/newsfirstlive-kannada/media/media_files/2025/08/15/darshan5-2025-08-15-16-50-19.jpg)
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಬೇಲ್ ರದ್ದು ಮಾಡಿದೆ. ಆರೋಪಿಗಳನ್ನು ಆ ಕೂಡಲೇ ಬಂಧಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಹೀಗಾಗಿ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಲು ಮುಂದಾಗಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ಭಾರೀ ಸ್ಫೋಟ; ಜೀವ ಬಿಟ್ಟ ಬಾಲಕ, 9 ಮಂದಿ ಗಂಭೀರ
ಆದರೆ ಆ ಸಮಯದಲ್ಲಿ ದರ್ಶನ್ ಅವರು ಮನೆಯಲ್ಲಿ ಇರಲಿಲ್ಲ. ನಟ ದರ್ಶನ್ ಮೊನ್ನೆಯ ರಾತ್ರಿವರೆಗೂ ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ಬೆಂಗಳೂರಿನಲ್ಲೇ ಇದ್ದರು. ಆದರೆ ನಂತರ ಎಲ್ಲಿಗೆ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಹೌದು, ಸುಪ್ರೀಂ ಕೋರ್ಟ್ನಿಂದ ತೀರ್ಪು ಆಚೆ ಬರುತ್ತಿದ್ದಂತೆ ನಟ ದರ್ಶನ್ ಅವರು ಹೋಗಿದ್ದೆ ಮಗನನ್ನು ನೋಡಲು. ಜೈಲಿಗೆ ಹೋಗೋ ಮೊದಲು ಮಗ ವಿನೀಶ್ನನ್ನು ನೋಡಲು ಹೋಗಿದ್ದರು. ಹೀಗಾಗಿ ದರ್ಶನ್ರನ್ನ ನಟ ಧನ್ವೀರ್ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಏಕೆಂದರೆ, ತಾನು ಜೈಲಿನಲ್ಲಿ ಇದ್ದಾಗ ಮಗ ನನ್ನ ನೋಡಬಾರದು. ಬದಲಾಗಿ ನಾನೇ ಅವನನ್ನು ಮೊದಲೇ ಭೇಟಿಯಾಗಿ ಬಂದೆ ಎಂದು ಅಧಿಕಾರಿಗಳಿಗೆ ಹೇಳಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ