/newsfirstlive-kannada/media/media_files/2025/10/21/nenapirali-prem-2025-10-21-19-11-38.jpg)
ನೆನಪಿರಲಿ ಪ್ರೇಮ್ ದಂಪತಿ 25ನೇ ಮದುವೆ ವಾರ್ಷಿಕೋತ್ಸವ ಸಂಭ್ರಮದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ 25 ವರ್ಷಗಳ ಹಿಂದೆ ಮದುವೆಯಾದ ಜಾಗದಲ್ಲೇ ಮತ್ತೆ ಪ್ರೇಮ್ ದಂಪತಿ ಮದುವೆಯಾಗಿದೆ.
ಕಳೆದ ಆಗಸ್ಟ್ 1 ರಂದು ನಟ ಪ್ರೇಮ್ ಹಾಗೂ ಜ್ಯೋತಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ದೀಪಾವಳಿ ಹಬ್ಬದ ಶುಭಾಶಯವನ್ನು ತಿಳಿಸುತ್ತ, ಪರಸ್ಪರ ಹಾರ ಬದಲಾಯಿಸುವ ವಿಡಿಯೋ ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ ಮಾತನ್ನಾಡಿರುವ ಪ್ರೇಮ್.. ಎಲ್ಲರಿಗೂ ನಮಸ್ಕಾರ. 25 ವರ್ಷಗಳ ಹಿಂದೆ, ವಿನಾಯಕನ ಸನ್ನಿಧಿಯಲ್ಲಿ, ಆತನ ಆಶೀರ್ವಾದದೊಂದಿಗೆ ನಾವಿಬ್ಬರು ಮದುವೆಯಾಗಿದ್ವಿ. ನಾನು ಈಕೆಗೆ ತಾಳಿ ಕಟ್ಟಿದ ಸ್ಥಳ. ಮದುವೆಯಾದ 25 ವರ್ಷದ ನಂತರ ಮತ್ತೆ ಇಲ್ಲಿಗೆ ಬಂದಿದ್ದೇವೆ. ಮದುವೆ ವಾರ್ಷಿಕೋತ್ಸವ ನಿಮಿತ್ತ ಗಣೇಶನ ಆಶೀರ್ವಾದ ಪಡೆಯಲು ಮತ್ತೆ ಇಲ್ಲಿಗೆ ಬಂದಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಇರಲಿ ಎಂದು ಕೋರಿಕೊಂಡಿದ್ದಾರೆ.
ಪ್ರೇಮ್ ಮತ್ತು ಜ್ಯೋತಿ ಅವರದ್ದು ಪ್ರೇಮ ವಿವಾಹವಾಗಿದ್ದು, ಮನೆಯವರ ಒಪ್ಪಿಗೆ ಇಲ್ಲದ ಕಾರಣ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಏಕಾಂತ್ ಪ್ರೇಮ್ ಮತ್ತು ಅಮೃತಾ ಪ್ರೇಮ್ ಎಂಬ ಇಬ್ಬರು ಮಕ್ಕಳು ಇದ್ದಾರೆ. ಅವರ ಮಗಳು ಅಮೃತಾ ಪ್ರೇಮ್ ಕೂಡ ಸಿನಿಮಾಗಳಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಿರ್ದೇಶಕ ರಾಜ್ ನಿಡಿಮೋರ್ ಜೊತೆ ನಟಿ ಸಮಂತಾ ದೀಪಾವಳಿ ಆಚರಣೆ : ಪಟಾಕಿ ಸಿಡಿಸಿ ಸಂಭ್ರಮಿಸಿದ ನಟಿ ಸಮಂತಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ