/newsfirstlive-kannada/media/media_files/2025/10/14/health_fat-2025-10-14-16-26-16.jpg)
ಕೆಲವರು ದೇಹದ ತೂಕ ಇಳಿಸಿಕೊಳ್ಳುವಾಗ ತಪ್ಪು ಮಾಡುತ್ತಾರೆ. ಇದರಿಂದ ಅವರು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುವ ಸಂಭವಗಳು ಇರುತ್ತವೆ. ದೇಹದಲ್ಲಿ ಹೆಚ್ಚಾಗಿರುವ ಬೊಜ್ಜು ಅನ್ನು ಕರಗಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ದೇಹ ಮಾತ್ರ ಇದ್ದಂಗೆ ಇರುತ್ತದೆ. ಇದಕ್ಕಾಗಿ ಇಲ್ಲಿ ಟಿಪ್ಸ್​ ನೀಡಲಾಗಿದ್ದು ಇವುಗಳನ್ನು ಸರಿಯಾಗಿ ಫಾಲೋ ಮಾಡಿದರೆ, ಬೇಗನೇ ದೇಹದ ತೂಕ ಕಡಿಮೆ ಮಾಡಬಹುದು.
ದೇಹದ ಭಾರ ಇಳಿಸಿಕೊಳ್ಳಬೇಕು ಎಂದರೆ ಮೊದಲು ನೀವು ಹೆಚ್ಚು ಪ್ರೋಟಿನ್ ಇರುವಂತಹ ತರಕಾರಿಗಳನ್ನು ತಿನ್ನಬೇಕು. ಇಂತಹ ತರಕಾರಿಗಳನ್ನು ತಿನ್ನುವುದರಿಂದ ಇವು ಹೆಚ್ಚು ಸಮಯ ಹೊಟ್ಟೆ ತುಂಬಿದಂತೆ ಇರುತ್ತದೆ. ಇದರಿಂದ ನಿಮಗೆ ಪದೇ ಪದೇ ಹಸಿವು ಆಗುವುದಿಲ್ಲ. ಹೀಗಾಗಿ ಪ್ರತಿ ಊಟದಲ್ಲಿ ಆದಷ್ಟು ಹೆಚ್ಚು ಪ್ರೋಟಿನ್ ಇರುವಂತಹ ತರಕಾರಿಗಳನ್ನು ಉಪಯೋಗಿಸಬೇಕು.
ಸಕ್ಕರೆ, ಪ್ಯಾಟ್ ಇರುವಂತಹ ಫುಡ್​ ತಿನ್ನುವುದನ್ನು ಬಿಡಬೇಕು. ನಮ್ಮ ದೇಹಗಳಿಗೆ ಸಕ್ಕರೆ, ಪ್ಯಾಟ್ ಇರುವಂತಹ ಫುಡ್ ಅಪಾಯಕಾರಿ. ಹೇಗೆಂದರೆ ಇವುಗಳನ್ನು ಎಷ್ಟು ತಿನ್ನುತ್ತ ಹೋಗುತ್ತೇವೋ ಅಷ್ಟು ದೇಹ ಭಾರವಾಗುತ್ತ ಹೋಗುತ್ತದೆ. ಯಾವಾಗಲಾದರೂ ಒಮ್ಮೆ ತಿಂದರೆ ಪರವಾಗಿಲ್ಲ. ನಿತ್ಯ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಅಲ್ಲ. ಕ್ರೀಮ್​, ರಿಚ್​ ಫುಡ್, ಎಣ್ಣೆ ಪದಾರ್ಥಗಳು, ಸಕ್ಕರೆ ಪದಾರ್ಥಗಳನ್ನು ಆದಷ್ಟು ದೂರ ಇಡುವುದರಿಂದ ತೂಕ ಕಡಿಮೆ ಮಾಡಬಹುದು.
ಇದನ್ನೂ ಓದಿ:ಕಿಚನ್ ರೂಮ್ ಪಳಪಳ ಹೊಳೆಯುವಂತೆ ಮಾಡಬೇಕಾ.. ಅದಕ್ಕೆ ಇಲ್ಲಿವೆ ಕೆಲ ಟಿಪ್ಸ್​!
/filters:format(webp)/newsfirstlive-kannada/media/media_files/2025/10/14/health_fat_woman-2025-10-14-16-26-26.jpg)
ದಿನಕ್ಕೆ ಎರಡ್ಮೂರು ಬಾರಿ ಊಟ ಮಾಡಬೇಕು. ಈ ಮೂರು ಊಟದ ನಡು ನಡುವೆ ಸ್ನ್ಯಾಕ್ಸ್​, ಕರಿದ ಪದಾರ್ಥ ಇಂತಹವುಗಳನ್ನು ತಿನ್ನಲೇಬಾರದು. ಇಂತಹ ಸಮಯದಲ್ಲಿ ನಿಮಗೆ ಹಸಿವು ಆಗುತ್ತಿದ್ದರೇ ಹಣ್ಣು ಅಥವಾ ಜ್ಯೂಸ್​ ಸ್ವಲ್ಪ ಕುಡಿಯುವುದು ಉತ್ತಮ. ಏಕೆಂದರೆ ಇದು ಜೀರ್ಣ ಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಊಟ ಮಾಡುವಾಗ, ಯಾವುದನ್ನೇ ಆಗಲಿ ತಿನ್ನುವಾಗ ನೆಮ್ಮದಿಯಾಗಿ ತಿನ್ನಬೇಕು. 15 ನಿಮಿಷ ತೆಗೆದುಕೊಂಡರೂ ಪರವಾಗಿಲ್ಲ ನೆಮ್ಮದಿಯಾಗಿ ಊಟ ಮಾಡಿ. ಇದು ಹೆಚ್ಚು ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ. ಸಣ್ಣ ಊಟವೂ ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ. ಇದು ನಿಮಗೆ ಆರೋಗ್ಯಕರವಾಗಿರುತ್ತದೆ.
ದೇಹದ ಭಾರ ಇಳಿಸಲು ತಿನ್ನುವ ಎಲ್ಲ ಆಹಾರವನ್ನ ಒಂದೇ ಸಲಕ್ಕೆ ಬಿಡುವುದಲ್ಲ. ನೀವು ಏನೇ ತಿಂದರೂ, ಯಾವಾಗಲೇ ತಿಂದರೂ ಅತಿಯಾಗಿ ಸೇವಿಸದೇ, ನಿಯಮಿತವಾಗಿ ತೆಗೆದುಕೊಂಡರೆ ದೇಹ ಆರೋಗ್ಯವಾಗಿರುತ್ತದೆ. ಇದು ಪಾಲಿಸುವುದು ನಿಮಗೆ ತೊಂದರೆ ಅನಿಸಿದರೂ, ನಡು ನಡುವೆ ಹಸಿವು ಆದರೂ ಇದು ನಿಮ್ಮ ದೇಹದ ತೂಕವನ್ನು ಇಳಿಸಲು ಬಹು ಉಪಕಾರಿಯಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us