/newsfirstlive-kannada/media/media_files/2025/09/10/health_foods-2025-09-10-16-32-11.jpg)
ಮೆದುಳು ಮತ್ತು ನೆನಪಿನ ಶಕ್ತಿಗೆ ಬಾದಾಮಿ ಮತ್ತು ವಾಲ್‌ನಟ್‌ಗಳಿಂದ ಹಿಡಿದು ಅರಿಶಿನ ಮತ್ತು ಆಮ್ಲವರೆಗೆ ಭಾರತೀಯ ಆಹಾರ ಅನ್ವೇಷಿಸಲಾಗಿದೆ. ಆಯುರ್ವೇದ ವಿಜ್ಞಾನದ, ಈ ನೈಸರ್ಗಿಕ ಆಹಾರ, ಒತ್ತಡವನ್ನು ಕಡಿಮೆ ಮಾಡಿ ದೀರ್ಘಕಾಲೀನ ಮೆದುಳಿನ ಆರೋಗ್ಯವನ್ನು ಉತ್ತಮ ಪಡಿಸುತ್ತವೆ.
ನೆನಪಿನ ಶಕ್ತಿ ಹೆಚ್ಚಿಸುವ ಹಾಗು ಮನಸ್ಸನ್ನು ಚುರುಕಾಗಿಡುವ ವಿಷಯಕ್ಕೆ ಬಂದಾಗ ಪರಿಹಾರಗಳು ಯಾವಾಗಲು ಪೂರಕವಾಗಿರುವುದಿಲ್ಲ. ಆದರೆ ಭಾರತೀಯ ಆಹಾರ ಪದ್ಧತಿಯಲ್ಲಿ ಈ ರಹಸ್ಯ ಅಡಗಿದೆ. ಗೋಲ್ಡನ್ ಹಲ್ಡಿ ದೂಧ್‌ನಿಂದ ಹಿಡಿದು ರಾತ್ರಿಯಿಡೀ ನೆನೆಸಿದ ಬಾದಾಮಿಯವರೆಗೆ, ನಮ್ಮ ದೇಸಿ ಆಹಾರ ಯಾವಾಗಲೂ ಮೆದುಳಿಗೆ ಶಕ್ತಿ ತುಂಬುತ್ತಿರುತ್ತದೆ.
ಮೆದುಳಿನ ನೆನಪಿನ ಶಕ್ತಿ ಹೆಚ್ಚಿಸುವ ಭಾರತೀಯ ಆಹಾರಗಳು
ಬಾದಾಮಿ; ಬಾದಾಮಿಯನ್ನು ರಾತ್ರಿಯಿಡಿ ನೆನೆಸಿ ಬೆಳಗ್ಗೆ ಸೇವಿಸುವುದರಿಂದ ನೆನಪಿನ ಶಕ್ತಿ ವೃದ್ಧಿಗೆ ಉತ್ತಮ ಮಾರ್ಗವಾಗಿದೆ. ಟಮಿನ್ ಇ, ಒಮೆಗಾ-3 ಕೊಬ್ಬಿನಾಮ್ಲಗಳು ಹಾಗೂ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವುದರಿಂದ ಇವು ಮೆದುಳಿನ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತವೆ.
ವಾಲ್ನಟ್ಸ್ (ಅಖ್ರೋಟ್); ಮೆದುಳಿಗೆ ಹೋಲುವ ಕಾರಣದಿಂದಾಗಿ ಮೆದುಳಿನ ಆಹಾರ ಎಂದು ವಾಲ್ನಟ್ಸ್ಗಳನ್ನು ಕರೆಯಲಾಗುತ್ತದೆ. ಮೆದುಳಿನ ಕಾರ್ಯಕ್ಕೆ ಅತ್ಯಗತ್ಯವಾದ ಒಮೆಗಾ-3 ಕೊಬ್ಬಿನಾಮ್ಲದ ಒಂದು ರೂಪವಾದ ಡಿಹೆಚ್ಎ ಯಿಂದ ತುಂಬಿರುತ್ತದೆ. ನಿತ್ಯ ಸೇವನೆಯ ಮೆದುಳಿನ ನೆನಪಿನ ಶಕ್ತಿ ಹೆಚ್ಚಿಸುತ್ತದೆ.
ಅರಿಶಿನ; ಇದರ ಅಂಶವಾದ ಕರ್ಕ್ಯುಮಿನ್ ಪ್ರಬಲವಾದ ಉರಿಯೂತ ನಿವಾರಕವಾಗಿದೆ. ಇದು ಸ್ಮರಣಶಕ್ತಿ ಹೆಚ್ಚಿಸುತ್ತದೆ, ನರ ಕ್ಷೀಣಗೊಳ್ಳುವ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸಿರೊಟೋನಿನ್ ಮತ್ತು ಡೋಪಮೈನ್ ಅನ್ನು ಹೆಚ್ಚಿಸುವ ಮೂಲಕ ಮನಸ್ಥಿತಿ ಸುಧಾರಿಸುತ್ತದೆ.
ಇದನ್ನೂ ಓದಿ:ಅತ್ಯುತ್ತಮ ಆಯುರ್ವೇದ ಅಭ್ಯಂಗ ಮಸಾಜ್.. ದೇಹ, ಮನಸ್ಸು, ಆತ್ಮಕ್ಕೆ ಇವೆ ಭಾರೀ ಪ್ರಯೋಜನ!
ತುಪ್ಪ; ಭಾರತೀಯ ದೇಸಿ ತುಪ್ಪ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಮೂಲಕ ಪೌಷ್ಟಿಕ ಕೊಬ್ಬುಗಳನ್ನು ದೇಹಕ್ಕೆ ನೀಡುತ್ತದೆ. ದಾಲ್ ಹಾಗು ರೊಟ್ಟಿಯಲ್ಲಿ ಒಂದು ಟೀ ಚಮಚ ಶುದ್ಧ ತುಪ್ಪವನ್ನು ಸೇವಿಸುವುದರಿಂದ ದೇಹ ಮತ್ತು ಮೆದುಳು ಎರಡನ್ನೂ ಪೋಷಿಸುತ್ತದೆ.
ಆಮ್ಲ (ನೆಲ್ಲಿಕಾಯಿ); ವಿಟಮಿನ್ ಸಿ ಸಮೃದ್ಧವಾಗಿರುವ ಆಮ್ಲಾ ರಕ್ತದ ಹರಿವನ್ನು ಹೆಚ್ಚಿಸಿ ಮೆದುಳಿನ ಚಟುವಟಿಕೆ ಹಾಗು ಬುದ್ಧಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಹಸಿರೆಲೆ ಸೊಪ್ಪುಗಳು (ಪಾಲಾಕ್ ಹಾಗು ಮೆಂತ್ಯ); ಪಾಲಕ್ ಹಾಗು ಮೆಂತ್ಯಸೊಪ್ಪುಗಳು ವಿಟಮಿನ್ ಕೆ ಯನ್ನು ಹೊಂದಿರುತ್ತದೆ. ಇದು ಮೆದುಳಿನ ಕಾರ್ಯನಿರ್ವಹಣೆಗೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮರೆವನ್ನು ನಿವಾರಿಸಲು ಅವಶ್ಯಕವಾಗಿದೆ.
ಬ್ರಾಹ್ಮೀ; ಇದು ಆಯುರ್ವೇದದ ಮೂಲಿಕೆಯಾಗಿದ್ದು, ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ಆತಂಕವನ್ನು ದೂರ ಮಾಡುತ್ತದೆ. ಇದು ವಿದ್ಯಾರ್ಥಿಗಳ ಏಕಾಗ್ರತೆಗೆ ಸಹಾಯವಾಗಲಿದೆ.
ಕಪ್ಪು ಎಳ್ಳು; ಆರೋಗ್ಯಕರ ಕೊಬ್ಬು, ಆಂಟಿ ಆ್ಯಕ್ಸಿಡೆಂಟ್ ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಎಳ್ಳು ನರಮಂಡಲವನ್ನು ಪೋಷಿಸುತ್ತದೆ ಮತ್ತು ನೆನಪಿನ ಶಕ್ತಿ ಹೆಚ್ಚಿಸುತ್ತದೆ.
ಬಾದಾಮಿಯಿಂದ ಹಿಡಿದು ಶಕ್ತಿ ಕೇಂದ್ರವಾದ ಆಮ್ಲವರೆಗೆ, ಭಾರತೀಯ ಆಹಾರ ಪದ್ಧತಿಯು ಮೆದುಳು ಮತ್ತು ನೆನಪಿನ ಶಕ್ತಿ ಹೆಚ್ಚಿಸುವ ಆಹಾರಗಳಿಂದ ತುಂಬಿದೆ. ಇದು ಹಿರಿಯರಿಂದ ಬಂದ ಜ್ಞಾನವಾಗಿದೆ. ಇವುಗಳನ್ನು ಊಟಗಳಲ್ಲಿ ಅಲ್ಪಮಟ್ಟಿಗೆ ಸೇವಿಸುವುದರಿಂದ ಮೆದುಳಿನ ಆರೋಗ್ಯ ಹಾಗೂ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಲು ಸಹಾಯ ಮಾಡಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ