/newsfirstlive-kannada/media/media_files/2025/10/14/virat_kohli-2025-10-14-19-03-52.jpg)
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇವತ್ತು ಭಾರತಕ್ಕೆ ಮರಳಿದ್ದಾರೆ. ಅಕ್ಟೋಬರ್​ 19 ರಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆರಂಭವಾಗುವ ಹಿನ್ನೆಲೆಯಲ್ಲಿ ಅದಕ್ಕೂ ಮೊದಲೇ ತವರಿನ ನೆಲಕ್ಕೆ ಮರಳಿದ್ದಾರೆ.
ಟಿ20 ಹಾಗೂ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿರುವ ವಿರಾಟ್ ಕೊಹ್ಲಿ ಅವರು ಇವತ್ತು ಲಂಡನ್​ನಿಂದ ನೇರ ವಿಮಾನದ ಮೂಲಕ ದೆಹಲಿಯ ಏರ್​ಪೋರ್ಟ್​ಗೆ ಬಂದಿಳಿದಿದ್ದಾರೆ. ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವುದಕ್ಕೂ ಮುಂಚೆ ಸ್ಟಾರ್ ಬ್ಯಾಟ್ಸ್​ಮನ್​ ಭಾರತಕ್ಕೆ ಆಗಮಿಸಿದ್ದು ಶೀಘ್ರದಲ್ಲೇ ಟೀಮ್ ಇಂಡಿಯಾ ಆಟಗಾರರನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಕಳೆದ ನಾಲ್ಕು ತಿಂಗಳಿನಿಂದ ವಿರಾಟ್ ಕೊಹ್ಲಿ ಅವರು ಲಂಡನ್​ನಲ್ಲಿ ನೆಲೆಸಿದ್ದರು. ಅಲ್ಲಿ ಹೆಂಡತಿ ಅನುಷ್ಕಾ ಶರ್ಮಾ ಹಾಗೂ ಇಬ್ಬರು ಮಕ್ಕಳ ಜೊತೆ ಸಂತಸದಿಂದ ಕಾಲ ಕಳೆದಿದ್ದಾರೆ. ಅಕ್ಟೋಬರ್​​ 19 ರಿಂದ ಆಸ್ಟ್ರೇಲಿಯಾ ಜೊತೆ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಕೂಡ ಪ್ರಯಾಣಿಸಿದ್ದಾರೆ ಎಂದು ಹೇಳಲಾಗಿದೆ.
ಕಿಂಗ್ ಕೊಹ್ಲಿ ದೆಹಲಿಯ ಏರ್​ಪೋರ್ಟ್​ಗೆ ಬಂದು ಇಳಿಯುತ್ತಿದ್ದಂತೆ ಫ್ಯಾನ್ಸ್​ ಫೋಟೋ, ಸೆಲ್ಫಿಗಾಗಿ ಮುಗಿ ಬಿದ್ದಿದ್ದರು. ಆದರೆ ವಿರಾಟ್ ಕೊಹ್ಲಿ ಅವರು ಯಾವುದಕ್ಕೂ ಪ್ರತಿಕ್ರಿಯಿಸದಂತೆ ಫುಲ್ ಸೈಲೆಂಟ್ ಆಗಿಯೇ ಏರ್​ಪೋರ್ಟ್​ನಿಂದ ಹೊರಟರು. ಸದ್ಯ ವಿರಾಟ್ ಕೊಹ್ಲಿ ಲಂಡನ್​ನಿಂದ ಭಾರತಕ್ಕೆ ಬಂದಿರುವ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ