Advertisment

ಫೈನಲ್​ಗೂ ಮುನ್ನ ಬುಮ್ರಾ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನ್ಯೂಜಿಲೆಂಡ್ ಸ್ಟಾರ್​..!

ಟಿ20 ವಿಶ್ವಕಪ್ 2026ರ (T20 World Cup 2026) ಫೈನಲ್ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ.

author-image
Ganesh Kerekuli
jasprit bumrah (1)
Advertisment

ಟಿ20 ವಿಶ್ವಕಪ್ 2026ರ (T20 World Cup 2026) ಫೈನಲ್ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ. 

Advertisment

ಆದರೆ, ಪ್ರಶಸ್ತಿ ಸುತ್ತಿನ ಕದನಕ್ಕೂ ಮುನ್ನವೇ ಎದುರಾಳಿ ನ್ಯೂಜಿಲೆಂಡ್ ತಂಡ ತನ್ನ ರಣನೀತಿಯನ್ನು ಸ್ಪಷ್ಟಪಡಿಸಿದೆ. ಕಿವೀಸ್ ಪಡೆಯ ಸ್ಟಾರ್ ಆಲ್ ರೌಂಡರ್ ಗ್ಲೆನ್ ಫಿಲಿಪ್ಸ್, ಭಾರತದ ಡೆಡ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಕುರಿತು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಕಲೆ ಹಾಕಿದ್ದ ಭಾರತಕ್ಕೆ, ಡೆತ್ ಓವರ್‌ಗಳಲ್ಲಿ ಬುಮ್ರಾ ಅವರ ಅದ್ಭುತ ಬೌಲಿಂಗ್ ಜಯ ತಂದುಕೊಟ್ಟಿತ್ತು. ಬುಮ್ರಾ ಅವರ ಇದೇ ಭರ್ಜರಿ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡಿರುವ ನ್ಯೂಜಿಲೆಂಡ್, ಫೈನಲ್‌ಗೆ ಬಲವಾದ ಸಿದ್ಧತೆಯೊಂದಿಗೆ ಕಣಕ್ಕಿಳಿಯಲು ಮಾಸ್ಟರ್ ಪ್ಲಾನ್ ಮಾಡಿದೆ.

ಗ್ಲೆನ್ ಫಿಲಿಪ್ಸ್ ಹೇಳಿದ್ದೇನು?

ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ಲೆನ್ ಫಿಲಿಪ್ಸ್, ‘ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ಅವರ ಬೌಲಿಂಗ್‌ನಲ್ಲಿ ಹಲವು ರೀತಿಯ ವೈವಿಧ್ಯತೆಗಳಿವೆ. ವಿಶೇಷವಾಗಿ ಡೆತ್ ಓವರ್‌ಗಳಲ್ಲಿ ಅವರು ಅತ್ಯಂತ ನಿಖರವಾದ ಯಾರ್ಕರ್ (Yorker) ಎಸೆಯುತ್ತಾರೆ. ಆದರೆ, ಉಳಿದೆಲ್ಲಾ ಆಟಗಾರರಂತೆ ಅವರು ಕೂಡ ಒಬ್ಬ ಮನುಷ್ಯ. ಯಾವುದಾದರೂ ಒಂದು ದಿನ ಅವರಿಂದಲೂ ತಪ್ಪುಗಳಾಗಬಹುದು. ಆ ತಪ್ಪಿನ ಲಾಭವನ್ನು ನಾವು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ:ರಜತ್ ಕಿಶನ್ ಮೇಲೆ ಮತ್ತೊಂದು FIR.. ಪೊಲೀಸರ ತನಿಖೆ ಎಲ್ಲಿವರೆಗೆ ಬಂತು..?

ಯಾವುದೇ ಒಂದು ನಿರ್ದಿಷ್ಟ ರಣನೀತಿಯೊಂದಿಗೆ ಕಣಕ್ಕಿಳಿಯುವುದಿಲ್ಲ ಎಂದು ಫಿಲಿಪ್ಸ್ ಸ್ಪಷ್ಟಪಡಿಸಿದ್ದಾರೆ. ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಡಲಿದ್ದು, ಬೌಲರ್‌ಗಳ ಲೈನ್ ಮತ್ತು ಲೆಂತ್‌ಗೆ (Line and Length) ಅನುಗುಣವಾಗಿ ತಮ್ಮ ತಂತ್ರವನ್ನು ಬದಲಾಯಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.

ಬುಮ್ರಾ ವಿರುದ್ಧ ವಿಶೇಷ ರಣನೀತಿ

ಬುಮ್ರಾ ಅವರ 4 ಓವರ್‌ಗಳನ್ನು ಕೇವಲ ರಕ್ಷಣೆ ಮಾಡಿಕೊಂಡು ಆಡುವ (ವಿಕೆಟ್ ಒಪ್ಪಿಸದೇ ಡಿಫೆಂಡ್ ಮಾಡಿಕೊಳ್ಳುವ) ರಣನೀತಿ ರೂಪಿಸುವುದು ಸರಿಯಲ್ಲ ಎಂಬುದು ನ್ಯೂಜಿಲೆಂಡ್ ತಂಡದ ಲೆಕ್ಕಾಚಾರವಾಗಿದೆ. ಫಿಲಿಪ್ಸ್ ಪ್ರಕಾರ, "ಬುಮ್ರಾ ಉತ್ತಮವಾಗಿ ಬೌಲಿಂಗ್ ಮಾಡಿದರೆ, ಅದಕ್ಕೆ ತಕ್ಕಂತೆ ಬ್ಯಾಟ್ಸ್‌ಮನ್‌ಗಳು ಆಡಬೇಕಾಗುತ್ತದೆ. ಒಂದು ವೇಳೆ ಅವರು ಲೆಂತ್ ತಪ್ಪಿದರೆ, ಆ ಅವಕಾಶವನ್ನು ನಗದೀಕರಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದಿದ್ದಾರೆ.

Advertisment

ಫೈನಲ್ ಪಂದ್ಯದ ಮೇಲೆ ಎಲ್ಲರ ಕಣ್ಣು

ಇದೀಗ ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ಮಾರ್ಚ್ 8ರಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಮಹಾಸಂಗ್ರಾಮದ ಮೇಲಿದೆ. ಎರಡೂ ತಂಡಗಳು ಅದ್ಭುತ ಫಾರ್ಮ್‌ನಲ್ಲಿದ್ದು, ಪೈಪೋಟಿ ತೀವ್ರವಾಗಿರುವ ನಿರೀಕ್ಷೆಯಿದೆ. ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿದರೆ, ನ್ಯೂಜಿಲೆಂಡ್ ತನ್ನ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಬ್ಯಾಟರ್‌ಗಳು ಮತ್ತು ಬೌಲರ್‌ಗಳ ನಡುವಿನ ಈ ಕದನದಲ್ಲಿ ಜಸ್‌ಪ್ರೀತ್ ಬುಮ್ರಾ ಅವರಂತಹ ಮಾರಕ ಬೌಲರ್ ಎದುರು ಕಿವೀಸ್ ಬ್ಯಾಟರ್‌ಗಳು ಹೇಗೆ ಅಬ್ಬರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಟೀಮ್ ಇಂಡಿಯಾವನ್ನು ವಿಶ್ವಕಪ್ ಫೈನಲ್‌ಗೆ ಕೊಂಡೊಯ್ದ 5 ಶ್ರೇಷ್ಟ ನಾಯಕರು.. ಲಿಸ್ಟ್​ಗೆ ಸೂರ್ಯ ಎಂಟ್ರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Jasprit Bumrah India vs New Zealand final T20 World Cup 2026 final
Advertisment
Advertisment
Advertisment