/newsfirstlive-kannada/media/media_files/2025/09/22/health_sleep_food-2025-09-22-18-32-42.jpg)
ಊಟ ಮಾಡುವುದು ನಮ್ಮ ನಿತ್ಯದ ಕಾರ್ಯಗಳಲ್ಲಿ ಒಂದಾಗಿದೆ. ದಿನಕ್ಕೆ ಮೂರು ಬಾರಿ ಒಳ್ಳೆಯ ಆಹಾರವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. ಇತ್ತೀಚೆಗೆ ಮೊಬೈಲ್, ಕಂಪ್ಯೂಟರ್​ಗಳು ಬಂದಿದ್ದರಿಂದ ಕೆಲಸ ಕಡಿಮೆಯಾಗಿದೆ. ಕುಳಿತಲ್ಲೇ ಸಾಕಷ್ಟು ಕೆಲಸಗಳು ಮುಗಿದು ಹೋಗುತ್ತಿವೆ. ಆದರೆ ನಾವು ತಿಂದ ಊಟ ಸರಿಯಾಗಿ ಜೀರ್ಣ ಆಗುತ್ತಿಲ್ಲ. ಇದರಿಂದ ಹಲವಾರು ಕಾಯಿಲೆ, ರೋಗಗಳು ಬರುತ್ತಿವೆ. ಹಾಗೇ ನಾವು ಯಾವಾಗಲೇ ಆಗಲಿ ಅಂದರೆ ಬೆಳಗ್ಗೆ, ಮಧ್ಯಹ್ನಾ ಅಥವಾ ರಾತ್ರಿ ಊಟ ಮಾಡಿದ ಕೂಡಲೇ ಮಲಗಬಾರದು. ಯಾಕೆ ಗೊತ್ತಾ?.
ರಾತ್ರಿ ಎಲ್ಲಿಗೋ ಹೋಗಿ ಅಥವಾ ಕಚೇರಿಯಿಂದ ಲೇಟ್​ ಆಗಿ ಬಂದು ಊಟ ಮಾಡಿ ಹಾಗೇ ಮಲಗಿಕೊಳ್ಳಬಾರದು. ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗಬೇಕು ಎಂದರೆ ಊಟ ಆದ್ಮೇಲೆ ವಾಕ್ ಮಾಡಬೇಕು. ನಿತ್ಯವೂ ಊಟ ಮಾಡಿದ ತಕ್ಷಣ ಮಲಗುತ್ತಿದ್ದರೇ ಅದನ್ನು ತಪ್ಪಿಸಿ. ವಾಕ್ ಮಾಡುವುದು ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ಅನಾರೋಗ್ಯಕ್ಕೆ ತುತ್ತಾಗುವುದು ಗ್ಯಾರಂಟಿ.
ಊಟ ಮಾಡಿದಾಗ ದೇಹದಲ್ಲಿ ಜೀರ್ಣ ಕ್ರಿಯೆ ಆರಂಭವಾಗುತ್ತದೆ. ಆದ್ರೆ ತಕ್ಷಣ ಮಲಗಿಕೊಂಡರೆ ಜೀರ್ಣ ಕ್ರಿಯೆಗೆ ಅಡ್ಡಿಯಾಗುತ್ತದೆ. ಇದರಿಂದ ಹೊಟ್ಟೆ ನೋವು ಬರುತ್ತದೆ. ದೇಹದಲ್ಲಿ ಹೊಟ್ಟೆ ಭಾಗ ಭಾರವಾದಂತೆ ಆಗುತ್ತದೆ. ಅಥವಾ ಗ್ಯಾಸ್​ಸ್ಟ್ರಿಕ್​ಗೆ ಕಾರಣವಾಗಬಹುದು. ನಮಗೆ ಊಟ ಸರಿಯಾಗಿ ಜೀರ್ಣ ಆಗದಿದ್ರೆ ರಕ್ತದಲ್ಲಿ ಸಕ್ಕರೆ ಮಟ್ಟ ಏರುಪೇರು ಆಗಿ ಶುಗರ್​ ಹೆಚ್ಚುವ ಸಂಭವವಿರುತ್ತದೆ.
ಇದನ್ನೂ ಓದಿ: ಮುಖದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ.. ಈ ಟಿಪ್ಸ್​ ಫಾಲೋ ಮಾಡ್ತಿದ್ದೀರಾ..?
ನಿದ್ದೆ ಮಾಡುವುದಕ್ಕೂ ಸರಿಯಾದ ಯೋಜನೆ ಮಾಡಿಕೊಳ್ಳಬೇಕು. ಊಟ ತಿಂದು ಹೇಗೆಂದರೆ ಹಾಗೆ ಬೆಡ್ ಮೇಲೆ ಮಲಗುವುದರಿಂದ ನಮ್ಮ ನಿದ್ದೆಯೂ ದುರ್ಬಲವಾಗುತ್ತದೆ. ಅಂದರೆ ಸರಿಯಾದ ನಿದ್ದೆ ಆಗುವುದಿಲ್ಲ. ಜೀರ್ಣವಾಗದ ಊಟ ಹೊಟ್ಟೆಯಲ್ಲಿದ್ರೆ ಎದೆಯುರಿ ಕಾಣಿಸುತ್ತದೆ. ಹೊಟ್ಟೆ ಉಬ್ಬುವಿಕೆಯಿಂದ ಸುಸ್ತು ಆದಂತೆ ಆಗುತ್ತದೆ. ಅಜೀರ್ಣತೆ ಕಾಡುತ್ತದೆ. ಇವುಗಳಿಂದ ನಮ್ಮ ನಿದ್ದೆ ಮೊದಲಿನಂತೆ ಇರುವುದಿಲ್ಲ. ಇದು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.
ಮನುಷ್ಯಗೆ ನಿದ್ದೆ ಇಲ್ಲ ಎಂದರೆ.. ಮಾಡುವ ಕೆಲಸದಲ್ಲಿ ಆಸಕ್ತಿ ಕಳೆದು ಹೋಗುತ್ತದೆ. ದೇಹ ಭಾರವಾದಂತೆ ಆಗುತ್ತದೆ. ಮೈ, ಕೈ ನೋವು ಕಾಣಿಸುತ್ತದೆ. ಯಾರೇ ಮಾತನಾಡಿಸಿದರೂ ನಗ್ಲೈಟ್​ ಆಗಿ ಮಾತನಾಡುತ್ತೇವೆ. ಇದರಿಂದ ಮನಸಿಗೆ ಕಿರಿಕಿರಿ, ಆಯಾಸಗಳು ಉದ್ಭವಿಸುತ್ತವೆ. ಹೀಗಾಗಿ ನಿತ್ಯ ಸರಿಯಾದ ಸಮಯಕ್ಕೆ ಊಟ ಮಾಡಿ, ಆದರೆ ಊಟದ ತಕ್ಷಣವೇ ಮಲಗುವುದು ಬೇಡ. ಆರೋಗ್ಯ ನಮಗೆ ಗೊತ್ತಿಲ್ಲದೇ ನಮ್ಮ ಬಳಿ ಇರೋ ಶ್ರೀಮಂತಿಕೆ ಆಗಿದೆ. ಅದನ್ನು ಕಾಪಾಡಿಕೊಂಡು ಹೋದರೆ ದೀರ್ಘಾಯುಷ್ಯ ಗ್ಯಾರಂಟಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ