/newsfirstlive-kannada/media/media_files/2025/09/09/health_tips-2025-09-09-20-31-27.jpg)
ಮಹಿಳೆಯರು ತಮ್ಮ ಸೌಂದರ್ಯದಿಂದ ಚೆನ್ನಾಗಿ ಕಾಣಿಸಬೇಕು ಎಂದು ಬಯಸುತ್ತಾರೆ. ಆದರೆ ಇದಕ್ಕಾಗಿ ಆಯುರ್ವೇದ, ಮೆಡಿಕಲ್​ನಿಂದ ತಂದಂತಹ ಕೆಲವು ವಸ್ತುಗಳನ್ನು ಮುಖಕ್ಕೆ ಉಪಯೋಗಿಸಿದರೂ ಅದು ವರ್ಕೌಟ್ ಆಗುವುದಿಲ್ಲ. ಇವುಗಳು ಕೆಲವು ದಿನ ಮಾತ್ರ ಕೆಲಸ ಮಾಡಬಹುದು. ಬಳಿಕ ಮುಖವು ಮೊದಲಿನಂತೆ ಆಗಿಬಿಡುತ್ತದೆ. ಈ ರೀತಿ ಆಗಬಾರದು ಎಂದರೆ.. ಇಲ್ಲಿನ ಟಿಪ್ಸ್​ವೊಂದನ್ನ ಟ್ರೈ ಮಾಡಿ ನೋಡಿ.
ತನ್ನ ಮುಖದ ಚರ್ಮ ಹೊಳೆಯುವಂತೆ, ಸುಂದರವಾಗಿ ಕಾಣಲು ಮಹಿಳೆಯರ ಆಸೆ. ಇದಕ್ಕಾಗಿ ವಿವಿಧ ರೀತಿಯ ದುಬಾರಿ ಸೌಂದರ್ಯ ಚಿಕಿತ್ಸೆ ಮತ್ತು ಉತ್ಪನ್ನಗಳ ಖರೀದಿಸಿದರೂ ಉಪಯೋಗ ಅನ್ನೋದೇ ಇರಲ್ಲ. ಬ್ಯೂಟಿ ಪಾರ್ಲರಿಗೆ ಹೋಗಿ ಟ್ರೀಟ್ಮೆಂಟ್ ತೆಗೆದುಕೊಂಡರು ಅದು ಕೂಡ ವ್ಯರ್ಥ ಆಗುತ್ತಲೇ ಇರುತ್ತದೆ.
ಒಂದು ಸೂಪರ್​ ಡುಪಾರ್​ ಈ ಮನೆಮದ್ದು ಚರ್ಮವನ್ನು ಹೊಳೆಯುವಂತೆ ಮಾಡುವುದಲ್ಲದೆ, ತ್ವಚೆಯು ಸುಂದರವಾಗಿರಲು ಸಹಾಯ ಮಾಡುತ್ತದೆ. ಅಂತಹ ಒಂದು ಸಾಮಾಗ್ರಿಯೆಂದರೆ ಹಸಿ ಹಾಲು. ಹಸಿ ಹಾಲಿನಿಂದ ನಿಮ್ಮ ಮುಖವನ್ನು ಹೇಗೆ ಹೊಳೆಯುವಂತೆ ಮಾಡಬಹುದು.
ಇದನ್ನೂ ಓದಿ: ದಿನಕ್ಕೆ ಎರಡೇ 2 ಬಾಳೆಹಣ್ಣು ತಿನ್ನಿ ಸಾಕು.. ದೇಹದ ಆರೋಗ್ಯದಲ್ಲಿ ಭಾರೀ ಬದಲಾಣೆಗಳು
/filters:format(webp)/newsfirstlive-kannada/media/media_files/2025/09/09/health_tip-2025-09-09-20-31-38.jpg)
ಹಸಿ ಹಾಲಿನ ಕ್ಲೆನ್ಸರ್ ಮತ್ತು ಸ್ಕ್ರಬ್
ಮನೆಯಲ್ಲಿ ಇರುವಾಗ ಒಂದು ಬೌಲ್​ ತೆಗೆದುಕೊಳ್ಳಿ. ಅದರಲ್ಲಿ ಹಸಿ ಹಾಲನ್ನು ಹಾಕಿಕೊಳ್ಳಿ. ಈ ಹಸಿ ಹಾಲಿಗೆ ಜೇನುತುಪ್ಪವನ್ನು ಸೇರಿಸಬೇಕು. ಬಳಿಕ ಸ್ಪೂನ್​ ಸಹಾಯದಿಂದ ಚೆನ್ನಾಗಿ ಮಿಕ್ಸ್​ ಮಾಡಬೇಕು. ಚೆನ್ನಾಗಿ ಮಿಕ್ಸ್​ ಆದ ಮೇಲೆ ಅದಕ್ಕೆ ಕಾಫಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಬೇಕು. ಇದರಿಂದ ಇದು ಪೇಸ್ಟ್ ಮಾದರಿಯಲ್ಲಿ ಸಿದ್ಧವಾಗುತ್ತದೆ. ಪೇಸ್ಟ್​ ರೀತಿಯಾದದ್ದನ್ನ ಕೈಗಳಿಂದ ಮುಖದ ಮೇಲೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಹೀಗೆ ಮಾಡುವುದರಿಂದ ನೈಸರ್ಗಿಕ ಕ್ಲೆನ್ಸರ್ ಮತ್ತು ಸ್ಕ್ರಬ್ ಆಗಿ ಕೆಲಸ ಮಾಡುತ್ತದೆ. ಇದು ಚರ್ಮವನ್ನು ತಕ್ಷಣದಿಂದಲೇ ಹೊಳೆಯುವಂತೆ ಮಾಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us