/newsfirstlive-kannada/media/media_files/2025/09/25/sudeep-car-gift-2025-09-25-10-18-37.jpg)
ಕಾರ್ ಗಿಫ್ಟ್ ಕೊಟ್ಟ ಕಿಚ್ಚ Photograph: (ಕಾರ್ ಗಿಫ್ಟ್ ಕೊಟ್ಟ ಕಿಚ್ಚ)
ಬೆಂಗಳೂರು: ಮಾಕ್ಸ್ ಸಿನಿಮಾದ (Max Movie) ನಿರ್ದೇಶಕ ವಿಜಯ್ ಕಾರ್ತಿಕೇಯಗೆ (Vijya Karthikeyan) ಕಿಚ್ಚ ಸುದೀಪ್​ (Kiccha Sudeep) ಬೆಲೆ ಬಾಳುವ ಐಷಾರಾಮಿ ಸ್ಕೋಡಾ (Skoda Kylaq) ಕಾರು ಗಿಫ್ಟ್​ ಆಗಿ ಕೊಟ್ಟಿದ್ದಾರೆ. ಸುದೀಪ್​ ತಮ್ಮ ನಿವಾಸಕ್ಕೆ ನಿರ್ದೇಶಕ ವಿಜಯ್ ಕಾರ್ತಿಕೇಯನ್ನ ಕರೆದು ಸರ್ಪ್ರೈಸ್ ಉಡುಗೊರೆ ನೀಡಿದ್ದಾರೆ.
ಬೆಲೆ ಎಷ್ಟು ಗೊತ್ತಾ..?
ಮ್ಯಾಕ್ಸ್ ಸಿನಿಮಾ ಕಿಚ್ಚ ಸುದೀಪ್​ಗೆ ದೊಡ್ಡ ಗೆಲುವು ತಂದು ಕೊಟ್ಟ ಸಿನಿಮಾವಾಗಿದೆ. ನಿರ್ದೇಶಕ ವಿಜಯ್ ಕಾರ್ತಿಕೇಯಗೆ ಚೊಚ್ಚಲ ಸಿನಿಮಾವಾದ್ರೂ ಅಚ್ಚುಕಟ್ಟಾಗಿ ಸಿನಿಮಾ ಮಾಡಿಕೊಟ್ಟಿದ್ರು. ಇದೀಗ ಮಾರ್ಕ್ ಅನ್ನೋ ಮತ್ತೊಂದು ಸಿನಿಮಾ ನಿರ್ಮಾಣ ಆಗ್ತಿದೆ. ಈ ಮಧ್ಯೆ ಪ್ರೀತಿಯ ನಿರ್ದೇಶಕನಿಗೆ ಕಿಚ್ಚ ಸುದೀಪ್ ಕಾರ್ ಗಿಫ್ಟ್ ಮಾಡಿದ್ದಾರೆ. ತಮ್ಮ ನಿವಾಸಕ್ಕೆ ನಿರ್ದೇಶಕರನ್ನು ಕರೆಸಿ, ಸರ್ಪ್ರೈಸ್ ಆಗಿ ಸ್ಕೋಡಾ ಕಾರನ್ನು ಗಿಫ್ಟಾಗಿ ನೀಡಿದ್ದಾರೆ. ‘ಮಾರ್ಕ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಆ ಸಿನಿಮಾದಲ್ಲಿ ಸುದೀಪ್​ ನಟಿಸುತ್ತಿದ್ದಾರೆ.
ಸ್ಕೋಡಾ ಕಂಪನಿಯ Kylaqನ ‘ಕಾರ್ಬನ್ ಸ್ಟೀಲ್’ ಕಪ್ಪು ಬಣ್ಣದ ಕಾರೊಂದನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಅಭಿಮಾನಿಗಳು ಕಿಚ್ಚನ ಪ್ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಿಚ್ಚ ಸುದೀಪ್​ಗೆ ಯಾರಾದರೂ ಇಷ್ಟ ಆದರೆ ಅವರನ್ನು ಆತ್ಮೀಯವಾಗಿ ನಡೆಸಿಕೊಳ್ಳುತ್ತಾರೆ. ಹಾಗಾಗಿ ಸುದೀಪ್​ ಅಂದರೆ ಹಲವರಿಗೆ ಅಚ್ಚುಮೆಚ್ಚು ತಮ್ಮ ನೆಚ್ಚಿನ ನಟ ಸುದೀಪ್​ ಅವರನ್ನ ಮೀಟ್​ ಮಾಡೋಕೆ ಕಾತುರದಿಂದ ಕಾಯುತ್ತಾರೆ. ಸುದೀಪ್​ ಬಿಗ್ ಬಾಸ್ ನಡೆಸಿಕೊಡುವಾಗ ಸ್ಪರ್ಧಿಗಳಿಗೆ ಗಿಫ್ಟ್ ಆಗಿ ಕೊಟ್ಟ ಸಾಕಷ್ಟು ಉದಾಹರಣೆಗಳಿವೆ. ಈಗ ಅದರಂತೆ ಮ್ಯಾಕ್ಸ್ ನಿರ್ದೇಶಕನಿಗೆ ಬೆಲೆ ಬಾಳುವ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಬೆಸಿಕ್ ವರ್ಷನ್​ಗೆ 9.10 ಲಕ್ಷ ಇದೆ ಎನ್ನಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ