/newsfirstlive-kannada/media/media_files/2025/09/19/healt_face_tips-2025-09-19-17-15-23.jpg)
ಮುಖಕ್ಕೆ ಯಾವಾಗಲೂ ಅತ್ಯುತ್ತಮ ಫೇಸ್​ವಾಶ್ ಅಥವಾ ಸೂಕ್ತವಾದ ಕ್ಲೆನ್ಸರ್‌ನಿಂದ ಸರಿಯಾಗಿ ಸ್ವಚ್ಛಗೊಳಿಸಬೇಕು. ಏಕೆಂದರೆ ಮುಖದ ಆರೋಗ್ಯ ಚೆನ್ನಾಗಿರಬೇಕೆಂದರೆ ಬೆಳಗ್ಗೆ ಹಾಗೂ ರಾತ್ರಿ ಟೈಮ್​ನಲ್ಲೂ ಸ್ವಚ್ಛಗೊಳಿಸಿದರೆ ಒಳ್ಳೆದು. ಹೊಸ ಉತ್ಪನ್ನಗಳನ್ನ ಮುಖಕ್ಕೆ ಬಳಸುವ ಮೊದಲು ನಿಮ್ಮ ದೇಹದ ಬೇರೆ ಭಾಗಕ್ಕೆ ಅದನ್ನು ಉಪಯೋಗಿಸಿ, ಫಲಿತಾಂಶ ನೋಡಿದ ನಂತರ ಬಳಸಿ. ವೈದ್ಯರ ಸಲಹೆಯು ಮುಖ್ಯ. ಇದರ ನಡುವೆ ಮುಖದ ಕಾಂತಿ ಕಾಪಾಡುವುದ ಬಗ್ಗೆ ಕೆಲ ಟಿಪ್ಸ್​ ಇಲ್ಲಿವೆ.
ನಮ್ಮ ದಿನಚರಿಯಲ್ಲಿ ಆರೋಗ್ಯಕರ (Healty) ಚರ್ಮ (skin care) ಕಾಪಾಡಿಕೊಳ್ಳುವುದು ಅತ್ಯಂತ ಇಂಪಾರ್ಟೆಂಟ್​. ಹಾಗಾಗಿ ಮುಖವನ್ನ ತಣ್ಣೀರಲ್ಲಿ ತೊಳೆಯಬೇಕು. ಬಿಸಿ ನೀರು ಅತಿಯಾಗಿ ಉಪಯೋಗಿಸಬಾರದು. ನಗರ ಪ್ರದೇಶಗಳಲ್ಲಿ ಧೂಳಿನ ಕಣಗಳು ಚರ್ಮದ ಮೇಲೆ ಗಂಭೀರವಾಗಿ ಪರಿಣಾಮ ಬೀಳುವುದರಿಂದ ಮುಖದ ಬಗ್ಗೆ ಹೆಚ್ಚು ಕಾಳಜಿ ಹೊಂದಿರಬೇಕು. ವಾಹನಗಳಲ್ಲಿ ತೆರಳುವಾಗ ಬಟ್ಟೆಯಿಂದ ಮುಖ ಕವರ್ ಮಾಡಿಕೊಳ್ಳಿ.
ನಮ್ಮ ದೇಹದ ಚರ್ಮದ ಪ್ರಕಾರ ನಿರ್ಲಕ್ಷಿಸುವುದು ಹಾನಿಗೆ ಕಾರಣವಾಗಬಹುದು. ನಿಮ್ಮದು ಒಣ ಚರ್ಮವೋ, ಆಯಿಲ್​ ಚರ್ಮವೋ ಅಥವಾ ನಾರ್ಮಲ್ ಚರ್ಮವೋ ಎಂಬುದನ್ನು ತಿಳಿದುಕೊಂಡಿರಬೇಕು. ಆಯಿಲ್ ಚರ್ಮ ಆಗಿದ್ದರೇ ತುಂಬಾ ಜಾಗೃತಿಯಿಂದ ಇರಬೇಕು. ಅದಾದ ನಂತರವೇ ಅದಕ್ಕೆ ಸರಿಯಾಗಿ ಹೊಂದುವ ಫೇಸ್​ವಾಶ್, ಕ್ಲೆನ್ಸರ್ ಹಾಗೂ ಮೇಕಪ್ ಉತ್ಪನ್ನಗಳನ್ನು ಬಳಸಬೇಕು.
ಉತ್ತಮದಾಯಕ ಪೇಸ್​ವಾಶ್​ ಅಥವಾ ಸೂಕ್ತವಾದ ಕ್ಲೆನ್ಸರ್​ನಿಂದ ಮೃದುವಾಗಿ ಮುಖವನ್ನ ತೊಳೆಯಬೇಕು. ಪದೇ ಪದೇ ತಣ್ಣೀರಲ್ಲಿ ತೊಳೆಯಲು ಸಾಧ್ಯ ಇಲ್ಲ ಎಂದರೆ ಬೆಳಗ್ಗೆ ಮತ್ತು ರಾತ್ರಿ ಈ ಎರಡೂ ಸಮಯದಲ್ಲಿ ಸ್ವಚ್ಛಗೊಳಿಸಿದರೆ ಸಾಕು. ಮುಖ ತೊಳೆಯುವ ಮೊದಲು ಕೈಗಳು ಸ್ವಚ್ಛವಾಗಿರಬೇಕು. ದಿನ ಪೂರ್ತಿ ಎಲ್ಲೆಂದರಲ್ಲಿ ಸುತ್ತಿರುತೀರಾ ಧೂಳುಗಳಿಂದ ಕೈ ಕೊಳೆಯಾಗಿರುತ್ತದೆ. ಹಾಗಾಗಿ ಮೊದಲೇ ಕೈ ಸ್ವಚ್ಚವಾಗಿರಬೇಕು.
/filters:format(webp)/newsfirstlive-kannada/media/media_files/2025/09/19/healt_face-2025-09-19-17-15-37.jpg)
ಮುಖವನ್ನು ಹೆಚ್ಚು ತೊಳೆಯುವುದರಿಂದ ಚರ್ಮ ತನ್ನ ನೈಸರ್ಗಿಕ ಎಣ್ಣೆಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ತೇವಾಂಶವನ್ನು ಉಳಿಸಿಕೊಳ್ಳಲು ಹೆಚ್ಚು ಎಣ್ಣೆ ಉತ್ಪಾದಿಸುತ್ತದೆ. ಮುಖವನ್ನು ಸ್ವಚ್ಛಗೊಳಿಸಿದ ನಂತರ ಅದನ್ನು ಡ್ರೈ ಮಾಡುವುದು ಮುಖ್ಯ. ಅದಕ್ಕೆ ಸ್ವಚ್ಛವಾಗಿರುವ ಟವೆಲ್ ಉಪಯೋಗಿಸಿ. ಜೊತೆಗೆ ಮಹಿಳೆಯರು ಮೇಕಪ್ ಬ್ರಷ್‌ಗಳನ್ನು, ಫೌಂಡೇಶನ್, ಮಸ್ಕರಾ, ಲಿಪ್‌ಸ್ಟಿಕ್ ಮುಂತಾದ ಉತ್ಪನ್ನಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಇದು ಸೋಂಕು ಹರಡುವುದನ್ನು ತಡೆಯುತ್ತದೆ.
ಈಗ ಮಳೆಗಾಲ ಆಗಿದ್ದರಿಂದ ಆದಷ್ಟು ಮೋಡ ಕವಿದ ವಾತಾವರಣ ಇರುತ್ತದೆ. ಬಿಸಿಲಿನಲ್ಲಿ ಮಾತ್ರವಲ್ಲದೆ ಮೋಡ ಕವಿದ ವಾತಾವರಣದಲ್ಲೂ ಯುವಿ ಕಿರಣಗಳು ಚರ್ಮದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮುಖ ತೊಳೆದ ನಂತರ ಸನ್‌ಸ್ಕ್ರೀನ್ ಬಳಸಿ. ಇದು ಬಳಕೆ ಮಾಡುವುದರಿಂದ ಸನ್‌ಬರ್ನ್, ಅಕಾಲಿಕ ವಯಸ್ಸಾದ ಹಾಗೂ ಚರ್ಮದ ಕ್ಯಾನ್ಸರ್ ಅಪಾಯ ತಂದುವೊಡ್ಡುವ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ಸುರಕ್ಷಿತವಾಗಿ ಇಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us