Advertisment

ಕಿಚನ್ ರೂಮ್ ಪಳಪಳ ಹೊಳೆಯುವಂತೆ ಮಾಡಬೇಕಾ.. ಅದಕ್ಕೆ ಇಲ್ಲಿವೆ ಕೆಲ ಟಿಪ್ಸ್​!

ಕಿಚನ್​ ರೂಮಿನ ಗೋಡೆಯಿಂದ ಅಡುಗೆ ಮಾಡುವ ಪಾತ್ರೆ, ಧಾನ್ಯ ಹಾಕಿರುವ ಡಬ್ಬಗಳು, ಅಡುಗೆ ಎಣ್ಣೆ ಬಾಟಲ್​ ಸೇರಿ ಎಲ್ಲವೂ ಜಿಡ್ಡುಗಟ್ಟಿರುತ್ತವೆ. ಹೀಗಾಗಿ ಇವುಗಳನ್ನ ಶುಚಿಗೊಳಿಸುವುದು ತುಂಬಾ ಕಷ್ಟ..ಕಷ್ಟ. ಅದಕ್ಕೆ ಇಂತಹ ಕೆಲಸಗಳನ್ನು ಅತ್ಯಂತ ಸುಲಭವಾಗಿ ಮಾಡುವಂತಹ ವಿಧಾನಗಳು ಇಲ್ಲಿವೆ.

author-image
Bhimappa
kitchen_room_New
Advertisment

ಅಡುಗೆ ಮನೆಯಲ್ಲಿನ ವಸ್ತುಗಳನ್ನು ಸ್ವಚ್ಛಗೊಳಿಸಬೇಕು ಎಂದರೆ ದೊಡ್ಡ ಯುದ್ಧವೇ ಮಾಡಿದಂತೆ ಆಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಏಕೆಂದರೆ ಕಿಚನ್​ ರೂಮಿನ ಗೋಡೆಯಿಂದ ಅಡುಗೆ ಮಾಡುವ ಪಾತ್ರೆ, ಧಾನ್ಯ ಹಾಕಿರುವ ಡಬ್ಬಗಳು, ಅಡುಗೆ ಎಣ್ಣೆ ಬಾಟಲ್​ ಸೇರಿ ಎಲ್ಲವೂ ಜಿಡ್ಡುಗಟ್ಟಿರುತ್ತವೆ. ಹೀಗಾಗಿ ಇವುಗಳನ್ನ ಶುಚಿಗೊಳಿಸುವುದು ತುಂಬಾ ಕಷ್ಟ..ಕಷ್ಟ. ಅದಕ್ಕೆ ಇಂತಹ ಕೆಲಸಗಳನ್ನು ಅತ್ಯಂತ ಸುಲಭವಾಗಿ ಮಾಡುವಂತಹ ವಿಧಾನಗಳ ಬಗ್ಗೆ ಇಂದು ತಿಳಿದುಕೊಳ್ಳೋಣ. 

Advertisment

ಬೇಕಿಂಗ್ ಸೋಡಾ: ಅಡುಗೆ ಮನೆಯ ಗೋಡೆ ಮೇಲೆ ಜಿಡ್ಡು ಇರೋ ಕಲೆಗಳು ಇದ್ದರೇ ಅವುಗಳನ್ನು ಸ್ವಚ್ಛ ಮಾಡಲು ಉಜ್ಜುವ ಬದಲು ಬೇಕಿಂಗ್ ಸೋಡಾಗೆ ನಿಂಬೆ ರಸ ಸೇರಿಸಿ ಪೇಸ್ಟ್​ ಮಾಡಿ ಜಿಡ್ಡಿಗೆ ಹಚ್ಚಿ. 30 ನಿಮಿಷ ಹಾಗೇ ಬಿಟ್ಟು ನಂತರ ಸ್ವಚ್ಛಗೊಳಿಸಿ. ಪಾತ್ರೆ ತೊಳೆಯುವ ಲಿಕ್ವಿಡ್​ ಅನ್ನು ಉಗುರು ಬೆಚ್ಚನ ನೀರಿನಲ್ಲಿ ಹಾಕಿ ಗೋಡೆ ಸ್ವಚ್ಛ ಮಾಡಿ ಫಲಿತಾಂಶ ಹೇಗಿರುತ್ತದೆ ಅಂತ.

ವೆನಿಗರ್​: ಜಿಡ್ಡು ಹಿಡಿದ ಕಿಚನ್ ರೂಮ್​ ಶುಚಿಗೊಳಿಸಲು ವೆನಿಗರ್ ಬಳಕೆ ಮಾಡಬಹುದು. ವೆನಿಗರ್ ಅನ್ನು ನೀರಿನಲ್ಲಿ ಮುಶ್ರಣ ಮಾಡಿ ಅದನ್ನು ಒಂದು ಸ್ಪ್ರೇ ಬಾಟಲ್​ ಒಳಗೆ ಹಾಕಬೇಕು. ನಂತರ ಅದನ್ನು ಗೋಡೆ ಮೇಲೆ ಸ್ಪ್ರೇ ಮಾಡಬೇಕು. 20 ನಿಮಿಷಗಳ ಕಾಲ ಬಿಟ್ಟು ಸ್ಕ್ರಬ್ಬರ್​ನಿಂದ ಕ್ಲೀನ್ ಮಾಡಿದರೆ ಎಲ್ಲ ಜಿಡ್ಡಿನ ಕೊಳೆ ಮಾಯಾ.

ಇದನ್ನೂ ಓದಿ:ನೀವು ಆರೋಗ್ಯವಾಗಿರಬೇಕಾ.. ಹಾಗಾದ್ರೆ ಊಟ ಆದ್ಮೇಲೆ ಯಾರೂ ಹೀಗೆ ಮಾಡಬೇಡಿ..!

Advertisment

kitchen_room

ಬಿಸಿ ಮಾಡಿ ಗೋಡೆ ಕೊಳೆ ಕ್ಲೀಯರ್ ಮಾಡಿ: ಗೋಡೆಗೆ ಹೆಚ್ಚು ಜಿಡ್ಡು ಇದ್ದರೆ ಅದನ್ನು ಹೋಗಿಸುವುದು ಕಷ್ಟ. ಆಗ ಜಿಡ್ಡು ಇರುವುದರ ಮೇಲೆ ದೊಡ್ಡ ಕಾಗದ ಅಂಟಿಸಿ, ಬಳಿಕ ಅದನ್ನು ಏರ್​ ಡ್ರೈಯರ್ ಅಥವಾ ಐರನ್​ ಬಾಕ್ಸ್​​ನಿಂದ ಕಾಗದ ಬಿಸಿ ಮಾಡಿದರೆ ಜಿಡ್ಡು ಕೊಳೆ ಎಲ್ಲ ಕಾಗದಕ್ಕೆ ಅಂಟಿಕೊಳ್ಳುತ್ತದೆ. ಆ ಮೇಲೆ ಸ್ಕ್ರಬ್ಬರ್​ಗೆ ಡಿಟರ್​ಜೆಂಟ್ ಅಥವಾ ಡಿಷ್​ ವಾಷಿಂಗ್ ಲಿಕ್ವಿಡ್​ ಹಾಕಿ ಗೋಡೆ ಶುಚಿ ಮಾಡಿದರೆ ಕೊಳೆ ನಾಶ.  

ಅಡುಗೆ ಮನೆಯಲ್ಲಿರುವ ಪಾತ್ರೆ, ಡಬ್ಬಗಳನ್ನು ಕ್ಲೀನ್ ಮಾಡಬೇಕು ಎಂದರೆ ಬಿಸಿ ನೀರಿನಲ್ಲಿ ಡಿಷ್​ ವಾಷಿಂಗ್ ಲಿಕ್ವಿಡ್​ ಬೆರೆಸಬೇಕು. ಇದರಲ್ಲಿ ಕೆಲ ಸಮಯ ಪಾತ್ರೆ, ಡಬ್ಬಗಳನ್ನು ಇಡಬೇಕು. ಬಳಿಕ ಸ್ಕ್ರಬ್ಬರ್​ ಅಥವಾ ಸ್ಪಾಂಜ್​ನಿಂದ ಕ್ಲೀನ್ ಮಾಡಿದರೆ ಸಾಕು. ಎಲ್ಲ ಪಾತ್ರೆಗಳು ಪಳಪಳ ಎನ್ನುತ್ತವೆ. 

ಹಾಗೇ ಹಿತ್ತಳೆ ಹಾಗೂ ಕಂಚಿನ ಪಾತ್ರೆಗಳನ್ನು ಸ್ವಚ್ಛಗೊಳಿಸಬೇಕು ಎಂದರೆ ವೇಸ್ಟ್​ ನಿಂಬೆ ಹಣ್ಣಿಗೆ ಉಪ್ಪು ಸವರಿ ಈ ಪಾತ್ರೆಗಳ ಮೇಲೆ ಉಜ್ಜಿದರೆ ಹೊಸದು ರೀತಿಯಲ್ಲಿ ಹಿತ್ತಳೆ ಹಾಗೂ ಕಂಚಿನ ಪಾತ್ರೆ ಕಾಣಿಸುತ್ತವೆ. ಹುಣಸೆ ಹಣ್ಣು- ಉಪ್ಪು, ವೆನಿಗರ್​ ಇವುಗಳಿಂದಲೂ ಕಂಚಿನ, ಹಿತ್ತಳೆಯ ಪಾತ್ರೆಗಳನ್ನ ಶುಚಿಗೊಳಿಸಬಹುದು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Skin Health Health Tips Kitchen Room
Advertisment
Advertisment
Advertisment