/newsfirstlive-kannada/media/media_files/2025/08/25/chinnayya-2025-08-25-08-32-57.jpg)
ಒಂದೊಂದಲ್ಲ ಇವರ ಕಥೆಗಳು, 10 ದಿನಗಳಿಂದ ಬಾಯ್ಬಿಟ್ಟ ರೀಲ್ಗಳು ಬಯಲಾಗುತ್ತಿವೆ. ಕಟ್ಟಿದ ಹುಟ್ಟಿದ ಕಥೆಗಳು, ರಾಜ್ಯದ ಮುಂದೆ ಸತ್ಯ ದರ್ಶನ ಆಗುತ್ತಿವೆ. ಈ ಮಧ್ಯೆ ಧರ್ಮಸ್ಥಳ ಕೇಸ್ನ ಮುಖ್ಯ ಪಾತ್ರಧಾರಿ ಬುರುಡಯ್ಯನ ಕಸ್ಟಡಿ ಇವತ್ತು ಅಂತ್ಯವಾಗುತ್ತಿದೆ. ಹೀಗಾಗಿ ಕೋರ್ಟ್ಗೆ ಹಾಜರು ಪಡಿಸುವ ಎಸ್ಐಟಿ, ಇನ್ನಷ್ಟು ದಿನ ವಶಕ್ಕೆ ಕೇಳುವ ಸಾಧ್ಯತೆ ಇದೆ.
ಧರ್ಮಸ್ಥಳ ವಿರುದ್ಧ ಷಡ್ಯಂತ್ರ.. ಇದೆಲ್ಲ ಬುರುಡೆ ಪುರಾಣ!
ಮಂಗಳೂರು- ಉಡುಪಿ ಅಂತ ರೌಂಡ್ ಹೊಡೆಯುತ್ತಿದ್ದ ಎಸ್ಐಟಿ ವೇಹಿಕಲ್ಗಳು, ಮೊನ್ನೆ ಬೆಂಗಳೂರಿಗೆ ತಿರುಗಿದ್ದವು. ರಾಜಧಾನಿಗೆ ಚಿನ್ನಯ್ಯನನ್ನ ಕರೆತಂದು 18 ಗಂಟೆಗಳ ಕಾಲ ತಲಾಶ್ ನಡೆಸಿದೆ. 6 ಬ್ಯಾಗ್ಗಳೊಂದಿಗೆ ಬೆಳ್ತಂಗಡಿ ಕಚೇರಿಗೆ ವಾಪಸ್ ಆಗಿದ್ದು ಕುತೂಹಲವನ್ನ ಇಮ್ಮಡಿಸಿದೆ. ಈ ಮಧ್ಯೆ ಬುರುಡಯ್ಯನ ಕಸ್ಟಡಿ ಇವತ್ತು ಅಂತ್ಯ ಆಗಲಿದ್ದು, ಕೋರ್ಟ್ಗೆ ಹಾಜರು ಪಡಿಸಬೇಕಿದೆ.
ಇವತ್ತು ಕೋರ್ಟ್ಗೆ ಚೆನ್ನನ ಹಾಜರಿ!
- ಆಗಸ್ಟ್ 23ಕ್ಕೆ ದುರುದಾರ ಚಿನ್ನಯ್ಯನನ್ನು ತಮ್ಮ ಕಸ್ಟಡಿಗೆ ಪಡೆದಿದ್ದ SIT
- ತನಿಖೆಯ ದೃಷ್ಟಿಯಿಂದ 10 ದಿನಗಳ ಕಾಲ ಕಸ್ಟಡಿ ಪಡೆದು ವಿಚಾರಣೆ
- ವಿಚಾರಣೆಯ ವೇಳೆ ಮಹತ್ವದ ವಿಚಾರ ಬಾಯಿ ಬಿಟ್ಟಿರುವ ಚೆನ್ನಯ್ಯ
- ಇವತ್ತು ಬೆಳ್ತಂಗಡಿ ಕೋರ್ಟ್ಗೆ ಚೆನ್ನನನ್ನು ಹಾಜರು ಪಡಿಸುವ SIT
- ಅದಕ್ಕೂ ಮೊದಲು ನಡೆಯುವ ಚಿನ್ನಯ್ಯನಿಗೆ ವೈದ್ಯಕೀಯ ಪರೀಕ್ಷೆ
- ಕೋರ್ಟ್ ಹಾಜರು ಪಡಿಸಿ ಮತ್ತೆ ಚೆನ್ನನನ್ನ ವಶಕ್ಕೆ ಕೇಳುವ ಎಸ್ಐಟಿ
- ಮತ್ತೆ ವಶಕ್ಕೆ ಪಡೆಯಲು ರಿಮ್ಯಾಂಡ್ ಅರ್ಜಿ ಸಿದ್ದಪಡಿಸಿರೋ SIT
ಮುಖ್ಯವಾಗಿ ಮಂಡ್ಯ, ತಮಿಳುನಾಡು, ಡೆಲ್ಲಿಯಲ್ಲಿ ಸ್ಥಳ ಮಹಜರ್ ಬಾಕಿ ಇದೆ. ಆರೋಪಿ ಹೇಳಿಕೆ ನೀಡಿರುವ ವ್ಯಕ್ತಿಗಳಿಂದ ವಿಚಾರಣೆ ನಡೆಸಬೇಕಿದೆ. ಅದರಲ್ಲೂ ಕೆಲವರನ್ನ ಮುಖಾಮುಖಿ ವಿಚಾರಣೆ ಬಾಕಿ ಇದೆ ಅಂತ ಕೋರ್ಟ್ಗೆ ಎಸ್ಐಟಿ ಮನವರಿಕೆ ಮಾಡಿಕೊಡಲಿದೆ. ಇನ್ನು, ಆರೋಪಿ ನೀಡಿರುವ ಸ್ಥಳಗಳಲ್ಲಿ ಲಿಖಿತ ದಾಖಲೆ, ಸಿಸಿಟಿವಿ ದಾಖಲಾತಿ ಸೀಜ್ ಮಾಡಲಾಗಿದ್ದು, ಪ್ರಕರಣ ಸಂಬಂಧ ಸಿಡಿಆರ್ ಸೇರಿ ತಾಂತ್ರಿಕ ಸಾಕ್ಷ್ಯ ವಿಚಾರಣೆ ಅಗತ್ಯ ಇದೆ ಅಂತ ರಿಮ್ಯಾಂಡ್ ಅರ್ಜಿಯಲ್ಲಿ ತಿಳಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಒಂಟೆ ಹಾಲನ್ನು ಬಿಳಿ ಚಿನ್ನ ಅನ್ನೋದೇಕೆ..? ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!
ಷಡ್ಯಂತ್ರ ರೂವಾರಿಗಳಿಗೆ ನೋಟಿಸ್ ನೀಡಲು ಸಿದ್ಧವಾಗ್ತಿದೆ SIT
ತನಿಖೆಯ ಭಾಗವಾಗಿ ಮುಂದಿನ ದಿನಗಳಲ್ಲಿ ಮಹೇಶ್ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್, ಸುಜಾತ ಭಟ್ ಎಲ್ಲರಿಗೂ ನೋಟಿಸ್ ನೀಡಲಿಕ್ಕೆ ಎಸ್ಐಟಿ ಸಿದ್ಧತೆ ನಡೆಸಿದೆ. ಈಗಾಗಲೇ ಕೇಸ್ನಲ್ಲಿ ಈ ನಾಲ್ವರ ಪಾತ್ರದ ಬಗ್ಗೆ ಎಸ್ಐಟಿ ಮುಂದೆ ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ.
ಚಿನ್ನಯ್ಯನ ಹೇಳಿಕೆ ದಾಖಲಿಸಿಕೊಂಡಿದ್ದು, ಈಗ ಪೂರಕ ಸಾಕ್ಷ್ಯಗಳನ್ನ ಕಲೆಹಾಕಲು ಎಸ್ಐಟಿ ಮುಂದಾಗಿದೆ. ತನಿಖೆಯ ಭಾಗವಾಗಿ ನೋಟಿಸ್ ಕೊಟ್ಟು ಎಲ್ಲರನ್ನ ವಿಚಾರಣೆಗೆ ಕರೆಯಲು ತಯಾರಿ ನಡೆಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರಕರಣ ಮತ್ತಷ್ಟು ತಿರುವುಗಳನ್ನ ಪಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ