/newsfirstlive-kannada/media/media_files/2025/09/25/smart-phone-charger-2-2025-09-25-09-14-25.jpg)
ಸ್ಮಾರ್ಟ್‌ಫೋನ್ ಚಾರ್ಜರ್ ಅತ್ಯಗತ್ಯ ಗ್ಯಾಜೆಟ್ ಆಗಿ ಮಾರ್ಪಟ್ಟಿದೆ. ಬಹುತೇಕ ಎಲ್ಲಾ ಕಂಪನಿಗಳ ಚಾರ್ಜರ್‌ಗಳು ಬಿಳಿ ಬಣ್ಣದಲ್ಲೇ ಬರುತ್ತವೆ. ಕೆಲವೇ ಕೆಲವು ಬ್ರ್ಯಾಂಡ್‌ಗಳು ಕಪ್ಪು ಅಥವಾ ಇತರ ಬಣ್ಣದಲ್ಲಿ ಬಿಡುಗಡೆ ಮಾಡುತ್ತವೆ. ನಿಮಗೆ ಗೊತ್ತಾ ಏಕೆ ಬಹುತೇಕ ಚಾರ್ಜರ್​​ಗಳು ಬಿಳಿ ಬಣ್ಣದ್ದಾಗಿರುತ್ತವೆ ಎಂದು?
ಯಾಕೆ ಬಿಳಿ ಬಣ್ಣ..?
ಕಂಪನಿಗಳು ಬಿಳಿ ಬಣ್ಣದಲ್ಲಿ ಚಾರ್ಜರ್ ತಯಾರಿಸಲು ಅನೇಕ ಕಾರಣಗಳನ್ನ ನೀಡುತ್ತವೆ. ಬಿಳಿ ಬಣ್ಣವು ಸ್ವಚ್ಛ ಮತ್ತು ಪ್ರೀಮಿಯಂ ಲುಕ್ ಹೊಂದಿರುತ್ತದೆ. ದೂರದಿಂದ ನೋಡಿದರೆ ಬಿಳಿ ಬಣ್ಣವು ಹೊಸದಾಗಿ ಮತ್ತು ಹೊಳೆಯುವಂತೆ ಕಾಣುತ್ತದೆ. ಇದು ಬಳಕೆದಾರರ ಮೇಲೆ ಪ್ರಭಾವ ಬೀರುತ್ತದೆ. ಆಪಲ್‌ನಂತಹ ಕಂಪನಿಗಳು ಚಾರ್ಜರ್ ಜೊತೆ ಕೇಬಲ್ ಅನ್ನೂ ಬಿಳಿಯಾಗಿ ನೀಡುತ್ತದೆ.
ಗಲೀಜು ಮತ್ತು ಡ್ಯಾಮೇಜ್ ಪತ್ತೆ ಸುಲಭ
ಬಿಳಿ ಬಣ್ಣದ ಮೇಲೆ ಸ್ವಲ್ಪ ಕೊಳಕು, ಗೀರು ಅಥವಾ ಇತರೆ ಡ್ಯಾಮೇಜಾದರೆ ಬೇಗ ಗೊತ್ತಾಗುತ್ತದೆ. ಚಾರ್ಜರ್ ಡ್ಯಾಮೇಜ್ ಆಗ್ತಿದೆ, ಏನಾದರೂ ಸಮಸ್ಯೆ ಆಗಬಹುದು ಎಂದು ಬಳಕೆದಾರರಿಗೆ ಬೇಗ ತಿಳಿಸುತ್ತದೆ. ಒಂದು ರೀತಿಯಲ್ಲಿ ಸುರಕ್ಷತೆಯ ಸಂಕೇತವೂ ಆಗಿದೆ. ಕಪ್ಪು ಅಥವಾ ಗಾಢ ಬಣ್ಣದ ಚಾರ್ಜರ್‌ನಲ್ಲಿ ಕೊಳಕು ಸುಲಭವಾಗಿ ಅಡಗಿಕೊಳ್ಳುತ್ತದೆ. ಬಳಕೆದಾರರು ಸಮಯಕ್ಕೆ ಸರಿಯಾಗಿ ಅಪಾಯ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಇನ್ಪೋಸಿಸ್‌ನ ಡಾ. ಸುಧಾಮೂರ್ತಿ ಯಾಮಾರಿಸಲು ಸೈಬರ್ ವಂಚಕರ ಯತ್ನ, ಸುಧಾಮೂರ್ತಿ ಮಾಡಿದ್ದೇನು?
ಉತ್ಪಾದನೆಯ ಸುಲಭತೆ ಮತ್ತು ವೆಚ್ಚ
ಕಂಪನಿಗಳಿಗೆ ಬಿಳಿ ಪ್ಲಾಸ್ಟಿಕ್ ತಯಾರಿಸುವುದು ಸುಲಭ ಮತ್ತು ಅಗ್ಗವಾಗಿದೆ. ಚಾರ್ಜರ್‌ಗಳನ್ನು ತಯಾರಿಸಲು ಬಳಸುವ ಪ್ಲಾಸ್ಟಿಕ್ ಅನ್ನು ಸುಲಭವಾಗಿ ಬಿಳಿ ಬಣ್ಣದಲ್ಲಿ ಅಚ್ಚು ಮಾಡಲಾಗುತ್ತದೆ ಮತ್ತು ಹೆಚ್ಚುವರಿ ಬಣ್ಣಗಳ ಅಗತ್ಯವಿರುವುದಿಲ್ಲ. ಇದರಿಂದಾಗಿ ಬಿಳಿ ಚಾರ್ಜರ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದು ಸುಲಭ ಮತ್ತು ಆರ್ಥಿಕವಾಗುತ್ತದೆ.
ಬಿಳಿ ಬಣ್ಣ ಮತ್ತು ಶಾಖ ನಿರ್ವಹಣೆ
ಚಾರ್ಜಿಂಗ್ ಸಮಯದಲ್ಲಿ ಚಾರ್ಜರ್‌ನಲ್ಲಿ ಶಾಖ ಉತ್ಪತ್ತಿಯಾಗುತ್ತದೆ. ಬಿಳಿ ಬಣ್ಣವು ಹೆಚ್ಚು ಶಾಖವನ್ನು ಹೀರಿಕೊಳ್ಳುವುದಿಲ್ಲ. ಆದರೆ ಕಪ್ಪು ಅಥವಾ ಗಾಢ ಬಣ್ಣದ ಮೇಲ್ಮೈ ಶಾಖವನ್ನು ತ್ವರಿತವಾಗಿ ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ ಬಿಳಿ ಬಣ್ಣವು ಚಾರ್ಜರ್ ಅನ್ನು ತಂಪಾಗಿಡಲು ಸಹಾಯ ಮಾಡುತ್ತದೆ ಮತ್ತು ಚಾರ್ಜರ್​ನ ಜೀವಿತಾವಧಿಯನ್ನೂ ಹೆಚ್ಚಿಸುತ್ತದೆ.
ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್!
ಬಿಳಿ ಬಣ್ಣವನ್ನು ಶಾಂತಿ, ಸರಳತೆ ಮತ್ತು ನಂಬಿಕೆಯ ಸಂಕೇತವೆಂದು ಪರಿಗಣಿಸಲಾಗಿದೆ. ಕಂಪನಿಗಳು ಇದನ್ನು ತಮ್ಮ ಬ್ರ್ಯಾಂಡಿಂಗ್‌ನ ಭಾಗವಾಗಿಸಲು ಇದು ಒಂದು ಕಾರಣ. ವಿಶೇಷವಾಗಿ ಆಪಲ್ ಬಿಳಿ ಚಾರ್ಜರ್‌ಗಳು ಮತ್ತು ಕೇಬಲ್‌ಗಳು ಬಿಳಿ ಬಣ್ಣದ್ದೇ ಆಗಿರುತ್ತದೆ.
ಕಪ್ಪು ಚಾರ್ಜರ್‌ಗಳು ಕೆಟ್ಟದ್ದೇ?
ಕಪ್ಪು ಅಥವಾ ಯಾವುದೇ ಇತರ ಬಣ್ಣದ ಚಾರ್ಜರ್ ಕೆಟ್ಟದ್ದಲ್ಲ. ಬಳಕೆದಾರರು ಪ್ರೀಮಿಯಂ ಮತ್ತು ವೈಯಕ್ತಿಕಗೊಳಿಸಿದ ನೋಟವನ್ನು ಪಡೆಯಲು ಅನೇಕ ಬ್ರ್ಯಾಂಡ್‌ಗಳು ಈಗ ವಿವಿಧ ಬಣ್ಣಗಳಲ್ಲಿ ಚಾರ್ಜರ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಹೆಚ್ಚಿನ ಕಂಪನಿಗಳು ಬಿಳಿ ಬಣ್ಣವನ್ನೇ ಬಯಸುತ್ತವೆ. ಏಕೆಂದರೆ ಅದು ಸುರಕ್ಷಿತ, ಆರ್ಥಿಕ ಮತ್ತು ಸಾರ್ವತ್ರಿಕ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ:ಒಂದು ಮೊಬೈಲ್ ನಂಬರ್​ಗೆ ಎಷ್ಟು ಆಧಾರ್​ ಕಾರ್ಡ್ ಲಿಂಕ್ ಮಾಡಬಹುದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.