/newsfirstlive-kannada/media/media_files/2025/08/15/bng_vilsongarden_1-2025-08-15-13-11-16.jpg)
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ವಿಲ್ಸನ್ ಗಾರ್ಡನ್‌ನ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಬಾಲಕ ಜೀವ ಕಳೆದುಕೊಂಡಿದ್ದು 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಣ ಕಳೆದುಕೊಂಡ ಬಾಲಕನ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೀಡಲಾಗುವುದು. ಗಾಯಾಳುಗಳ ಖರ್ಚು ಸರ್ಕಾರ ನೋಡಿಕೊಳ್ಳುತ್ತದೆ. ಘಟನೆಯಲ್ಲಿ ಒಟ್ಟು 13 ಮನೆಗಳಿಗೆ ಹಾನಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಾತನಾಡಿದ ಸಿಎಂ, ಮೇಲ್ನೋಟಕ್ಕೆ ಇದು ಸಿಲಿಂಡರ್ ಸ್ಫೋಟದಂತೆ ಕಾಣಿಸುತ್ತದೆ. ಕಸ್ತೂರಮ್ಮ ಎನ್ನುವರ ಮನೆಯಲ್ಲಿ ಸ್ಫೋಟವಾಗಿದ್ದು ಅವರು ಕೂಡ ಗಾಯಗೊಂಡಿದ್ದಾರೆ. ಓರ್ವ ಬಾಲಕ ಕಣ್ಮುಚ್ಚಿದ್ದಾನೆ. ಬಾಲಕನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ರೀತಿ ನೀಡಲಾಗುವುದು. ಇನ್ನು ಗಾಯಾಳುಗಳ ಖರ್ಚು ಸರ್ಕಾರವೇ ಭರಿಸುತ್ತದೆ ಎಂದು ಸಿಎಂ ಹೇಳಿದ್ದಾರೆ.
ನಗರದ ವಿಲ್ಸನ್ ಗಾರ್ಡನ್‌ನ ಮನೆ ಒಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದೆ. ಆದರೆ ಸ್ಫೋಟವು ತೀವ್ರವಾಗಿದ್ದರಿಂದ ಓರ್ವ ಬಾಲಕ ಮುಬಾರಕ್ (10) ಜೀವ ಕಳೆದುಕೊಂಡಿದ್ದಾನೆ. ಜೊತೆಗೆ ಮನೆಯಲ್ಲಿದ್ದಂತ 9 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಇಡೀ ಮನೆಯಲ್ಲಿ ಧ್ವಂಸವಾಗಿದೆ. ಅಲ್ಲದೇ ಅಕ್ಕಪಕ್ಕದ 13 ಮನೆಗಳಿಗೆ ಹಾನಿಯಾಗಿದೆ.
ಇದನ್ನೂ ಓದಿ:ಸಾರಾಗೆ ಕೈ ಕೊಟ್ರಾ ಕ್ಯಾಪ್ಟನ್ ಗಿಲ್..? ಮುಂಬೈನಲ್ಲಿ ಹೊಸ ಬೆಡಗಿ ಜೊತೆ ಶುಭ್ಮನ್ ಸುತ್ತಾಟ!
ಇನ್ನು ಈ ಮನೆ ಕಸ್ತೂರಮ್ಮ ಎನ್ನುವರ ಮನೆಯಾಗಿದೆ. ಇವರು ಕೂಡ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಫಾತೀಮಾ (8), ಸರಸಮ್ಮ (50), ಕಯಾಲ (8) ಶಬ್ರೀನಾ ಬಾನು (35) ಸಂಜಯ್ ಗಾಂಧಿ ಆಸ್ಪತ್ರೆ, ಮೃತ ಬಾಲಕ ಮುಬಾರಕ್ (10) ಮೃತದೇಹ ಸಂಜಯ್ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸುಬ್ರಹ್ಮಣಿ (62) ಅಗಡಿ ಆಸ್ಪತ್ರೆ ಹಾಗೂ ಶೇಕ್ ನಜೀಬ್ ಉಲ್ಲಾ (37) ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಆಡುಗೋಡಿ ಪೊಲೀಸ್ ಮತ್ತು ದಕ್ಷಿಣ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊದಲ ಮಹಡಿಯಲ್ಲಿದ್ದ ಕಸ್ತೂರಮ್ಮ, 8 ವರ್ಷದ ಬಾಲಕಿ, ಸರಸಮ್ಮ ಎನ್ನುವವರಿಗೆ ಗಂಭೀರ ಗಾಯಗಳಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ