Advertisment

ಸಿನಿಮಾ ಪ್ರಮೋಷನ್‌ಗಾಗಿ 'ಲಾಂಗ್' ಝಳಪಿಸಿದ ನಟ: ‘ಸ್ಟಾರ್’ ನಾಯಕನ ವಿರುದ್ಧ ಎಫ್‌ಐಆರ್..!

ಸಿನಿಮಾಗೆ ಪ್ರೇಕ್ಷಕರನ್ನು ಸೆಳೆಯಲು, ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡಗಳು ನಾನಾ ರೀತಿಯ ಕಸರತ್ತು, ಗಿಮಿಕ್‌ಗಳಿಗೆ ಮೊರೆ ಹೋಗುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ನಟ ಪಬ್ಲಿಸಿಟಿಗಾಗಿ ಥಿಯೇಟರ್ ಮುಂದೆ ಮಾರಕಾಸ್ತ್ರ ಹಿಡಿದು ನಿಂತು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

author-image
Ganesh Kerekuli
sharath prakash
Advertisment

ಬೆಂಗಳೂರು: ಸಿನಿಮಾಗೆ ಪ್ರೇಕ್ಷಕರನ್ನು ಸೆಳೆಯಲು, ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡಗಳು ನಾನಾ ರೀತಿಯ ಕಸರತ್ತು, ಗಿಮಿಕ್‌ಗಳಿಗೆ ಮೊರೆ ಹೋಗುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ನಟ ಪಬ್ಲಿಸಿಟಿಗಾಗಿ ಥಿಯೇಟರ್ ಮುಂದೆ ಮಾರಕಾಸ್ತ್ರ ಹಿಡಿದು ನಿಂತು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. 'ಸ್ಟಾರ್' (Star) ಎಂಬ ಸಿನಿಮಾದ ನಾಯಕ ನಟ ಶರತ್ ಪ್ರಕಾಶ್ (Sharath Prakash) ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ.

Advertisment

ಹೊಸದಾಗಿ ಬಿಡುಗಡೆಯಾಗಿರುವ 'ಸ್ಟಾರ್' ಚಿತ್ರದ ಪ್ರಮೋಷನ್‌ಗಾಗಿ ನಾಯಕ ನಟ ಶರತ್ ಪ್ರಕಾಶ್, ಬೆಂಗಳೂರಿನ ಚಂದ್ರೋದಯ ಥಿಯೇಟರ್ (Chandrodaya Theatre) ಮುಂದೆ ಮಾರಕಾಸ್ತ್ರ ಹಿಡಿದು ಪೋಸ್ ಕೊಟ್ಟಿದ್ದರು. ಸಾರ್ವಜನಿಕರು ಹಾಗೂ ಪ್ರೇಕ್ಷಕರ ಎದುರೇ ಲಾಂಗ್ ಹಿಡಿದು ನಿಂತು ಸಿನಿಮಾ ಪ್ರಚಾರ ಮಾಡಲು ಹೋಗಿ ಇದೀಗ ಎಡವಟ್ಟಿಗೆ ಸಿಲುಕಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾವನ್ನು ವಿಶ್ವಕಪ್ ಫೈನಲ್‌ಗೆ ಕೊಂಡೊಯ್ದ 5 ಶ್ರೇಷ್ಟ ನಾಯಕರು.. ಲಿಸ್ಟ್​ಗೆ ಸೂರ್ಯ ಎಂಟ್ರಿ..!

sharath prakash (1)

ಆರ್ಮ್ಸ್ ಆ್ಯಕ್ಟ್ ಅಡಿ ಎಫ್‌ಐಆರ್

ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಹಿಡಿದು ಜನರಲ್ಲಿ ಭಯ ಮತ್ತು ಆತಂಕ ಸೃಷ್ಟಿಸಿದ ಆರೋಪದ ಮೇಲೆ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರಿನ ಆಧಾರದ ಮೇಲೆ ಪೊಲೀಸರು ನಟ ಶರತ್ ಪ್ರಕಾಶ್ ವಿರುದ್ಧ ಆಯುಧ ಕಾಯ್ದೆಯಡಿ (Arms Act) ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಬೀದಿಯಲ್ಲಿ ಮಾರಕಾಸ್ತ್ರ ಹಿಡಿದು ಪ್ರಚಾರ ಮಾಡಲು ನಟನ ಜೊತೆಗೆ ಥಿಯೇಟರ್‌ನವರೂ ಕೂಡ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ನಟ ಶರತ್ ಪ್ರಕಾಶ್ ಜೊತೆಗೆ ಚಂದ್ರೋದಯ ಥಿಯೇಟರ್ ಮಾಲೀಕನ ಮೇಲೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

Advertisment

ಇತ್ತೀಚಿನ ದಿನಗಳಲ್ಲಿ ಸಿನಿರಂಗದವರು ಕಾನೂನು ಮತ್ತು ಸುವ್ಯವಸ್ಥೆಯನ್ನು (Law and Order) ತೀರಾ ಹಗುರವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಯಾವುದೇ ಸಿನಿಮಾ ಬಿಡುಗಡೆಯಾದರೂ ಪ್ರೇಕ್ಷಕರ ಗಮನ ಸೆಳೆಯಲು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಇಂತಹ ಅಗ್ಗದ ಗಿಮಿಕ್‌ಗಳ ಮೊರೆ ಹೋಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಫೈನಲ್​ಗೂ ಮುನ್ನ ಬುಮ್ರಾ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನ್ಯೂಜಿಲೆಂಡ್ ಸ್ಟಾರ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sharath Prakash star kannada movie
Advertisment
Advertisment
Advertisment