ದಿನಕ್ಕೆ ಎರಡೇ 2 ಬಾಳೆಹಣ್ಣು ತಿನ್ನಿ ಸಾಕು.. ದೇಹದ ಆರೋಗ್ಯದಲ್ಲಿ ಭಾರೀ ಬದಲಾಣೆಗಳು ಪಕ್ಕಾ!

ಬಾಳೆ ಹಣ್ಣು ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತಹ ಹಣ್ಣು. ಇದನ್ನು ಎಲ್ಲರೂ ಸಾಧಾರಣ ಹಣ್ಣು ಎಂದು ತಿಳಿದಿದ್ದಾರೆ. ಆದ್ರೆ ಇದರ ವೈಶಿಷ್ಟ್ಯಗಳು ತಿಳಿದರೆ ನಿತ್ಯ ನೀವು ಬಾಳೆಹಣ್ಣುಗಳನ್ನು ಬಿಡದೇ ತಿಂದೇ ತಿನ್ನುತ್ತೀರಿ.

author-image
Bhimappa
Banana
Advertisment

ಬಾಳೆ ಹಣ್ಣು ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತಹ ಹಣ್ಣು. ಇದನ್ನು ಎಲ್ಲರೂ ಸಾಧಾರಣ ಹಣ್ಣು ಎಂದು ತಿಳಿದಿದ್ದಾರೆ. ಆದ್ರೆ ಇದರ ವೈಶಿಷ್ಟ್ಯಗಳು ತಿಳಿದರೆ ನಿತ್ಯ ನೀವು ಬಾಳೆಹಣ್ಣುಗಳನ್ನು ಬಿಡದೇ ತಿಂದೇ ತಿನ್ನುತ್ತೀರಿ. ದಿನಕ್ಕೆ ಎರಡೇ ಎರಡು ಹಣ್ಣುಗಳು ತಿನ್ನುವುದರಿಂದ ನಿಮ್ಮ ಆರೋಗ್ಯದಲ್ಲಿ ಅದ್ಭುತವಾದ ಬದಲಾವಣೆಗಳನ್ನು ಕಾಣಬಹದು. 

ದಿನವಿಡೀ ಆಯಾಸದಿಂದ ಬಳಲುತ್ತಿದ್ದರೆ ನಿತ್ಯ ಎರಡು ಬಾಳೆಹಣ್ಣು ತಿಂದರೆ, ನೈಸರ್ಗಿಕ ಶಕ್ತಿ ವರ್ಧಕವಾಗಿ ನಮಗೆ ಶಕ್ತಿ ನೀಡುತ್ತದೆ. ಗ್ಲೂಕೋಸ್​, ಪ್ರಕ್ಟೋಸ್​ ಹಾಗೂ ಸುಕ್ರೋಸ್ ಹೇರಳವಾಗಿದ್ದು ಇದರ ಜೊತೆ ಫೈಬರ್ ಕೂಡ ಹೆಚ್ಚಿನ ಮಟ್ಟದಲ್ಲಿರುತ್ತದೆ. ಇವು ತಕ್ಷಣ ಶಕ್ತಿನ ಕೊಡುತ್ತವೆ. ವ್ಯಾಯಾಮದ ನಂತರ ಅಥವಾ ಮೊದಲೇ ತಿಂದರೆ ಶಕ್ತಿ ಹೆಚ್ಚಳವಾಗುತ್ತದೆ. 

Banana_New

ಬಾಳೆಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಫೈಬರ್ ಇರುವುದರಿಂದ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ನಿರೋಧಕ ಪಿಷ್ಟ (Resistant Starch) ಇದು ಜೀರ್ಣಕ್ರಿಯೆಯನ್ನು ಆರೋಗ್ಯವಾಗಿ ಇಡುವಲ್ಲಿ ಸಹಾಯ ಮಾಡುತ್ತದೆ. ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. 

ಅಧಿಕ ರಕ್ತದೊತ್ತಡ ಇರುವವರಿಗೆ ಹೃದಯದ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಷೀಯಂ ಇರುವುದರಿಂದ ಸೋಡಿಯಂನ ನಕರಾತ್ಮಕ ಪರಿಣಾಮಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನ ನಿಯಂತ್ರಣದಲ್ಲಿಡುತ್ತದೆ. ಇದರಿಂದ ಸ್ಟ್ರೋಕ್​ ಅನ್ನು ತಪ್ಪಿಸಿಕೊಳ್ಳಬಹದು.  

ಇದನ್ನೂ ಓದಿ:BJP ಧರ್ಮಯುದ್ಧ.. ಬಿ.ವೈ ವಿಜಯೇಂದ್ರ, R ಅಶೋಕ್​​​ ನೇತೃತ್ವದಲ್ಲಿ ಇಂದು ಧರ್ಮಸ್ಥಳ ಚಲೋ

Banana_New_1

ಬಾಳೆಹಣ್ಣುಗಳಲ್ಲಿ ಟ್ರಿಫ್ಟೋಪಾನ್ (Tryptophan) ಎನ್ನುವ ಅಮೈನೋ ಆಮ್ಲ ಇರುತ್ತದೆ. ಇದು ದೇಹದಲ್ಲಿ ಸಿರೊಟೊನಿನ್ (Serotonin) ಹಾರ್ಮೋನ್​ ಆಗಿ ಬದಲಾವಣೆ ಆಗುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಜೊತೆಗೆ ದೇಹದ ಒತ್ತಡ, ಆತಂಕವನ್ನು ಕಡಿಮೆ ಮಾಡುತ್ತದೆ. ವ್ಯಾಯಾಮ ಮಾಡುವವರಿಗೆ ಬಾಳೆಹಣ್ಣು ಹೆಚ್ಚಿನ ಉಪಯೋಗ ನೀಡುತ್ತದೆ. ಇದರಿಂದಲೇ ಸಿರೊಟೊನಿನ್ ಅನ್ನು ಸಂತೋಷದ ಹಾರ್ಮೋನ್​ ಎಂದು ಕೂಡ ಕರೆಯುತ್ತಾರೆ.     

ಇದರಲ್ಲಿರುವ ಪೊಟ್ಯಾಷೀಯಂ ಸ್ನಾಯುವಿನ ಸರಿಯಾದ ಕಾರ್ಯನಿರ್ವಹಣೆಗೆ ಅವಶ್ಯಕವಾಗಿವೆ. ಎಲೆಕ್ಟ್ರೋಲೈಟ್ (Electrolyte Muscle Cramps)​ ಸ್ನಾಯು ಸೆಳೆತ ತಡೆಯಲು ಹಾಗೂ ವ್ಯಾಯಾಮದ ನಂತರ ಬರುವ ನೋವುಗಳ ನಿವಾರಣೆ ಮಾಡುತ್ತದೆ. ಸ್ನಾಯು ಸೆಳೆತದಿಂದ ನೀವು ಬಳಲುತ್ತಿದ್ರೆ ನಿಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿಕೊಳ್ಳುವುದು ಮರೆಯಬೇಡಿ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

eye health, blinking problems Health Tips bananas
Advertisment