ಸಾರಾಗೆ ಕೈ ಕೊಟ್ರಾ ಕ್ಯಾಪ್ಟನ್ ಗಿಲ್..? ಮುಂಬೈನಲ್ಲಿ ಹೊಸ ಬೆಡಗಿ ಜೊತೆ ಶುಭ್​ಮನ್ ಸುತ್ತಾಟ!

ಇಂಗ್ಲೆಂಡ್​ ಪ್ರವಾಸವನ್ನ ಯಶಸ್ವಿಯಾಗಿ ಮುಗಿಸಿಕೊಂಡು ಬಂದ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಇದೀಗ ಫುಲ್​​ ರಿಲ್ಯಾಕ್ಸ್​​​ ಮೂಡ್​​ಗೆ ಜಾರಿದ್ದಾರೆ. ಮುಂಬೈನಲ್ಲಿರುವ ಗಿಲ್​ ಇದೀಗ ಹೊಸ ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ.

author-image
Bhimappa
SARA_GILL_ANJINI
Advertisment

ಕಳೆದೊಂದು ತಿಂಗಳಿನಿಂದ ಆನ್​​ಫೀಲ್ಡ್​​​ ಆಟದ ಕಾರಣಕ್ಕೆ ಶುಭ್​ಮನ್​ ಗಿಲ್​ ಸಖತ್​ ಸುದ್ದಿಯಾಗಿದ್ದರು. ಇದೀಗ ಆಫ್​​ ದ ಫೀಲ್ಡ್​ ಆ್ಯಕ್ಟಿವಿಟಿಯಿಂದ ಇಂಡಿಯನ್​​ ಕ್ಯಾಪ್ಟನ್​​ ಮತ್ತೆ ಸುದ್ದಿಯಾಗಿದ್ದಾರೆ. ಸಾರಾ ತೆಂಡುಲ್ಕರ್​, ಸಾರಾ ಅಲಿಖಾನ್​ ಎಲ್ಲಾ ಮುಗೀತು. ಈಗ ಅಂಜಿನಿ ಧವನ್​​ ಜೊತೆಗೆ ಗಿಲ್​ ಹೆಸರು ಸೌಂಡ್​ ಮಾಡುತ್ತಿದೆ. ಇದಕ್ಕೆ ಬಲವಾದ ಕಾರಣ ಕೂಡ ಇದೆ. 

ನಾಯಕತ್ವದ ಫಸ್ಟ್​ ಟಾಸ್ಕ್​​​​​ನಲ್ಲೇ ಶುಭ್​ಮನ್​ ಗಿಲ್​ ಡಿಸ್ಟಿಂಕ್ಷನ್​ನಲ್ಲಿ ಪಾಸಾಗಿದ್ದಾರೆ. ಆಂಗ್ಲರ ನಾಡಲ್ಲಿ ಯಂಗ್​ ಇಂಡಿಯಾವನ್ನ ಸಮರ್ಥವಾಗಿ ಲೀಡ್​ ಮಾಡಿದ ಶುಭ್​ಮನ್​ ಗಿಲ್​ ಸರಣಿಯಲ್ಲಿ ಸಮಬಲ ಸಾಧಿಸಿ ವಾಪಾಸ್ಸಾಗಿದ್ದಾರೆ. ಇಂಗ್ಲೆಂಡ್​ ಪ್ರವಾಸವನ್ನ ಯಶಸ್ವಿಯಾಗಿ ಮುಗಿಸಿಕೊಂಡು ಬಂದ ಶುಭ್​ಮನ್​ ಗಿಲ್​ ಇದೀಗ ಫುಲ್​​ ರಿಲ್ಯಾಕ್ಸ್​​​ ಮೂಡ್​​ಗೆ ಜಾರಿದ್ದಾರೆ. ಮುಂಬೈನಲ್ಲಿರೋ ಗಿಲ್​ ಇದೀಗ ಹೊಸ ಕಾರಣಕ್ಕೆ ಸುದ್ದಿಯಾಗ್ತಿದ್ದಾರೆ.

GILL_ANJINI_DHAWAN

ಹೊಸ ಹುಡುಗಿಯೊಂದಿಗೆ ಕಾಣಿಸಿಕೊಂಡ ‘ಯುವರಾಜ’.!

ಕ್ರಿಕೆಟ್​​ ಲೋಕಕ್ಕೆ ಕಾಲಿಟ್ಟು ಕೆಲ ಪಂದ್ಯಗಳಲ್ಲಿ ಶೈನ್​ ಆದಾಗಲೇ ಸಚಿನ್​ ಪುತ್ರಿ ಸಾರಾ ತೆಂಡುಲ್ಕರ್​ ಜೊತೆಗೆ ಗಿಲ್​ ಹೆಸರು ತಳುಕು ಹಾಕಿಕೊಂಡಿತ್ತು. ಸಾರಾ-ಶುಭ್​ಮನ್​ ಡೇಟ್​​ ಮಾಡ್ತಿದ್ದಾರೆ ಅನ್ನೋ ರೂಮರ್ಸ್​ ಈಗಲೂ ಜೀವಂತವಾಗೇ ಇದೆ. ಇದ್ರ ಜೊತೆಗೆ ಸಾರಾ ಅಲಿ ಖಾನ್​ ಹೆಸ್ರು ಕೂಡ ಗಿಲ್​ ಜೊತೆಗೆ ಸೇರಿಕೊಂಡಿತ್ತು. ಇದೀಗ ಆ ಲಿಸ್ಟ್​ಗೆ ಹೊಸ ಬೆಡಗಿಯ ಎಂಟ್ರಿಯಾಗಿದೆ. ಮುಂಬೈನಲ್ಲಿ ಹೊಸ ಹುಡುಗಿ ಜೊತೆಗೆ ಟೀಮ್​ ಇಂಡಿಯಾದ ಯುವರಾಜ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್​​ ಬೆಡಗಿಯೊಂದಿಗೆ ಗಿಲ್​ ಡಿನ್ನರ್​​ ಡೇಟ್​​.! 

2-3 ದಿನಗಳ ಹಿಂದೆ ಬಾಂದ್ರಾದ ಪ್ರತಿಷ್ಟಿತ ಹೋಟೆಲ್​ವೊಂದ​ರ ಬಳಿ ಕಾಣಿಸಿಕೊಂಡಿದ್ರು. ಹೋಟೆಲ್​ಗೆ ಬಂದು ಡಿನ್ನರ್​ ಮುಗಿಸಿ ಹೊರ ಹೋಗಿದ್ದಾರೆ. ಗಿಲ್​​ ಬಂದಿದ್ದು ಒಬ್ರೆ, ಹೋಗಿದ್ದು ಒಬ್ರೆ. ಆದ್ರೆ, ಇದ್ರ ನಡುವೆ ಹೋಟೆಲ್​ನಲ್ಲಿ ಒಬ್ಬರನ್ನ ಭೇಟಿಯಾಗಿದ್ದಾರೆ. ಅವ್ರ ಹೆಸ್ರೆ ಅಂಜಿನಿ ಧವನ್​.! ಗಿಲ್​ ಕ್ಯಾಮರಾ ಕಣ್ಣು ತಪ್ಪಿಸಿಕೊಂಡು ಓಡಾಡಿದ್ರು. ಆದ್ರೆ, ಅಂಜಿನಿ ಧವನ್​ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ಡೇಟಿಂಗ್​ ರೂಮರ್ಸ್​ ಜೋರಾಗಿ ಹಬ್ಬಿದೆ. ಹೋಟೆಲ್​ ಬಳಿ ಕಾಣಿಸಿಕೊಂಡ ಮಾತ್ರಕ್ಕೆ ಡೇಟಿಂಗ್​ ರೂಮರ್ಸ್​ ಹಬ್ಬಿರೋದರ ಹಿಂದೆ ಒಂದು ಫ್ಲ್ಯಾಶ್​ಬ್ಯಾಕ್​ ಕಥೆಯಿದೆ. 

2021ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಜೋಡಿ.!

ಶುಭ್​ಮನ್​ ಗಿಲ್​ -ಅಂಜಿನಿ ಧವನ್​ 2021ರ ಡಿಸೆಂಬರ್​​ನಲ್ಲೇ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆಗಲೂ ಕೂಡ ಬಾಂದ್ರಾದ ಹೋಟೆಲ್​ವೊಂದರಲ್ಲಿ ಇಬ್ಬರೂ ಡಿನ್ನರ್​​ಗೆ ಸೇರಿದರು. ಡೇಟಿಂಗ್​ ಗಾಸಿಪ್​ ಹುಟ್ಟಿದ್ದು ಅಂದಿನಿಂದಲೇ. ಆ ಬಳಿಕ ಈ ಜೋಡಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ 4 ವರ್ಷಗಳ ಬಳಿಕ ಇಬ್ಬರೂ ಡಿನ್ನರ್​ಗೆ ಸೇರಿರೋದು ಪ್ರೀತಿ, ಪ್ರೇಮ, ಪ್ರಣಯದ ಗಾಸಿಪ್​​ಗೆ ಮರುಜೀವ ನೀಡಿದೆ. 

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಗೌಡ 7313, ಪ್ರದೂಷ್ 7317.. ದರ್ಶನ್ ಕೈದಿ ನಂಬರ್ ಯಾವುದು?

GILL (17)

ಈ ಅಂಜಿನಿ ಧವನ್​ ಯಾರು ಗೊತ್ತಾ.?

ಅಂದ್ಹಾಗೆ ಈ ಅಂಜಿನಿ ಧವನ್​​ ಬಾಲಿವುಡ್​​ನ ಯುವ ನಟಿ. ಹಿರಿಯ ನಟ ಸಿದ್ಧಾರ್ಥ್​​ ಧವನ್​ರ ಮಗಳು. ಬಾಲಿವುಡ್​​ ಸ್ಟಾರ್​​ ನಟ ವರುಣ್​​ ಧವನ್​ ಇದ್ದಾರಲ್ವಾ.? ಆ ವರುಣ್​ ಧವನ್​ರ ಕುಟುಂಬದವರೇ. ಅಲ್ಬಂ ಸಾಂಗ್​ವೊಂದರ ಮೂಲಕ ಬಾಲಿವುಡ್​​ ಲೋಕಕ್ಕೆ ಕಾಲಿಟ್ಟ ಅಂಜಿನಿ ಧವನ್​, 2024ರಲ್ಲಿ ತೆರೆ ಕಂಡ ಬಿನ್ನಿ ಆ್ಯಂಡ್​ ಫ್ಯಾಮಿಲಿ ಚಿತ್ರದಲ್ಲಿ ಮೇಜರ್​ ರೋಲ್​ ಪ್ಲೇ ಮಾಡಿದರು. ಆ ಬಳಿಕ ಈ ವರ್ಷ ಸಲ್ಮಾನ್​ ಖಾನ್​ ನಟನೆಯ ಸಿಕಂದರ್​ ಚಿತ್ರದಲ್ಲೂ ಸ್ಕ್ರೀನ್​ ಶೇರ್​​ ಮಾಡಿದ್ದಾರೆ. 

ಇಂಗ್ಲೆಂಡ್​​ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಶುಭ್​​ಮನ್​ ಗಿಲ್​​, ಅಂಜಿನಿ ಧವನ್​ ಜೊತೆ ಕಾಣಿಸಿಕೊಂಡಿರೋದ್ರಿಂದ ಜನ ಮರೆತು ಹೋಗಿದ್ದ ಗಾಸಿಪ್​ಗೆ ಮರುಜೀವ ಬಂದಿದೆ. 4 ವರ್ಷಗಳ ಬಳಿಕ ಮೊದಲ ಬಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಡೇಟಿಂಗ್​ ಕಹಾನಿ ಗಾಸಿಪ್​ ಆಗಿಯೇ ಅಂತ್ಯವಾಗುತ್ತಾ?, ಪ್ರೇಮ್​ ಕಹಾನಿಯಾಗಿ ಬದಲಾಗುತ್ತಾ? ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Shubman Gill Captaincy
Advertisment