/newsfirstlive-kannada/media/media_files/2025/09/01/by_vijayendra-1-2025-09-01-08-38-58.jpg)
ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಖಂಡಿಸಿ ಬಿಜೆಪಿ ಧರ್ಮದ ರಕ್ಷಣಾ ಸಮಾವೇಶ ಹಮ್ಮಿಕೊಂಡಿದೆ. ಹಿಂದೂ ಧಾರ್ಮಿಕ ಕ್ಷೇತ್ರದ ಮೇಲೆ ಟಾರ್ಗೆಟ್ ಆಗ್ತಿದೆ ಅಂತ ಹೇಳಿರುವ ಕೇಸರಿ ಪಡೆ, ದೇಗುಲ ರಕ್ಷಣೆಗೆ ಮುಂದಾಗಿದೆ. ಇವತ್ತು ಧರ್ಮಸ್ಥಳದ ಪರ ಬೃಹತ್ ಯಾತ್ರೆ ನಡೆಸಿ ನೈತಿಕ ಬಲ ತುಂಬಲಿದೆ.
ಧರ್ಮಸ್ಥಳ ವಿರುದ್ಧ ಷಡ್ಯಂತ್ರ, ಹಿಂದೂ ದೇವಸ್ಥಾನದ ಮೇಲೆ ಪಿತೂರಿ, ಕ್ಷೇತ್ರದ ಬಗ್ಗೆ ಅಪಪ್ರಚಾರ, ಇದು ಧರ್ಮಸ್ಥಳದ ಪರ ನಿರಂತರ ಬೆಂಬಲವಾಗಿ ನಿಂತ ಕೇಸರಿ ಪಡೆ, ಇವತ್ತು ರಣಕಹಳೆ ಮೊಳಗಿಸಲಿದೆ. ಧರ್ಮಸ್ಥಳ ಅಪಪ್ರಚಾರ ಖಂಡಿಸಿ ಧರ್ಮಯುದ್ಧ ಸಾರಿದೆ. ವಿಜಯೇಂದ್ರ ಮತ್ತು ಅಶೋಕ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದು, ಧರ್ಮ ಕ್ಷೇತ್ರದಲ್ಲಿಂದು ಹಿಂದೂ ಶಕ್ತಿ ಪ್ರದರ್ಶನ ನಡೆಯಲಿದೆ.
ಕ್ಷೇತ್ರದಲ್ಲಿ ನಡೆಯಲಿದೆ ಧರ್ಮಜಾಗೃತಿ ಸಮಾವೇಶ
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಖಂಡಿಸಿ ಬಿಜೆಪಿ ಹೋರಾಟ ತೀವ್ರಗೊಳಿಸಿದೆ. ಧರ್ಮಸ್ಥಳ ಚಲೋಗೆ ಕರೆ ನೀಡಿರುವ ಬಿಜೆಪಿ ನಾಯಕರು, ಪ್ರಕರಣವನ್ನ ಎನ್ಐಎ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದೆ. ಇಡೀ ಘಟನೆ ಹಿಂದೆ ಷಡ್ಯಂತ್ರ ಅಡಗಿದ್ದು ವಿದೇಶಿ ಫಂಡಿಂಗ್ ಅಡಗಿದೆ ಅಂತ ಆರೋಪಿಸಿದೆ.
ಧರ್ಮಜಾಗೃತಿ ಸಮಾವೇಶ
- ಹಿಂದೂಗಳ ಅಸ್ಮಿತೆ, ನಂಬಿಕೆ ಹಾಗೂ ಭಾವನೆಗಳಿಗೆ ಘಾಸಿ
- ಧರ್ಮ ದ್ರೋಹಿ & ಹಿಂದೂ ವಿರೋಧಿಗಳಿಗೆ ಕಠಿಣ ಎಚ್ಚರಿಕೆ
- ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಬದ್ಧತೆ ತೋರುವ ಉದ್ದೇಶ
- ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ 1 ಲಕ್ಷ ಜನ ಆಗಮನ
- ಕ್ಷೇತ್ರಗಳಿಂದ ಪೂಜೆ ಮಾಡಿಕೊಂಡು ಧರ್ಮಸ್ಥಳಕ್ಕೆ ಭೇಟಿ
- ಇವತ್ತು ಸಹ ಸಾವಿರಾರು ಜನ ಆಗಮಿಸುವ ನಿರೀಕ್ಷೆ ಇದೆ
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ; ಚಿನ್ನಯ್ಯನ ಕಸ್ಟಡಿ ಇಂದಿಗೆ ಅಂತ್ಯ.. ಮತ್ತೆ ವಶಕ್ಕೆ ಪಡೆಯುತ್ತಾ SIT..?
ಇನ್ನು ಸಮಾವೇಶಕ್ಕೂ ಮೊದಲೇ ಬಿಜೆಪಿ ನಾಯಕರು ಮಂಜುನಾಥನ ದರ್ಶನ ಪಡೆಯಲಿದ್ದಾರೆ. ಬಳಿಕ ವೀರೇಂದ್ರ ಹೆಗ್ಗಡೆ ಅವರನ್ನ ಭೇಟಿಯಾಗಲಿದ್ದು, ನಂತ್ರ ಧರ್ಮಸ್ಥಳ ಮುಖ್ಯದ್ವಾರದಿಂದ ಸಮಾವೇಶ ನಡೆಯುವ ಸ್ಥಳದವರಗೂ ಪಾದಯಾತ್ರೆ ಹೊರಡಲಿದ್ದಾರೆ. ದೇವಸ್ಥಾನದ ಪಕ್ಕದಲ್ಲೇ ವೇದಿಕೆ ನಿರ್ಮಾಣ ಆಗಿದ್ದು, ಮಧ್ಯಾಹ್ನನ 2 ಗಂಟೆಗೆ ಬೃಹತ್ ಸಮಾವೇಶ ಆರಂಭ ಆಗಲಿದೆ.
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಅಂತ ದಿನದಿಂದ ದಿನಕ್ಕೆ ಹೋರಾಟ ಜೋರಾಗ್ತಿದೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಪ್ರಕರಣವನ್ನು ಸರ್ಕಾರ ಎನ್‌ಐಎ ತನಿಖೆ ಕೊಡಲೇಬೇಕು ಎಂಬ ಬಿಜೆಪಿ ಒತ್ತಾಯಿಸ್ತಿದೆ. ಸರ್ಕಾರಕ್ಕೆ ಈ ಸಂಬಂಧ ಗಡುವು ನೀಡುವ ಸಾಧ್ಯತೆಯಿದ್ದು, ನಂತರ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಬಿಜೆಪಿ ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ