Advertisment

ನಿಮ್ಮ ಮಗುವಿನ ಹೆಸರಲ್ಲಿ instagram ಖಾತೆ ಇದ್ಯಾ? ಹೊಸ ಗೈಡ್​ಲೈನ್ಸ್..!

ಮೆಟಾ ಕಂಪನಿಯು ತನ್ನ ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಸಂಬಂಧಿತ ಮಾನಸಿಕ ಆರೋಗ್ಯ ಕಾಳಜಿಗಳನ್ನು ನಿರ್ವಹಿಸುವ ಬಗ್ಗೆ ಟೀಕೆಗಳನ್ನ ಎದುರಿಸಿತ್ತು. ನಂತರ ಈ ಬದಲಾವಣೆಗಳು ತಂದಿದೆ.

author-image
Ganesh Kerekuli
ಮಕ್ಕಳಿಗೆ ಇನ್​​ಸ್ಟಾಗ್ರಾಮ್ ನಿರ್ಬಂಧ.. Meta ಬಳಕೆ ಇನ್ಮೇಲೆ ಸುಲಭ ಇಲ್ಲ..
Advertisment

ಮೆಟಾ ಸಂಸ್ಥೆ ಹದಿಹರೆಯದವರ ಇನ್‌ಸ್ಟಾಗ್ರಾಮ್‌ (instagram) ಖಾತೆಗಳಿಗೆ ಹೊಸ ನಿಯಮ ಜಾರಿಗೆ ತರುತ್ತಿದೆ. ಹದಿಹರೆಯದ ಬಳಕೆದಾರರು ಸುರಕ್ಷಿತ ವಿಷಯವನ್ನು ನೋಡಬಹುದೆಂದು ಖಚಿತಪಡಿಸಿಕೊಳ್ಳಲು Instagram ಈಗ ತನ್ನ ವೇದಿಕೆಯಲ್ಲಿ PG-13 ಚಲನಚಿತ್ರ ರೇಟಿಂಗ್ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುತ್ತಿದೆ.

Advertisment

ಮೆಟಾದ ನಿರ್ಧಾರವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಬಳಕೆದಾರರನ್ನು ಸ್ವಯಂಚಾಲಿತವಾಗಿ 13+ ಸೆಟ್ಟಿಂಗ್‌ನಲ್ಲಿ ಇರಿಸುತ್ತದೆ, ಪೋಷಕರ ಅನುಮತಿಯಿಲ್ಲದೆ ಅವರು ಅದನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಈ ಹೊಸ ನವೀಕರಣವು ಪೋಷಕರಿಗೆ ಹೆಚ್ಚಿನ ನಿಯಂತ್ರಣ ನೀಡುತ್ತದೆ.

ಇದನ್ನೂ ಓದಿ: ಕರೆಕ್ಟ್​ ಆಗಿ ಈ 5 ಟಿಪ್ಸ್​ ಫಾಲೋ ಮಾಡಿದ್ರೆ ದೇಹದ ತೂಕ ಬೇಗನೇ ಇಳಿಸಬಹುದು.. ಹೇಗೆ?

ಮಕ್ಕಳು ಇನ್​ಸ್ಟಾ ಬಳಕೆಗೆ ಪೋಷಕರ ಅನುಮತಿ ಬೇಕಾಗುತ್ತದೆ. ಇದು ತೀವ್ರ ಹಿಂಸೆ, ಲೈಂಗಿಕ ನಗ್ನತೆ ಮತ್ತು ಗ್ರಾಫಿಕ್ ಮಾದಕವಸ್ತು ಬಳಕೆಯಂತಹ ವಿಷಯಗಳಿಂದ ದೂರ ಇಡುತ್ತದೆ. ಲೈಂಗಿಕತೆ, ಮಾದಕ ದ್ರವ್ಯಗಳು ಅಥವಾ ಅಪಾಯಕಾರಿ ಸಾಹಸಗಳ ಚಿತ್ರಣಗಳು ತೋರಿಸುವುದಿಲ್ಲ ಎಂದು ಮೆಟಾ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

Advertisment

ಮೆಟಾ ಕಂಪನಿಯು ತನ್ನ ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಸಂಬಂಧಿತ ಮಾನಸಿಕ ಆರೋಗ್ಯ ಕಾಳಜಿಗಳನ್ನು ನಿರ್ವಹಿಸುವ ಬಗ್ಗೆ ಟೀಕೆಗಳನ್ನ ಎದುರಿಸಿತ್ತು. ನಂತರ ಈ ಬದಲಾವಣೆಗಳು ತಂದಿದೆ. ಯುಎಸ್, ಯುಕೆ, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ಈ ನಿಯಮ ಜಾರಿಯಾಗಿದೆ. ಮುಂದಿನ ವರ್ಷ ಜಾಗತಿಕವಾಗಿ ಈ ಪ್ಲಾನ್ ಅನುಷ್ಠಾನಗೊಳ್ಳಲಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

instagram
Advertisment
Advertisment
Advertisment