/newsfirstlive-kannada/media/media_files/2025/08/15/darshan_pavitra-1-2025-08-15-11-53-57.jpg)
ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳು ಮತ್ತೆ ಜೈಲಿಗೆ ಹೋಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ನಿನ್ನೆ ಹೋಗಿದ್ದರು. ಇದರ ಬೆನ್ನಲ್ಲೇ ಇಂದು ದರ್ಶನ್ ಸೇರಿ ಉಳಿದ ಆರೋಪಿಗಳಿಗೆ ಕೈದಿ ನಂಬರ್ ಅನ್ನು ನೀಡಲಾಗಿದೆ.
ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿ ನಂಬರ್ ನೀಡಲಾಗಿದೆ. ಆರೋಪಿ ದರ್ಶನ್ ವಿಚಾರಣಾಧೀನ ಕೈದಿ ನಂಬರ್ 7314, ಪವಿತ್ರಾ ಗೌಡ ಕೈದಿ ನಂಬರ್ 7313, ನಾಗರಾಜ್ ಕೈದಿ ನಂಬರ್ 7315, ಲಕ್ಷಣ್ ಕೈದಿ ನಂಬರ್ 7316, ಪ್ರದೂಷ್ ಕೈದಿ ನಂಬರ್ 7317 ಎನ್ನುವ ನಂಬರ್ಗಳನ್ನು ನೀಡಲಾಗಿದೆ.
ದರ್ಶನ್ & ಗ್ಯಾಂಗ್ ಮತ್ತೆ ಜೈಲು ಸೇರುತ್ತಿದ್ದಂತೆ ಎಡಿಜಿಪಿ ಬಿ.ದಯಾನಂದ್ ಜೈಲಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಬಿ.ದಯಾನಂದ್, ಸದ್ಯ ಕಾರಾಗೃಹ ಇಲಾಖೆ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ದರ್ಶನ್ ಸೇರಿ ಇತರೆ ಆರೋಪಿಗಳಿಗೆ ವಿಶೇಷ ಸವಲತ್ತು ಸಿಗಬಾರದು ಎಂದು ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾವುದೇ ಅಕ್ರಮ ನಡೆಯಬಾರದು. ಮೊಬೈಲ್ ಸೇರಿ ಯಾವುದೇ ನಿಷೇಧಿತ ವಸ್ತುಗಳು ಜೈಲಿನ ಒಳಗೆ ಬರಬಾರದು. ಕರ್ತವ್ಯ ಲೋಪ ಕಂಡು ಬಂದರೆ ಅಂತಹ ಅಧಿಕಾರಿಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಈ ಎರಡು ದಿನ ಧ್ವಜಾರೋಹಣಕ್ಕೂ, ಧ್ವಜ ಹಾರಿಸುವುದಕ್ಕೂ ಇರುವ ವ್ಯತ್ಯಾಸವೇನು?
ದರ್ಶನ್ಗೆ ಮತ್ತೆ ಬೆನ್ನು ನೋವು
ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳು ಮತ್ತೆ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು ಈ ಬಗ್ಗೆ ಅಳಲನ್ನು ತೋಡಿಕೊಂಡಿದ್ದಾರೆ. ಪರಪ್ಪನ ಅಗ್ರಹಾರದ ಜೈಲಿನ ಅಡ್ಮಿಷನ್ನ ಒಂದೇ ಬ್ಯಾರಕ್ನಲ್ಲಿ ದರ್ಶನ್, ನಾಗರಾಜ್, ಲಕ್ಷ್ಮಣ್, ಪ್ರದೂಶ್ ಸೇರಿ ಎಲ್ಲ ಆರೋಪಿಗಳು ಇದ್ದಾರೆ. ರಾತ್ರಿ ಊಟ ಎಂದು ಮುದ್ದೆ, ಚಪಾತಿ, ಅನ್ನ ಸಾಂಬಾರ್ ನೀಡಲಾಗಿತ್ತು.
ಅದರಂತೆ ಪವಿತ್ರಾ ಗೌಡ ಅವರು ಮಹಿಳಾ ಬ್ಯಾರಕ್ನಲ್ಲಿದ್ದು ಯಾರ ಜೊತೆಯೂ ಮಾತನಾಡಿಲ್ಲ. ಮೌನಕ್ಕೆ ಶರಣಾಗಿದ್ದು ಕಣ್ಣೀರು ಹಾಕುತ್ತಿದ್ದಾರೆ. ರಾತ್ರಿಯೂ ಊಟ ಮಾಡದೇ, ಬೆಳಗಿನ ಜಾವದವರೆಗೂ ಅವರು ಚಡಪಡಿಸಿದ್ದಾರೆ. ಅಲ್ಲದೇ ಹೀಗಾಗಿ ಬಿಡುತ್ತಲ್ಲ ಎಂದು ದರ್ಶನ್ ಜೊತೆ ನಾಗರಾಜ್, ಲಕ್ಷ್ಮಣ್ ಮಾತನಾಡಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ