೆಯ ದಿನದವರೆಗೆ ಬಂದಿತ್ತು. ಆದ್ರೆ, ಟೀಮ್​ ಇಂಡಿಯಾ ಸುಲಭಕ್ಕೆ ಗೆಲ್ಲುತ್ತೆ ಅನ್ನೋದು ಸ್ವತಃ ವಿಂಡೀಸ್​ ಪ್ಲೇಯರ್ಸ್​​ಗೂ ಗೊತ್ತಿತ್ತು. ಅಂತಿಮ ದಿನದಾಟದಲ್ಲಿ ಭಾರತ ಗೆಲುವಿಗೆ 58 ರನ್​ಗಳ ಅಗತ್ಯತೆ ಇತ್ತು. ಈ ಗುರಿಯನ್ನ ಟೀಮ್​ ಇಂಡಿಯಾ ಸುಲಭವಾಗಿ ಬೆನ್ನತ್ತಿತು. ವಿಂಡೀಸ್​​ ಉಡೀಸ್​ ಮಾಡಿ 7 ವಿಕೆಟ್​ಗಳ ಭರ್ಜರಿ ಜಯದೊಂದಿಗೆ 2-0 ಅಂತರದಲ್ಲಿ ಸರಣಿ ಕ್ಲೀನ್​ಸ್ವೀಪ್​ ಮಾಡ್ತು.
ನಾಯಕನಾಗಿ ಮೊದಲ ಸರಣಿ ಗೆದ್ದ ಶುಭ್​ಮನ್
ಟೆಸ್ಟ್​ ಕ್ಯಾಪ್ಟನ್ ಆಗಿ​ ಶುಭ್​ಮನ್​ ಗಿಲ್ ತವರಿನಲ್ಲಿ​ ಶುಭಾರಂಭ ಮಾಡಿದ್ದಾರೆ. ವಿಂಡೀಸ್​ ಎದುರಿನ ಸರಣಿ ಗೆಲುವಿನೊಂದಿಗೆ ನಾಯಕನಾಗಿ ಮೊದಲ ಸರಣಿ ಜಯಿಸಿದ್ದಾರೆ. ನಾಯಕನಾದ ಫಸ್ಟ್​ ಟಾಸ್ಕ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ರು. ಆಂಗ್ಲರ ನಾಡಲ್ಲಿ ಗಿಲ್​ ನೇತೃತ್ವದ ಟೀಮ್​ ಇಂಡಿಯಾ 2-2 ಅಂತರದಲ್ಲಿ ಸರಣಿ ಸಮಬಲ ಸಾಧಿಸಿತ್ತು. ಇದೀಗ ತವರಿನಲ್ಲಿ ವಿಂಡೀಸ್​ ವಿರುದ್ಧ ಸರಣಿ ಕ್ಲೀನ್​ ಸ್ವೀಪ್​ನೊಂದಿಗೆ ಮೊದಲ ಟೆಸ್ಟ್​ ಸರಣಿ ಗೆಲ್ಲಿಸಿದ್ದಾರೆ. ನಾಯಕನಾಗಿ, ಬ್ಯಾಟ್ಸ್​​ಮನ್​ ಆಗಿ ಇಂಪ್ರೆಸ್ಸಿವ್​ ಪರ್ಫಾಮೆನ್ಸ್​​ ನೀಡಿ ಹೊಸ ಭರವಸೆ ಹುಟ್ಟು ಹಾಕಿದ್ದಾರೆ.
ಅಶ್ವಿನ್​ ಸ್ಥಾನಕ್ಕೆ ಕುಲದೀಪ್​​ ಪರ್ಫೆಕ್ಟ್​ ಫಿಟ್
ಆಫ್​​ ಸ್ಪಿನ್ನರ್​ ಅಶ್ವಿನ್​ ಇಲ್ಲದೇ ಬಹುಕಾಲದ ಬಳಿಕ ಟೀಮ್​ ಇಂಡಿಯಾ, ಭಾರತದಲ್ಲಿ ಆಡಿದ ಮೊದಲ ಸರಣಿಯಿದು. ಅಶ್ವಿನ್​ ಇರುವಷ್ಟು ದಿನ ಮ್ಯಾಚ್​ ವಿನ್ನರ್​ ಅನಿಸಿದ್ರು. ಇದೀಗ ಆ ಸ್ಥಾನವನ್ನ ಕುಲ್​ದೀಪ್​ ಯಾದವ್​ ಪರ್ಫೆಕ್ಟ್​ ಆಗಿ ತುಂಬಿದ್ದಾರೆ. ಎರಡೂ ಮ್ಯಾಚ್​ನಲ್ಲಿ ಸ್ಪಿನ್​ ಮ್ಯಾಜಿಕ್​ ಮಾಡಿದ ಕುಲ್​​ದೀಪ್​ ಬರೋಬ್ಬರಿ 12 ವಿಕೆಟ್​ ಬೇಟೆಯಾಡಿದ್ರು. ಈ ಮೂಲಕ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಚೈನಾಮನ್​ ಸ್ಪಿನ್ನರ್​ ನೆಕ್ಟ್ಸ್​ ಅಶ್ವಿನ್​​ ಅನ್ನೋ ಭರವಸೆಯನ್ನ ಹುಟ್ಟು ಹಾಕಿದ್ದಾರೆ.
ರಾಹುಲ್​- ಜೈಸ್ವಾಲ್​ ಜಬರ್ದಸ್ತ್​​ ಜುಗಲ್​​ಬಂದಿ
ಇಂಗ್ಲೆಂಡ್​ ಪ್ರವಾಸದಲ್ಲಿ ಮಿಂಚಿದ್ದ ಕೆ.ಎಲ್​ ರಾಹುಲ್​, ಯಶಸ್ವಿ ಜೈಸ್ವಾಲ್​ ವಿಂಡೀಸ್​ ಸರಣಿಯಲ್ಲೂ ಡಿಸೆಂಟ್​ ಸ್ಟಾರ್ಟ್​ ನೀಡಿದ್ರು. ಒಬ್ಬರಿಲ್ಲದಿದ್ರೆ ಮತ್ತೊಬ್ಬರು ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಿದ್ರು. ಮೊದಲ ಟೆಸ್ಟ್​ನಲ್ಲಿ ರಾಹುಲ್​ ಶತಕ ಸಿಡಿಸಿದ್ರೆ, 2ನೇ ಟೆಸ್ಟ್​ನಲ್ಲಿ ಜೈಸ್ವಾಲ್​ ಸೆಂಚೂರಿ ಬಾರಿಸಿದ್ರು. ಇಂಗ್ಲೆಂಡ್​ ಸರಣಿಯಲ್ಲಿ ಟೆಸ್ಟ್​ ಪಾಸಾಗಿದ್ದ ಓಪನರ್ಸ್​, ಭಾರತದಲ್ಲೂ ಉತ್ತಮ ಆಟವಾಡಿರೋದು ಟೀಮ್​ ಇಂಡಿಯಾದಲ್ಲಿ ಪಾಸಿಟಿವ್​ ಎನರ್ಜಿ ತಂದಿದೆ.
ಜಡೇಜಾ ಟೀಮ್​ ಇಂಡಿಯಾದ ರಿಯಲ್​ ಮ್ಯಾಚ್​ ವಿನ್ನರ್​
ವಯಸ್ಸಿಗೂ ಆಟಕ್ಕೂ ಸಂಬಂಧವಿಲ್ಲ ಅನ್ನೋದನ್ನ ರವಿಂದ್ರ ಜಡೇಜಾ ಮತ್ತೊಮ್ಮೆ ನಿರೂಪಿಸಿದ್ದಾರೆ. ಮೊದಲ ಟೆಸ್ಟ್​ನಲ್ಲಿ ಅಜೇಯ ಶತಕ ಸಿಡಿಸಿದ್ದ ಜಡೇಜಾ, 4 ವಿಕೆಟ್​ ಕಬಳಿಸಿದ್ರು. 2ನೇ ಟೆಸ್ಟ್​ ಪಂದ್ಯದಲ್ಲಿ 4 ವಿಕೆಟ್​​​ ಕಬಳಿಸಿ ಟೀಮ್​ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಈ ಮೂಲಕ 36ರ ಹರೆಯದಲ್ಲೂ ಟೀಮ್​ ಇಂಡಿಯಾ ರಿಯಲ್​ ಮ್ಯಾಚ್​ ವಿನ್ನರ್​ ನಾನೇ ಎಂಬ ಸಂದೇಶವನ್ನ ತನ್ನ ಆಟದಿಂದಲೇ ಜಡ್ಡು ತೋರಿಸಿದ್ದಾರೆ.
ಟೆಸ್ಟ್​ ಕ್ರಿಕೆಟ್​ನ ಫೈರ್​​ ಬ್ರ್ಯಾಂಡ್​​​ ವೇಗಿ ಸಿರಾಜ್
ಸ್ಪಿನ್ನರ್ಸ್​ಗೆ ಹೆಚ್ಚಿನ ನೆರವು ನೀಡೋ ಇಂಡಿಯನ್​ ಪಿಚ್​ಗಳಲ್ಲೂ ವೇಗಿ ಸಿರಾಜ್​ ದರ್ಬಾರ್​ ನಡೆಸಿದ್ರು. ತನ್ನ ಬೆಂಕಿ ಬೌಲಿಂಗ್​ನಿಂದಲೇ ಬ್ಯಾಟರ್​​​​ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ರು. 2 ಪಂದ್ಯದಿಂದ 10 ವಿಕೆಟ್​​ ಬೇಟೆಯಾಡಿದ ಸಿರಾಜ್​, 2025ರಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಹೆಚ್ಚು ವಿಕೆಟ್​ ಕಬಳಿಸಿದ ಸಾಧನೆಯನ್ನೂ ಮಾಡಿದ್ರು. ಒಂದರ್ಥದಲ್ಲಿ ಬೂಮ್ರಾಗಿಂತ ಸಿರಾಜೇ ಏಪೆಕ್ಟಿವ್​ ಬೌಲರ್​​​ ಅನಿಸಿದ್ದು ಸುಳ್ಳಲ್ಲ. ಅಷ್ಟು ಕರಾರುವಕ್​ ಆಗಿತ್ತು ಸಿರಾಜ್​ ಬೌಲಿಂಗ್​ ದಾಳಿ.
ಇಷ್ಟೇ ಅಲ್ಲ.. ಇದೇ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾಗಿದ್ದ ದೊಡ್ಡ ತಲೆನೋವಿಗೂ ಸ್ವಲ್ಪ ಮಟ್ಟಿಗೆ ಪರಿಹಾರ ಸಿಕ್ಕಿದೆ. ಇಂಗ್ಲೆಂಡ್​ ಸರಣಿಯಲ್ಲಿ ಕಂಪ್ಲೀಟ್​ ಫ್ಲಾಪ್​ ಆಗಿದ್ದ ಸಾಯಿ ಸುದರ್ಶನ್​, ವಿಂಡೀಸ್​ ಎದುರು ಭರವಸೆಯ ಆಟವಾಡಿದ್ದಾರೆ. ಇದ್ರಿಂದ 3ನೇ ಕ್ರಮಾಂಕದ ಬ್ಯಾಟಿಂಗ್​ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಕ್ಕಂತಾಗಿದೆ. ಒಟ್ಟಿನಲ್ಲಿ, ವಿಂಡೀಸ್​ ಎದುರಿನ ಒಂದು ಸರಣಿ ಗೆಲುವಿನೊಂದಿಗೆ ಟ್ರೋಫಿ ಮಾತ್ರವಲ್ಲ. ಟೀಮ್​ ಇಂಡಿಯಾಗೆ ಹಲವು ವಿಚಾರದಲ್ಲಿ ಪಾಸಿಟಿವ್​​ ರಿಸಲ್ಟ್​ ಕೂಡ ಸಿಕ್ಕಂತಾಗಿದೆ ಅಂದ್ರೆ ತಪ್ಪಾಗಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ