Advertisment

ರಜತ್ ಕಿಶನ್ ಮೇಲೆ ಮತ್ತೊಂದು FIR.. ಪೊಲೀಸರ ತನಿಖೆ ಎಲ್ಲಿವರೆಗೆ ಬಂತು..?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' (Bigg Boss) ಮಾಜಿ ಸ್ಪರ್ಧಿ ರಜತ್ ಕಿಶನ್ ಅಲಿಯಾಸ್ ಬುಜ್ಜಿಗೆ (Rajath) ಮತ್ತೊಂದು ಸಂಕಷ್ಟ ಎದುರಾಗಿದೆ. ಬೆದರಿಕೆ ಹಾಗೂ ನಿಂದನೆ ಆರೋಪದಡಿ ರಜತ್ ವಿರುದ್ಧ ನಗರದ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

author-image
Ganesh Kerekuli
Rajath_kishan
Advertisment

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' (Bigg Boss) ಮಾಜಿ ಸ್ಪರ್ಧಿ ರಜತ್ ಕಿಶನ್ ಅಲಿಯಾಸ್ ಬುಜ್ಜಿಗೆ (Rajath) ಮತ್ತೊಂದು ಸಂಕಷ್ಟ ಎದುರಾಗಿದೆ. ಬೆದರಿಕೆ ಹಾಗೂ ನಿಂದನೆ ಆರೋಪದಡಿ ರಜತ್ ವಿರುದ್ಧ ನಗರದ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

Advertisment

ಸಾಮಾಜಿಕ ಕಾರ್ಯಕರ್ತ ಹಾಗೂ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ 'ಡಾಗ್ ಸತೀಶ್' ಅವರ ಆಪ್ತ ಸ್ನೇಹಿತರಾಗಿರುವ ಗಿರೀಶ್ ಕುಮಾರ್ ಎಂಬುವವರು ರಜತ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕೆ.ಆರ್. ಪುರಂ ಪೊಲೀಸರು ರಜತ್ ಹಾಗೂ ಕಿರಣ್ ಎಂಬಿಬ್ಬರ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 351(2) ಮತ್ತು 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ದೂರಿನಲ್ಲಿ ಏನಿದೆ? ಬೆದರಿಕೆ ಹಾಕಿದ್ದೇಗೆ?

ರಜತ್ ಅವರು ತಮಗೆ ಫೋನ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಗಿರೀಶ್ ಕುಮಾರ್ ಆರೋಪಿಸಿದ್ದಾರೆ. 'ಡಾಗ್ ಸತೀಶ್ ಅವರೊಂದಿಗಿನ ಸ್ನೇಹವನ್ನು ಬಿಡಬೇಕು' ಎಂದು ರಜತ್ ತಾಕೀತು ಮಾಡಿದ್ದಲ್ಲದೆ, ಕಾನ್ಫರೆನ್ಸ್ ಕರೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:Rashi bhavishya: ಪ್ರತಿಕ್ಷಣವು ಜಾಗರೂಕರಾಗಿರಬೇಕಾದ ದಿನ, ಈ ರಾಶಿಯ ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲ

Advertisment

ಇದರ ಜೊತೆಗೆ, ದೂರುದಾರ ಗಿರೀಶ್ ಕುಮಾರ್ ಅವರ ಕಾರಿನ ಫೋಟೋವನ್ನು ವಾಟ್ಸಪ್‌ಗೆ ಕಳುಹಿಸಿ ರಜತ್ ಬೆದರಿಕೆ ಹಾಕಿದ್ದಾರಂತೆ. "Sir this is Rajath Buji, call maadtidini call back madthira…illa nave olage kalusbeka?" (ಸರ್, ಇದು ರಜತ್ ಬುಜ್ಜಿ, ಕಾಲ್ ಮಾಡ್ತಿದ್ದೀನಿ ಕಾಲ್ ಬ್ಯಾಕ್ ಮಾಡ್ತೀರಾ.. ಇಲ್ಲ ನಾವೇ ಒಳಗೆ ಕಳಿಸಬೇಕಾ?) ಎಂದು ಮೆಸೇಜ್ ಮೂಲಕ ವಾರ್ನಿಂಗ್ ನೀಡಲಾಗಿದೆ ಎನ್ನಲಾಗಿದೆ.

ಪೊಲೀಸರಿಂದ ತನಿಖೆ ಚುರುಕು, ದೂರುದಾರನಿಗೆ ನೋಟಿಸ್:

ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್. ಪುರಂ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಸದ್ಯ ಕರೆಯಲ್ಲಿ ಮಾತನಾಡಿರೋದು ರಜತ್ ಅವರೇನಾ ಅಥವಾ ಬೇರೆ ವ್ಯಕ್ತಿನಾ ಎಂಬುವುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ದೂರುದಾರ ಗಿರೀಶ್ ಕುಮಾರ್‌ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ರಜತ್ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಬೆದರಿಕೆ ಹಾಕಿರುವ ಆಡಿಯೋ, ಮೆಸೇಜ್ ಸ್ಕ್ರೀನ್‌ಶಾಟ್ ಸೇರಿದಂತೆ ಸೂಕ್ತ ದಾಖಲೆ ಹಾಗೂ ಸಾಕ್ಷ್ಯಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 10 ಕೋಟಿ ಲಾಟರಿ ಗೆದ್ದ ಪಿಕಪ್ ಡ್ರೈವರ್.. ಇವರಿಗಿದೆ ಬೆಂಗಳೂರಿನ ನಂಟು..!

Advertisment

ದೂರುದಾರರು ನೀಡುವ ಸಾಕ್ಷ್ಯಗಳು ಹಾಗೂ ದಾಖಲೆಗಳನ್ನು ಆಧರಿಸಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಬಳಿಕ ರಜತ್ ಅವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲು ಕೆ.ಆರ್. ಪುರಂ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ರಜತ್ ಅವರು ಯಾವ ಕಾರಣದ ಹಿನ್ನೆಲೆಯಲ್ಲಿ ಈ ಬೆದರಿಕೆ ಹಾಕಿದ್ದಾರೆ? ಇದರ ಹಿಂದಿನ ಅಸಲಿ ಕಾರಣವೇನು? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.ವಿಶೇಷ 

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rajath kishan, Akshita Rajath
Advertisment
Advertisment
Advertisment