/newsfirstlive-kannada/media/media_files/2025/08/31/camel-milk-2025-08-31-13-55-27.jpg)
ಒಂಟೆ ಹಾಲು ಚಿನ್ನ, ಬೆಳ್ಳಿಗಿಂತ ಹೆಚ್ಚು ದುಬಾರಿ ಎಂದು ನಿಮಗೆ ಗೊತ್ತಾ? ನೈಜೀರಿಯಾ, ಸೊಮಾಲಿಯಾ, ಇಥಿಯೋಪಿಯಾ, ಕೀನ್ಯಾ ಮತ್ತು ಅರಬ್ ದೇಶಗಳಲ್ಲಿ ಒಂಟೆ ಹಾಲು ಪ್ರಮುಖ ಸರಕು ಆಗಿದೆ. ಉತ್ತಮ ಗುಣಮಟ್ಟದ ಕಾರಣ ಇದನ್ನು ‘ಬಿಳಿ ಚಿನ್ನ’ ಅಂತಲೂ ಕರೆಯುತ್ತಾರೆ.
ಯಾಕೆ ಚಿನ್ನ ಬೆಳ್ಳಿಗೆ ಹೋಲಿಕೆ..?
ಒಂಟೆ ಹಾಲನ್ನು ಚಿನ್ನ ಮತ್ತು ಬೆಳ್ಳಿಗೆ ಏಕೆ ಹೋಲಿಸಲಾಗುತ್ತದೆ ಎಂದು ನಿಮಗೆ ಗೊತ್ತಿದೆಯೇ?ಮರುಭೂಮಿಯಲ್ಲಿ ಹಾಲು ಉತ್ಪಾದಿಸುವ ಪ್ರಾಣಿಗಳ ಸಾಕೋದು ಕಷ್ಟ. ಸಾಗಣೆಗೆ ಸಹಾಯ ಮಾಡುವುದರ ಜೊತೆಗೆ ಹಾಲು ನೀಡುವ ಏಕೈಕ ಪ್ರಾಣಿ ಅಂದರೆ ಅದು ಒಂಟೆ. ಇಂದು ಈ ಹಾಲಿನ ಮೌಲ್ಯ ಹೆಚ್ಚಾಗಿದೆ. ಜನ ಇದನ್ನು ಸುಲಭವಾಗಿ ಖರೀದಿಸುತ್ತಾರೆ. ತಜ್ಞರು ಹೇಳುವಂತೆ.. ಒಂಟೆ ಹಾಲು ಸಾಮಾನ್ಯ ಹಾಲಿಗಿಂತ ಹೆಚ್ಚಿನ ಪೋಷಕಾಂಶಗಳು, ಔಷಧೀಯ ಗುಣಗಳು ಮತ್ತು ಶಕ್ತಿಯ ಸಾಮರ್ಥ್ಯವನ್ನು ಹೊಂದಿದೆ. ಒಂಟೆ ಹಾಲಿನಲ್ಲಿ ಹಸು ಅಥವಾ ಎಮ್ಮೆ ಹಾಲಿಗಿಂತ ಹೆಚ್ಚಿನ ಪ್ರೋಟೀನ್, ವಿಟಮಿನ್-ಸಿ ಮತ್ತು ಖನಿಜಗಳಿವೆ.
ಇದನ್ನೂ ಓದಿ:ಆಧಾರ್ ನಂಬರ್ ನೀಡಲಿಲ್ಲ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಿಲ್ಲ, ವ್ಯಕ್ತಿ ಸಾ*ವು
ಒಂಟೆ ಹಾಲಿನ ಬೆಲೆ ಎಷ್ಟು?
ಕೆಲವು ಪ್ರದೇಶಗಳಲ್ಲಿ ಒಂಟೆ ಹಾಲು ಅಪರೂಪ ಮತ್ತು ದುಬಾರಿ. ಭಾರತದಲ್ಲಿ ಒಂಟೆ ಹಾಲಿನ ಬೆಲೆ ಲೀಟರ್‌ಗೆ 50 ರಿಂದ 60 ರೂಪಾಯಿ. ಜಾಗತಿಕ ಮಾರುಕಟ್ಟೆಯಲ್ಲಿ ಲೀಟರ್‌ಗೆ 600 ರಿಂದ 1500 ರೂಪಾಯಿ. ಇನ್ನು ಒಂಟೆ ಹಾಲಿನ ಉತ್ಪಾದನೆಯು ಸೀಮಿತವಾಗಿದೆ. ವಿಶೇಷವಾಗಿ ಮರುಭೂಮಿ ಪ್ರದೇಶಗಳಲ್ಲಿ ಮತ್ತು ಅದರ ಕಡಿಮೆ ಲಭ್ಯತೆಯಿಂದಾಗಿ ಅದನ್ನು ಚಿನ್ನಕ್ಕೆ ಹೋಲಿಸಲಾಗುತ್ತದೆ.
ಒಂಟೆ ಹಾಲು ಏಕೆ ಆರೋಗ್ಯಕರ?
ಒಂಟೆ ಹಾಲಿನಲ್ಲಿ ಪೋಷಕಾಂಶಗಳು ಅಧಿಕ, ಕೊಬ್ಬು ಕಡಿಮೆ ಮತ್ತು ಲ್ಯಾಕ್ಟೋಸ್ ಕಡಿಮೆ ಇರುತ್ತದೆ. ಇದು ಮಧುಮೇಹ ಮತ್ತು ಅಲರ್ಜಿ ಇರೋರಿಗೆ ಪ್ರಯೋಜನ. ಅದಕ್ಕಾಗಿಯೇ ಇದನ್ನು ಸೂಪರ್‌ಫುಡ್ ಅಂತಲೂ ಕರೆಯುತ್ತಾರೆ. ಮಾರುಕಟ್ಟೆಯಲ್ಲಿ ಇದರ ಬೇಡಿಕೆ ವೇಗವಾಗಿ ಹೆಚ್ಚಾಗಿದೆ.
ಇದನ್ನೂ ಓದಿ: ಬೀದಿನಾಯಿಗಳನ್ನು ಡಾಗ್ ಶೆಲ್ಟರ್ ಗೆ ಹಾಕುವ ವಿಷಯದಲ್ಲಿ ಶ್ವಾನಪ್ರಿಯರಿಗೆ ಜಯ, ಸುಪ್ರೀಂಕೋರ್ಟ್ ನಿಂದ ಆದೇಶ ಮಾರ್ಪಡು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ