ನಿಮ್ಮ ಕೈ ನಡುಗುತ್ತಿದೆಯಾ, ರಕ್ತಹೀನತೆ ಕಾಡ್ತಿದೆಯಾ..? ಹಾಗಾದ್ರೆ ನಿಮ್ಗೆ ಈ ವಿಟಮಿನ್​ ಬೇಕೇ ಬೇಕು!

ದೇಹದ ಯಾವುದೇ ಅಂಗಕ್ಕೂ, ಭಾಗಕ್ಕೂ ಸಮಸ್ಯೆಯಾಗದಂತೆ ಎಲ್ಲ ಪೋಷಕಾಂಶಗಳು, ಖನಿಜಾಂಶಗಳು, ವಿಟಮಿನ್ಸ್ ಸರಿಯಾಗಿ ಸೇರುತ್ತಿವೆಯಾ ಎನ್ನುವುದನ್ನ ಖಚಿತ ಪಡಿಸಿಕೊಳ್ಳಬೇಕು. ದೇಹದಲ್ಲಿ ಕೊರತೆ ಕಂಡುಬಂದರೆ ಅದಕ್ಕೆ ಬೇಕಾದ ಅಂಶವನ್ನು ಸರಿಯಾದ ಪ್ರಮಾಣದಲ್ಲಿ ತಲುಪಿಸುತ್ತಿಲ್ಲ ಎಂದರ್ಥ.

author-image
Bhimappa
HEALTH_NEW
Advertisment

ನಮ್ಮ ದೇಹದ ಆರೋಗ್ಯ ಎಂದ ಮೇಲೆ ಎಲ್ಲವನ್ನು ಸಮ ಪ್ರಮಾಣದಲ್ಲಿ ನೋಡಿಕೊಳ್ಳಬೇಕು. ಯಾವುದೇ ಅಂಗಕ್ಕೂ, ಭಾಗಕ್ಕೂ ಸಮಸ್ಯೆಯಾಗದಂತೆ ಎಲ್ಲ ಪೋಷಕಾಂಶಗಳು, ಖನಿಜಾಂಶಗಳು, ವಿಟಮಿನ್ಸ್ ಸರಿಯಾಗಿ ಸೇರುತ್ತಿವೆಯಾ ಎನ್ನುವುದನ್ನ ಖಚಿತ ಪಡಿಸಿಕೊಳ್ಳಬೇಕು. ದೇಹದಲ್ಲಿ ಏನಾದರೂ ಕೊರತೆ ಕಂಡುಬಂದರೆ ಅದಕ್ಕೆ ಬೇಕಾದ ಅಂಶವನ್ನು ಸರಿಯಾದ ಪ್ರಮಾಣದಲ್ಲಿ ನಾವು ತಲುಪಿಸುತ್ತಿಲ್ಲ ಎಂದರ್ಥ. ಅದರಂತೆ ಕೈ ನಡುಗುತ್ತಿದೆಯಾ?, ಅದಕ್ಕೆ ಏನು ಕಾರಣ? ಎನ್ನುವ ಮಾಹಿತಿ ಇಲ್ಲಿದೆ.   

ವಿಟಮಿನ್ಸ್​, ಖನಿಜಾಂಶ, ಪೋಷಕಾಂಶಗಳು, ಇವೆಲ್ಲ ನಮ್ಮ ದೇಹಕ್ಕೆ ಸರಿಯಾಗಿ ಸಿಕ್ಕಿಲ್ಲ ಎಂದರೆ ಆರೋಗ್ಯ ಹದಗೆಡುತ್ತ ಹೋಗುತ್ತದೆ. ಪ್ರಮುಖ ಪೌಷ್ಟಿಕ ಸತ್ವಗಳಲ್ಲಿ ಏರುಪೇರಾದರೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಒಂದು ವೇಳೆ ನಮಗೆ ವಿಟಮಿನ್ ಬಿ12 ಕೊರತೆಯಾದರೆ ನಮ್ಮ ಕೈಗಳು ನಡುಗುವುದು, ಇನ್ನೊಂದು ಕೈಯಲ್ಲಿ ಯಾವುದೇ ಚಲನೆ ಇಲ್ಲದಂತೆ ಆಗುತ್ತದೆ. ಆಯಾಸ, ಸುಸ್ತು ಕಂಡು ಬರುತ್ತದೆ. 

ವಿಟಮಿನ್ ಬಿ12 ದೇಹದಲ್ಲಿ ಕಡಿಮೆ ಆದರೆ ಪದೇ ಪದೇ ಸುಸ್ತು, ಆಯಾಸ, ದೇಹದ ತೂಕ ಕಡಿಮೆ ಆಗುವುದು, ಹಸಿವು ಆಗದಿರುವುದು, ದೇಹದಲ್ಲಿ ವೀಕ್ ನೆಸ್ ಆಗುತ್ತಿರುತ್ತದೆ. ನರನಾಡಿಗಳು ಆರೋಗ್ಯವಾಗಿರಬೇಕು ಎಂದರೆ ಅವುಗಳಿಗೆ ನಾವು ವಿಟಮಿನ್ ಬಿ12 ಅನ್ನು ಒದಗಿಸುತ್ತಿರಬೇಕು. ಇದರ ಜೊತೆಗೆ ವಿಟಮಿನ್ ಡಿ ಕೂಡ ಸ್ನಾಯುಗಳು, ನರಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹೀಗಾಗಿ ಮೂಳೆ ಹಾಗೂ ನರಗಳ ಆರೋಗ್ಯ ಕಾಪಾಡಲು ವಿಟಮಿನ್ ಬಿ12, ಡಿ ಅತ್ಯಮೂಲ್ಯವಾಗಿವೆ. 

ಇದನ್ನೂ ಓದಿ:ಸ್ಮರಣಶಕ್ತಿ, ಮೆದುಳಿನ ಆರೋಗ್ಯಕ್ಕಾಗಿ 8 ಅತ್ಯುತ್ತಮ ಭಾರತೀಯ ಆಹಾರಗಳು

HEALTH

ವಿಟಮಿನ್ ಕೊರತೆಯಿಂದ ದೇಹದಲ್ಲಿ ಕಾಣಿಸುವ ಸಮಸ್ಯೆಗಳು

  • B12 ಹಾಗೂ ಮೆಗ್ನೀಸಿಯಮ್ ಕೊರತೆಯಿಂದ ವಿಶೇಷವಾಗಿ ಕೈಗಳು ಹಾಗೂ ಪಾದಗಳಲ್ಲಿ ನೋವು ಬರುತ್ತದೆ. 
  • ದೇಹದಲ್ಲಿ ಶಕ್ತಿಯ ಕೊರತೆ ಹಾಗೂ ನಿತ್ಯದ ನಿಮ್ಮ ಕೆಲಸಗಳನ್ನು ಮಾಡಲು ಆಗದೇ ಇರುವುದು. 
  • ವಿಷಯಗಳ ಮೇಲೆ ಗಮನ ಅಥವಾ ಆ ವಿಷಯವನ್ನು ಮರೆತು ಹೋಗುವ ಸನ್ನಿವೇಶಗಳು ಎದುರಾಬಹುದು. 
  • ದೇಹದಲ್ಲಿ ಸ್ನಾಯು ಸೆಳೆತ ಕೂಡ ನಿಂರತಂರವಾಗುತ್ತದೆ. ಕಾಲು, ಕೈಗಳಲ್ಲಿ ಆಗಾಗ ಸೆಳೆತ ಉಂಟಾಗುತ್ತದೆ. 

ವಿಟಮಿನ್ ಬಿ12 ಯಾವ ಆಹಾರಗಳಲ್ಲಿ ಇರುತ್ತದೆ?

ವಿಟಮಿನ್ ಬಿ12 ಅಥವಾ ಕೋಬಾಲಾಮಿನ್ ಒಂದು ನೀರಿನಲ್ಲಿ ಕರಗುವ ಜೀವಸತ್ವವಾಗಿದೆ. ನರಮಂಡಲದ ಆರೋಗ್ಯಕರ ಕಾರ್ಯನಿರ್ವಹಣೆ, ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ಡಿಎನ್‌ಎ ಸಂಶ್ಲೇಷಣೆಗೆ ಅಗತ್ಯ. ಮುಖ್ಯವಾಗಿ ಮಾಂಸ, ಮೀನು, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳಂಥ ಪ್ರಾಣಿ ಮೂಲದ ಆಹಾರಗಳಲ್ಲಿ ಇರುತ್ತದೆ. ವಿಟಮಿನ್ ಬಿ12 ಕೊರತೆ ಆದರೆ ಅದರಿಂದ ನರಗಳಿಗೆ ಹಾನಿ, ರಕ್ತಹೀನತೆ ಹಾಗೂ ಚರ್ಮದಲ್ಲಿ ಜುಮ್ಮೆನಿಸುವಿಕೆ ಸೇರಿ ಇತರೆ ಲಕ್ಷಣಗಳು ಉಂಟಾಗುವ ಸಾಧ್ಯತೆ ಇರುತ್ತದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

eye health, blinking problems Health Tips kajal on eyes, health benefits Skin Health
Advertisment