/newsfirstlive-kannada/media/media_files/2025/09/25/pawan-kalyan-thalwar-2025-09-25-11-41-20.jpg)
ಬೆಂಗಳೂರು: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ (Pawan Kalyan) ಅಭಿನಯದ ಬಹುನಿರೀಕ್ಷಿತ ಚಿತ್ರವಾಗಿರೋ ‘OG’ ಬೆಂಗಳೂರು ಸೇರಿದಂತೆ ಹಲವೆಡೆ ಮಧ್ಯರಾತ್ರಿ ಸಿನಿಮಾ ಪ್ರದರ್ಶನ ಕಂಡಿದೆ. ಬೆಂಗಳೂರು ಮಡಿವಾಳದ ಸಂಧ್ಯಾ ಥಿಯೇಟರ್ ಬಳಿ ಪವನ್ ಕಲ್ಯಾಣ್ ಫ್ಯಾನ್ಸ್ ತಲ್ವಾರ್​ ಹಿಡಿದು ಡ್ಯಾನ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾರೆ.
ಸಾಮಾನ್ಯವಾಗಿ ಪವನ್​ ಕಲ್ಯಾಣ್​ ಸಿನಿಮಾ ಅಂದ್ರೆ ಕ್ರೇಜ್​ ಹೆಚ್ಚಾಗಿರುತ್ತದೆ. ವಿಶೇಷ ಏನಾಪ್ಪ ಅಂದ್ರೆ ಒಜಿ ಸಿನೆಮಾದಲ್ಲಿ ಪವನ್ ಕಲ್ಯಾಣ್ ತಲ್ವರ್ ಹಿಡಿದಿರೋ ದೃಶ್ಯಗಳಿವೆ. ಪವನ್​ ಕಲ್ಯಾಣ್​ ಫ್ಯಾನ್ಸ್ ಬೆಂಗಳೂರು ಮಡಿವಾಳದ ಸಂಧ್ಯಾ ಥಿಯೇಟರ್ ಬಳಿಗೆ ತಲ್ವಾರ್​ ಹಿಡಿದು ಬಂದಿದ್ದಾರೆ.
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಈ ತಲ್ವಾರ್​ ಡಾನ್ಸ್ ಸ್ಥಳೀಯರಿಂದ ವೈರಲ್​ ಆಗಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಮಡಿವಾಳ ಪೊಲೀಸರು ಆಗಮಿಸಿ ವಿಚಾರಿಸಿದ್ದಾರೆ. ಸಿನಿಮಾ ಕ್ರೇಜ್​ಗೆ ಮಡಿವಾಳದ ಸಂಧ್ಯಾ ಥಿಯೇಟರ್ ಬಳಿ ಫ್ಯಾನ್ಸ್ ಜಯನಗರದಲ್ಲಿ 200ರೂಪಾಯಿ ಕೊಟ್ಟು ಪ್ಲಾಸ್ಟಿಕ್ ತಲ್ವಾರ್ ಖರೀಸಿರೊದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕಟೌಟ್ ಮುಂದೆ ಫೋಟೋ ತೆಗೆದುಕೊಳ್ಳಲು ಪ್ಲಾಸ್ಟಿಕ್ ತಲ್ವಾರ್ ತರಲಾಗಿದೆ ಎನ್ನಲಾಗ್ತಿದೆ. ಆದರೆ ತಲ್ವಾರ್ ನೋಡಿದ ಇತರೆ ಸಿನಿ ಪ್ರೇಕ್ಷಕರು ಒಂದು ಕ್ಷಣ ಗಾಬರಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದರು.
ಇದನ್ನೂ ಓದಿ: ಕಿಚ್ಚನ ಪ್ರೀತಿಗೆ ಸಾಟಿ ಇಲ್ಲ.. ಮ್ಯಾಕ್ಸ್ ನಿರ್ದೇಶಕನಿಗೆ ಭರ್ಜರಿ ದಸರಾ ಗಿಫ್ಟ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ