/newsfirstlive-kannada/media/post_attachments/wp-content/uploads/2023/07/Credit-card.jpg)
ಕ್ರೆಡಿಟ್ ಕಾರ್ಡ್ (credit card) ಬಳಕೆದಾರರಿಗೆ ಆರ್ಬಿಐ ಬಿಗ್ ಶಾಕ್ ನೀಡಿದೆ. ಹೊಸ ನಿಯಮಗಳ ಪ್ರಕಾರ ಫೋನ್‌ಪೇ, ಪೇಟಿಎಂ, ಕ್ರೆಡ್ ಮತ್ತು ಅಮೆಜಾನ್ ಪೇ ನಂತಹ ಪ್ರಮುಖ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ರೆಂಟ್ ಪೇಮೆಂಟ್ (rent payment) ಸೇವೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.
ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ಕಳೆದ ಕೆಲವು ವರ್ಷಗಳಿಂದ ಬಾಡಿಗೆ ಪಾವತಿಗಳು, ರಿವಾರ್ಡ್ ಪಾಯಿಂಟ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತಿದ್ದವು. ಇದೀಗ ಸೆಪ್ಟೆಂಬರ್ 15 ರಿಂದ ಆರ್ಬಿಐನ ಹೊಸ ನಿಯಮ ಜಾರಿಗೆ ಬಂದಿದ್ದು, ಇವೆಲ್ಲ ಸ್ಥಗಿತಗೊಂಡಿದೆ. ರಿಸರ್ವ್ ಬ್ಯಾಂಕ್ ಹೊಸ ಪಾವತಿ ಸಂಗ್ರಾಹಕ (PA) ಮತ್ತು ಪಾವತಿ ಗೇಟ್‌ವೇ (PG) ಮಾರ್ಗಸೂಚಿಗಳನ್ನು ಹೊರಡಿಸಿದೆ.
ಇದನ್ನೂ ಓದಿ:ರಾಜಕೀಯ ಸಿಂಹಾಸನ ಅಲಂಕರಿಸಿದ AI; ಅಲ್ಬೇನಿಯಾ ಸರ್ಕಾರದಲ್ಲಿ ಎಐಗೆ ಸಚಿವ ಸ್ಥಾನ..!
ಈ ಮಾರ್ಗಸೂಚಿಗಳ ಪ್ರಕಾರ, ಪಾವತಿ ಸಂಗ್ರಾಹಕ ಸಂಸ್ಥೆಗಳು ನೇರ ಒಪ್ಪಂದ ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ಹಣವನ್ನು ಒಟ್ಟುಗೂಡಿಸಬೇಕು. PA ಗಳು ಮಾರುಕಟ್ಟೆ ಸ್ಥಳದಂತೆ ಕಾರ್ಯನಿರ್ವಹಿಸಬಾರದು ಎಂದು RBI ಸ್ಪಷ್ಟವಾಗಿ ಸೂಚಿಸಿದೆ. ಹೀಗಾಗಿ ರೆಂಟಲ್ ಪೇಮೆಂಟ್ ಮಾಡೋರು ಸಂಪೂರ್ಣ KYC (Know Your Customer) ಪೂರ್ಣಗೊಳಿಸದಿದ್ದರೆ, ಫಿನ್‌ಟೆಕ್ ಅಪ್ಲಿಕೇಶನ್‌ಗಳು ಅವರ ಬಾಡಿಗೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ.
ಯಾಕೆ ಈ ನಿರ್ಧಾರ..?
KYC ಮಾನದಂಡಗಳ ಉಲ್ಲಂಘನೆ ಮೂಲಕ ವಂಚನೆ ಕೇಸ್ ಹೆಚ್ಚಾಗುತ್ತಿದೆ. ಕ್ರೆಡಿಟ್ ಕಾರ್ಡ್ ಬಾಡಿಗೆ ಪಾವತಿಗಳಲ್ಲಿ ಆಗಾಗ ಸರಿಯಾದ ಪರಿಶೀಲನೆ ಇಲ್ಲದೆ ಹಣ ವರ್ಗಾವಣೆ ಮಾಡಿರೋದನ್ನ ಆರ್ಬಿಐ ಗಮನಿಸಿದೆ. ಕೆಲವರು ಬಾಡಿಗೆಯ ನೆಪದಲ್ಲಿ ನಿಕಟ ಸಂಬಂಧಿಗಳ ಖಾತೆಗಳಿಗೆ ಹಣ ವರ್ಗಾಯಿಸಿ ನಂತರ ಅದನ್ನು ಕಾನೂನುಬಾಹಿರ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾರೆ. ಹೀಗಾಗಿ ಸರಿಯಾದ ಪರಿಶೀಲನೆ ಇಲ್ಲದೆ ಇನ್ಮುಂದೆ ಅಂತಹ ವಹಿವಾಟುಗಳನ್ನು ನಡೆಸಲಾಗುವುದಿಲ್ಲ ಎಂದು ಆರ್ಬಿಐ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ