ಅಪ್ಪಿ ತಪ್ಪಿಯೂ ಈ ತರಕಾರಿಗಳನ್ನ ಹಸಿ..ಹಸಿಯಾಗಿ ತಿನ್ನಲೇಬೇಡಿ.. ಯಾಕೆ ಗೊತ್ತಾ?

ಕ್ಯಾರೆಟ್​, ಬೀಟ್ರೂಟ್, ಈರುಳ್ಳಿ, ಸೌತೆಕಾಯಿ ಸೇರಿ ಕೆಲವೊಂದನ್ನ ಹಾಗೇ ಹಸಿಯಾಗಿ ತಿನ್ನುತ್ತೇವೆ. ಆದರೆ ಇವುಗಳಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಈ ತರಕಾರಿಯಲ್ಲೇ ಕೆಲವೊಂದನ್ನ ಹಸಿಯಾಗಿ ತಿನ್ನಲೇಬಾರದು. ಅವು ಯಾವುವು, ಯಾಕೆ ತಿನ್ನಬಾರದು ಎನ್ನುವುದಕ್ಕೆ ಕಾರಣ ಕೂಡ ಇದೆ.

author-image
Bhimappa
vegetables_Photos
Advertisment

ನಿತ್ಯ ನಾವು ಯಾವುದೇ ಆಹಾರದಲ್ಲಿ ತರಕಾರಿ ಬಳಕೆ ಮಾಡುತ್ತೇವೆ. ಹೆಚ್ಚಾಗಿ ಸಾಂಬಾರು, ಫಲಾವ್​​ ಮಾಡುವಾಗ ತರಕಾರಿಗಳನ್ನು ಉಪಯೋಗಿಸುತ್ತೇವೆ. ಹಾಗೇ ಕ್ಯಾರೆಟ್​, ಟಮೋಟೋ, ಬೀಟ್ರೂಟ್, ಈರುಳ್ಳಿ, ಸೌತೆಕಾಯಿ ಸೇರಿ ಕೆಲವೊಂದನ್ನ ಹಾಗೇ ಹಸಿಯಾಗಿ ತಿನ್ನುತ್ತೇವೆ. ಆದರೆ ಇವುಗಳಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಈ ತರಕಾರಿಯಲ್ಲೇ ಕೆಲವೊಂದನ್ನ ಹಸಿಯಾಗಿ ತಿನ್ನಲೇಬಾರದು. ಅವು ಯಾವುವು, ಯಾಕೆ ತಿನ್ನಬಾರದು ಎನ್ನುವುದಕ್ಕೆ ಕಾರಣ ಕೂಡ ಇದೆ.

ತೀರಾ ಬೇಯಿಸಿದ ತರಕಾರಿ ತಿಂದರೆ ಅದರಲ್ಲಿನ ಪೌಷ್ಟಿಕಾಂಶ ನಾಶವಾಗುತ್ತದೆ. ಇದರಿಂದ ನಮಗೆ ಯಾವುದೇ ಪ್ರಯೋಜನ ಇರುವುದಿಲ್ಲ. ತರಕಾರಿಗಳನ್ನು ಹಾಗೆ ಹಸಿಯಾಗಿ ಸೇವನೆ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಕೆಲವರು ಹೇಳುತ್ತಾರೆ. ಆದರೆ ಕೆಲ ತರಕಾರಿ ಹಸಿಯಾಗಿ ಸೇವಿಸಬಾರದು. ಏಕೆಂದರೆ ವಿಷಕಾರಕ ಅಂಶಗಳು, ಬ್ಯಾಕ್ಟೀರಿಯಾ, ಪರಾವಲಂಬಿ ಕೀಟಗಳು ಆರೋಗ್ಯಕ್ಕೆ ಹಾನಿ ಮಾಡುತ್ತವೆ.

ಈ ತರಕಾರಿನ ಹಸಿಯಾಗಿ ಸೇವನೆ ಮಾಡುವುದರಿಂದ ಅವುಗಳಲ್ಲಿರುವ ಲಾಡಿಹುಳು, ಆ ಹುಳುವಿನ ಮೊಟ್ಟೆಗಳು ಇ ಕೋಲಿಯಂಥ ಬ್ಯಾಕ್ಟೀರಿಯಾ ಹಾಗೂ ಪರಾವಲಂಬಿ ಕೀಟಗಳು ನಮ್ಮ ದೇಹ ಸೇರುತ್ತವೆ. ಇವುಗಳಿಂದ ನಮ್ಮ ಆರೋಗ್ಯಕ್ಕೆ ಹೆಚ್ಚಿನ ಅಪಾಯ ಇರುತ್ತದೆ. ಹೀಗಾಗಿ ಅಂಥ ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು. ಆ ತರಕಾರಿ ಯಾವುದು ಎಂದರೆ..

ಇದನ್ನೂ ಓದಿ: ನಿಮ್ಮ ಕೈ ನಡುಗುತ್ತಿದೆಯಾ, ರಕ್ತಹೀನತೆ ಕಾಡ್ತಿದೆಯಾ..? ಹಾಗಾದ್ರೆ ನಿಮ್ಗೆ ಈ ವಿಟಮಿನ್​ ಬೇಕೇ ಬೇಕು!

vegetables_Photo

ಲಾಡಿಹುಳುವಿನ ಮೊಟ್ಟೆಗಳ ಆವಾಸಸ್ಥಾನ ಎಂದರೆ ಅದು ಬದನೆಕಾಯಿ ಬೀಜಗಳು ಎನ್ನಬಹುದು. ಬದನೆಕಾಯಿ ತಿನ್ನುವಾಗ ಹೆಚ್ಚು ಬೇಯಿಸಿ ತಿನ್ನಬೇಕು. ಇದರಿಂದ ಬದನೆಕಾಯಿ ಬೀಜದ ಒಳಗಿನ ಲಾಡಿಹುಳುವಿನ ಮೊಟ್ಟೆಗಳು ನಾಶ ಹೊಂದುತ್ತವೆ.

ಕ್ಯಾಬೇಜ್ ಅಥವಾ ಎಲೆಕೋಸು ಇದನ್ನು ಹಸಿಯಾಗಿ ತಿನ್ನಬಾರದು. ಇದರಲ್ಲಿಯೇ ಅತಿ ಹೆಚ್ಚು ಲಾಡಿಹುಳು ಮತ್ತು ಅದರ ಮೊಟ್ಟೆಗಳು ಇರುತ್ತವೆ. ಇದರ ಜೊತೆಗೆ ಕ್ರಿಮಿ, ಕೀಟಗಳು ಅಧಿಕಮಟ್ಟದಲ್ಲಿರುತ್ತವೆ. ಎಲೆಕೋಸನ್ನು ತಿನ್ನುವಾಗ ಬಿಸಿ ನೀರಿನಲ್ಲಿ ಚೆನ್ನಾಗಿ ಬೇಯಿಸಿ ಬಳಿಕ ನಮಗೆ ಬೇಕಾದಂತೆ ಸಿದ್ಧತೆ ಮಾಡಿ ತಿನ್ನಬಹುದು.

ಕೆಸುವಿನ ಎಲೆ, ಪಾಲಕ್, ಬಸಳೆ ಸೊಪ್ಪು ಅನ್ನು ಬಿಸಿ ನೀರಿನಲ್ಲಿ ಬೇಯಿಸಿ ಬಳಿಕ ನಮಗೆ ಬೇಕಾದ ರೀತಿಯಲ್ಲಿ ಸಾಂಬಾರು, ಸೊಪ್ಪುಸಾರು ಸಿದ್ಧ ಮಾಡಿಕೊಳ್ಳಬಹುದು. 

ಕ್ಯಾಪ್ಸಿಕಾಂ ಅಥವಾ ದೊಣ್ಣೆಮೆಣಸಿನ ಕಾಯಿ ಇದರ ಕಿರೀಟ ಭಾಗ ಓಪನ್ ಮಾಡಿ ಬೀಜಗಳನ್ನು ಎಗೆದು ಅದನ್ನು ಬಿಸಿನೀರಿನಲ್ಲಿ ಮುಳುಗಿಸಬೇಕು. ಏಕೆ ಹೀಗೆ ಮಾಡಬೇಕು ಎಂದರೆ ಕ್ಯಾಪ್ಸಿಕಾಂ ಬೀಜಗಳಲ್ಲಿ ಲಾಡಿಹುಳುವಿನ ಮೊಟ್ಟೆಗಳು ಇರುವ ಸಾಧ್ಯತೆ ಇರುತ್ತದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kajal on eyes, health benefits Skin Health Health Tips
Advertisment