/newsfirstlive-kannada/media/media_files/2025/08/06/eyes-blinking-2025-08-06-14-06-42.jpg)
ನಮ್ಮ ಆರೋಗ್ಯಕರ ಜೀವನ ಶೈಲಿ ಕಾಪಾಡಿಕೊಳ್ಳುವುದು ಬಹಳ ಇಂಪಾರ್ಟೆಂಟ್ ಆಗಿರುತ್ತದೆ. ಆರೋಗ್ಯಕರ ಜೀವನ ಶೈಲಿಯನ್ನ ಪ್ರತಿಯೊಬ್ಬರು ಪಾಲಿಸಬೇಕು. ಶಾಶ್ವತ ಪರಿಣಾಮಗಳನ್ನು ಬೀರುವ ನಮ್ಮ ದೈನಂದಿನ ದಿನಚರಿಯಲ್ಲಿ ಸರಳ ಹೊಂದಾಣಿಕೆಗಳನ್ನು ಹೇಗೆ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ. ಇವುಗಳನ್ನು ನೀವು ಕೂಡ ಅನುಸರಿಸಬಹುದು.
ಒಂದು ಲೋಟ ನೀರಿನಿಂದ ದಿನ ಆರಂಭಿಸಿ
ಬೆಳಗ್ಗೆ ಒಂದು ಲೋಟ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಬೆಳಿಗ್ಗೆ ಒಂದು ಲೋಟ ನೀರು ಕುಡಿಯುವುದು ಬಹಳ ಮುಖ್ಯ. ಏಕೆಂದರೆ ಒಂದು ಲೋಟ ನೀರು ದೇಹದಲ್ಲಿ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ದೇಹದಲ್ಲಿದ್ದ ಕಲ್ಮಷಗಳನ್ನು ಹೊರಹಾಕಿ ಚರ್ಮದ ಆರೋಗ್ಯ ಹೆಚ್ಚಿಸುತ್ತದೆ. ದೇಹವನ್ನು ತೇವಾಂಶವಾಗಿ ಇಡುತ್ತದೆ.
ನಿಮ್ಮ ದಿನ ಪಾಸಿಟೀವ್ ವಿಷಯದೊಂದಿ ಪ್ರಾರಂಭ ಆಗಲಿ
ನಿದ್ದೆಯಿಂದ ಎದ್ದು ಪ್ರಚಲಿತ ದಿನದಲ್ಲಿ ನಡೆಯುವುದಂತನ್ನು ಮಾಡಿ. ಇದು ನಿಮ್ಮನ್ನು ಆಸಕ್ತಿದಾಯಕವಾಗಿ ಹಾಗೂ ಪ್ರೇರೇಪಿಸುವಂತೆ ಇರಬೇಕು. ಮೊದಲಿನಿಂದಲೂ ಪಾಸಿಟೀವ್ ಕಡೆಗೆ ಹೆಚ್ಚಿನ ಒಲುವು ಇರುವುದರಿಂದ ನಿಮ್ಮ ದಿನ ಆರಂಭವೂ ಸಕಾರಾತ್ಮಕವಾದ ವಿಷಯ ಆಗಿರಬೇಕು. ಇದರಿಂದ ಮನಸ್ಥಿತಿ ಅತ್ಯುತ್ತಮವಾಗಿ ವೃದ್ಧಿಸುತ್ತದೆ.
ಉತ್ತಮ ಆರೋಗ್ಯಕರ ನಿದ್ದೆ
ಆರೋಗ್ಯಕರ ಜೀವನಕ್ಕೆ ನಿದ್ದೆ ತುಂಬಾ ಅಂದರೆ ತುಂಬಾ ಮುಖ್ಯ. ನಮಗೆ ಆಹಾರ ಹಾಗೂ ವ್ಯಾಯಾಮ ಎಷ್ಟು ಇಂಪಾರ್ಟೆಂಟ್ ಆಗಿದೆಯೋ ಅಷ್ಟೇ ನಿದ್ದೆಯೂ ಮುಖ್ಯವಾಗಿದೆ. ಆದ್ದರಿಂದ ದಿನ ಸರಿಯಾದ ಸಮಯಕ್ಕೆ ಮಲಗಿ ಕಣ್ತುಂಬ ನಿದ್ದೆ ಮಾಡೋದರಿಂದ ಆರೋಗ್ಯಕ್ಕೆ ಒಳ್ಳೆಯದು. ಏಕಾಗ್ರತೆ, ಕೆಸಲದಲ್ಲಿ ಆಸಕ್ತಿ, ಸ್ನೇಹಿತರ ಜೊತೆ ಬೆರೆಯುವುದು, ಇತರೆ ಚಟುವಟಿಕೆಗಳಲ್ಲಿ ಕೌಶಲ್ಯತೆ ಇರಲು ಉತ್ತಮ ನಿದ್ದೆ ಬಹಳ ಮುಖ್ಯ.
ಟೇಕ್ ಡೀಪ್ ಬ್ರೀಥ್
ನಗರದಲ್ಲಿ ಇರುವರೆಗೆ ಒಳ್ಳೆ ಗಾಳಿ ಸಿಗುವುದು ಅಷ್ಟಕ್ಕೆ ಅಷ್ಟೇ. ಆದರೆ ಉತ್ತಮ ಗಾಳಿಗಾಗಿ ನಗರದ ಹೊರ ಒಲಯಗಳ ಆಯ್ಕೆ ನಿಮ್ಮದಾಗಿರಲಿ. ಆಟ, ವ್ಯಾಯಾಮ ಇತ್ಯಾದಿ ಮಾಡಿ. ಜೊತೆಗೆ ದೇಹಕ್ಕೆ ವಿಟಮಿನ್ ಡಿ ಮುಖ್ಯವಾಗಿರುವುದರಿಂದ ದಿನಕ್ಕೆ ಅರ್ಧಗಂಟೆ ಬಿಸಿಲಿನಲ್ಲಿ ಕಳೆಯಿರಿ.
ದಿನವಿಡೀ ಚಲಿಸುತ್ತಾ ಇರಿ
ಕಚೇರಿಯಲ್ಲಿ ಲಿಫ್ಟ್ ಬದಲಿಗೆ ಸ್ಟೆಪ್ಸ್ಗಳನ್ನು ಬಳಿಸಿ. ಬೈಕ್, ಕಾರು ಬದಲಿಗೆ ಸೈಕಲ್ ಬಳಸುವುದರಿಂದ ಆರೋಗ್ಯಕ್ಕೆ ಮತ್ತೊಂದು ಪುಷ್ಠಿ ಸಿಕ್ಕಂತೆ ಆಗುತ್ತದೆ. ಇದು ವ್ಯಾಯಾಮ ರೀತಿಯಲ್ಲಿ ಇರುವುದರಿಂದ ದೇಹಕ್ಕೆ ಒಳ್ಳೆಯದು. ಬೆವರು ಗ್ರಂಥಿಗಳು ಚಟುವಟಿಕೆಯಿಂದ ಇರುತ್ತವೆ. ದೇಹ ತಂಪಾಗಿಸುತ್ತವೆ.
ಇದನ್ನೂ ಓದಿ:ಅಪ್ಪಿ ತಪ್ಪಿಯೂ ಈ ತರಕಾರಿಗಳನ್ನ ಹಸಿ..ಹಸಿಯಾಗಿ ತಿನ್ನಲೇಬೇಡಿ.. ಯಾಕೆ ಗೊತ್ತಾ?
ಕಣ್ಣುಗಳಿಗೆ ರಿಲ್ಯಾಕ್ಸ್
ಕಂಪ್ಯೂಟರ್, ಮೊಬೈಲ್ಗಳಿಂದ ನಮ್ಮ ಕಣ್ಣುಗಳು ಅವಧಿಗೂ ಮೀರಿ ಕೆಲಸ ಮಾಡಿ ದಣಿದಿರುತ್ತವೆ. ಹೀಗಾಗಿ ನಿರಂತರ ಕಚೇರಿಯಲ್ಲಿ ಕೆಲಸ ಮಾಡುವಾಗ ಪ್ರತಿ 20 ನಿಮಿಷಕ್ಕೊಮ್ಮೆ ಕಣ್ಣುಗಳಿಗೆ ವಿಶ್ರಾಂತಿ ನೀಡಿ. ಕನಿಷ್ಠ ಎಂದರೂ 20 ನಿಮಿಷಕ್ಕೆ 20 ಸೆಕೆಂಡ್ಸ್ ಕಣ್ಣುಗಳಿಗೆ ವಿಶ್ರಾಂತಿ ನೀಡಬೇಕು. ಇದು ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು.
ಆರೋಗ್ಯಕರ ಆಹಾರ ನಿಮ್ಮ ಆಯ್ಕೆ ಆಗಿರಲಿ
ಹಸಿ ತರಕಾರಿ, ಹಣ್ಣು, ಮೊಳಕೆ ಕಾಳು, ಬೇಯಿಸಿದ ಮೊಟ್ಟೆ, ಬಾಳೆಹಣ್ಣು ಇಂತಹವುಗಳು ನಿಮ್ಮ ಆಹಾರ ಆಗಿರಲಿ. ರೋಡ್ ಸೈಡ್ ಫಾಸ್ಟ್ ಫುಡ್ಗೆ ಫುಲ್ ಬ್ರೇಕ್ ಹಾಕಿ. ಇದರಿಂದ ಹಣ ಕೂಡ ಉಳಿತಾಯ ಆಗುತ್ತದೆ. ಆರೋಗ್ಯಕ್ಕಾಗಿ ಮನೆಯಲ್ಲಿ ತಯಾರಿಸಿದ ಒಂದು ಜ್ಯೂಸ್ ಕುಡಿಯಿರಿ. ಸದಾ ಚಟುವಟಿಕೆಯಿಂದ ಇರಲು ಕುಟುಂಬ ಸದಸ್ಯರ, ಸ್ನೇಹಿತರ ಭೇಟಿ ಇರಲಿ. ಹಾಗೇ ನಿತ್ಯದ ವಿದ್ಯಾಮಾನಗಳನ್ನು ಪಡೆಯುತ್ತೀರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ