ಅತ್ಯುತ್ತಮ ಆಯುರ್ವೇದ ಅಭ್ಯಂಗ ಮಸಾಜ್.. ದೇಹ, ಮನಸ್ಸು, ಆತ್ಮಕ್ಕೆ ಇವೆ ಭಾರೀ ಪ್ರಯೋಜನ!

ಅಭ್ಯಂಗ ಆಯುರ್ವೇದದ ಒಂದು ಬಗೆಯ ಚಿಕಿತ್ಸೆಯಾಗಿದೆ. ಪ್ರಾಚೀನ ಕಾಲದಿಂದಲೂ ಗಿಡಮೂಲಿಕೆ ಎಣ್ಣೆಗಳಿಂದ ಮಸಾಜ್ ಮಾಡುವ ಆಚರಣೆಯಾಗಿದೆ. ಇದು ಮನಸ್ಸನ್ನು ಶಾಂತಗೊಳಿಸಿ, ಒತ್ತಡ ಕಡಿಮೆ ಮಾಡಲು ಸಹಾಯಕವಾಗಿದೆ. ಮನೆಯಲ್ಲಿ ಇದನ್ನು ಹೇಗೆ ಅಭ್ಯಾಸ ಮಾಡುವುದು ಎಂಬುವ ವರದಿ ಇಲ್ಲಿದೆ.

author-image
Bhimappa
Abhyanga_New
Advertisment

ನವದೆಹಲಿ: ಆಯುರ್ವೇದವು ದೇಹ, ಮನಸ್ಸು ಮತ್ತು ಆತ್ಮದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಅಭ್ಯಂಗವನ್ನು ಶತಮಾನಗಳಿಂದ ಮಾಡಲಾಗುತ್ತಿದ್ದು, ಇದೊಂದು ಸ್ವಯಂ ಮಸಾಜ್ ಚಿಕಿತ್ಸೆಯಾಗಿದೆ. ಇದು ಚರ್ಮಕ್ಕೆ ಮಾತ್ರವಲ್ಲದೆ ಒಟ್ಟಾರೆ ದೇಹದ ಯೋಗಕ್ಷೇಮಕ್ಕೂ ಪ್ರಯೋಜನ ನೀಡುತ್ತದೆ.

ಆಯುರ್ವೇದದಲ್ಲಿ ಅಭ್ಯಂಗದ ಅರ್ಥ ಮತ್ತು ಅದರ ಮೂಲ

ಅಭ್ಯಂಗ ಎಂಬ ಪದವು ಸಂಸ್ಕೃತದಿಂದ ಬಂದಿದೆ. ಅಭಿ ಎಂದರೆ ಕಡೆಗೆ ಮತ್ತು ಅಂಗ ಎಂದರೆ ಅಂಗಗಳು ಎಂದರ್ಥ. ಇದರ ಸಂಪೂರ್ಣ ಅರ್ಥ ಕೈ ಮತ್ತು ಕಾಲುಗಳನ್ನು ಎಣ್ಣೆಯಿಂದ ಮಸಾಜ್ ಮಾಡುವುದು ಎಂದಾಗಿದೆ. ಈ ಚಿಕಿತ್ಸೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಚರಕ ಸಂಹಿತ ಮತ್ತು ಸುಶ್ರುತ ಸಂಹಿತದಂತಹ ಆಯುರ್ವೇದ ಗ್ರಂಥಗಳಲ್ಲಿ ಅಭ್ಯಂಗವನ್ನು ಉಲ್ಲೇಖಿಸಲಾಗಿದೆ. ಸಾಮಾನ್ಯವಾಗಿ ಬೆಳಗ್ಗೆ ಸ್ನಾನ ಮಾಡುವ ಮೊದಲು ಇದನ್ನು ಮಾಡಲಾಗುತ್ತದೆ. ಎಣ್ಣೆ ಚರ್ಮದ ಒಳಗೆ ಹೋಗಿ ದೇಹದಲ್ಲಿನ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ದೇಹ, ಮನಸ್ಸು ಮತ್ತು ಆತ್ಮಕ್ಕೆ ಅಭ್ಯಂಗದಿಂದಾಗುವ ಪ್ರಯೋಜನಗಳು

ಅಭ್ಯಂಗವು ಕೇವಲ ಸೌಂದರ್ಯ ವರ್ಧಕ ಆಚರಣೆಯ ಮಿತಿಯನ್ನು ಮೀರಿದೆ. ಇದು ಎಲ್ಲವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಬೆಚ್ಚಗಿನ ಎಣ್ಣೆ ಚರ್ಮದ ಅಂಗಾಂಶಗಳಿಗೆ ಆಳವಾಗಿ ಹೋಗುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ನರ ಬಿಗಿತವನ್ನು ಕಡಿಮೆ ಮಾಡುತ್ತದೆ ಮತ್ತು ಕೀಲುಗಳನ್ನು ನಯಗೊಳಿಸುತ್ತದೆ. ನಿಯಮಿತವಾದ ಅಭ್ಯಂಗವು ಸ್ನಾಯುಗಳ ಒತ್ತಡವನ್ನು ಹೋಗಲಾಡಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿದ್ರೆಯ ಸಮಯ ಸುಧಾರಿಸುತ್ತದೆ.

ಇದನ್ನೂ ಓದಿ: ನಿಮಗಿದು ಗೊತ್ತಾ?.. ಮುಖದ ಕಾಂತಿ ಹೆಚ್ಚಿಸಲು ಹಸಿ ಹಾಲು ಸೂಕ್ತವಾದ ಮದ್ದು

Abhyanga

ದೋಷ ಆಧರಿಸಿ ಅಭ್ಯಂಗಕ್ಕೆ ಸರಿಯಾದ ಎಣ್ಣೆ ಆಯ್ಕೆ ಹೇಗೆ..?

  • ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಸರಿಯಾದ ಎಣ್ಣೆಯನ್ನು ಆಯ್ಕೆ ಮಾಡುವುದು ಮುಖ್ಯ ಪಾತ್ರವಹಿಸುತ್ತದೆ. ಆಯುರ್ವೇದದ ಪ್ರಕಾರ, ಪ್ರತಿಯೊಂದು ದೋಷವು ನಿರ್ದಿಷ್ಟ ಎಣ್ಣೆಗಳಿಗೆ ಉತ್ತಮವಾಗಿ ರೆಸ್ಪಾನ್ಸ್ ಮಾಡುತ್ತವೆ.
  • ವಾತ ಸಮಸ್ಯೆಯಿದ್ದವರು, ಎಳ್ಳು ಅಥವಾ ಬಾದಾಮಿ ಎಣ್ಣೆ ಬಳಸಬೇಕು.
  • ಪಿತ್ತ ಸಮಸ್ಯೆಯಿದ್ದವರು ತೆಂಗಿನಕಾಯಿ ಅಥವಾ ಸೂರ್ಯಕಾಂತಿ ಎಣ್ಣೆಯಂತಹ ತಂಪಾಗಿಸುವ ಎಣ್ಣೆ ಬಳಸಬೇಕು.
  • ಕಫ ಸಮಸ್ಯೆಯಿದ್ದವರು ಸಾಸಿವೆ ಅಥವಾ ಅಗಸೆಬೀಜದ ಎಣ್ಣೆಯಂತಹ ಹಗುರವಾದ ಮತ್ತು ಉತ್ತೇಜಕ ಎಣ್ಣೆ ಬಳಸಬೇಕು.
  • ಈ ಎಣ್ಣೆ ಸಾಮಾನ್ಯವಾಗಿ ಅಶ್ವಗಂಧ, ಬ್ರಾಹ್ಮಿ ಅಥವಾ ಬೇವಿನಂತಹ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ. ಇವುಗಳು ದೋಷಗಳ ಚಿಕಿತ್ಸೆಯ ಪರಿಣಾಮವನ್ನು ಹೆಚ್ಚಿಸುತ್ತದೆ. ದೋಷದ ಬಗ್ಗೆ ನಮಗೆ ಮಾಹಿತಿಯಿಲ್ಲದಿದ್ದ್ಲಲ್ಲಿ. ಎಳ್ಳು ಅಥವಾ ತೆಂಗಿನಕಾಯಿ ಎಣ್ಣೆಗಳು ಉತ್ತಮ ಆಯ್ಕೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Skin Health Health Tips
Advertisment