/newsfirstlive-kannada/media/media_files/2025/09/13/ai-minister-diella-2025-09-13-09-31-19.jpg)
AI minister Diella
ಕೃತಕ ಬುದ್ಧಿಮತ್ತೆ (AI) ವಿಶ್ವವನ್ನ ಆವರಿಸ್ತಿದ್ದರೂ ಪ್ರಸ್ತುತ ಜಗತ್ತಿನ ತಂತ್ರಜ್ಞಾನ ಕಂಪನಿಗಳು ಮತ್ತು ಸಂಶೋಧನಾ ಪ್ರಯೋಗಾಲಯಗಳಿಗೆ ಸೀಮಿತವಾಗಿರಬಹುದು. ಆದರೆ ಅಲ್ಬೇನಿಯಾ ಒಂದು ಹೆಜ್ಜೆ ಮುಂದೆ ಹೋಗಿದ್ದು, ನೇರವಾಗಿ ರಾಜಕೀಯದ ಸಿಂಹಾಸನದ ಮೇಲೆ ತಂದು ಕೂರಿಸಿದೆ!
ಹೌದು, ಅಲ್ಲಿನ ಪ್ರಧಾನಿ ಎಡಿ ರಾಮ (Edi Rama) ತಮ್ಮ ನೂತನ ಸಚಿವ ಸಂಪುಟದಲ್ಲಿ AI ಸಚಿವರು ಇರುತ್ತಾರೆಂದು ಘೋಷಣೆ ಮಾಡಿದ್ದಾರೆ. ಆ ವರ್ಚುವಲ್ ಮಂತ್ರಿಯ ಹೆಸರು ಡಿಯೆಲ್ಲಾ (Diella). ಡೀಲಾ ಅಂದರೆ ಅಲ್ಬೇನಿಯನ್ ಭಾಷೆಯಲ್ಲಿ ‘ಸೂರ್ಯ’ ಎಂದರ್ಥ. ಡಿಯೆಲ್ಲಾ, ಸಂಪೂರ್ಣವಾಗಿ AI ಆಧಾರಿತ ಡಿಜಿಟಲ್ ಮಂತ್ರಿ. ಇವರು ಸರ್ಕಾರಿ ಹಣಕಾಸು ಯೋಜನೆಗಳ ಮೇಲ್ವಿಚಾರಣೆಯನ್ನ ನೋಡಿಕೊಳ್ಳುತ್ತಾರೆ.
ಇದನ್ನೂ ಓದಿ:200 ರೂ.ಗಿಂತ ಕಡಿಮೆ ಬೆಲೆಗೆ 22 OTT ಆ್ಯಪ್ಗಳಿಗೆ ಉಚಿತ ಪ್ರವೇಶ!
ವಿಶೇಷವಾಗಿ ಸಾರ್ವಜನಿಕ ಟೆಂಡರ್‌ಗಳಲ್ಲಿ ಭ್ರಷ್ಟಾಚಾರ ತಡೆಗಟ್ಟುವುದು ಡಿಯೆಲ್ಲಾ ಕೆಲಸ. ಇನ್ಮುಂದೆ ನಮ್ಮೆಲ್ಲ ಟೆಂಡರ್‌ಗಳು ಶೇಕಡಾ 100 ರಷ್ಟು ಭ್ರಷ್ಟಾಚಾರ ಮುಕ್ತವಾಗಿರುತ್ತವೆ ಎಂದು ರಾಮ ಹೇಳಿದ್ದಾರೆ. ಕೆಲವು ತಿಂಗಳ ಹಿಂದೆ ಇ-ಅಲ್ಬೇನಿಯಾ ಎಂಬ ಸರ್ಕಾರಿ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ವರ್ಚುವಲ್ ಅಸಿಸ್ಟೆಂಟ್ ಆಗಿ ಡೀಲಾರನ್ನು ಪರಿಚಯಿಸಲಾಗಿತ್ತು. ವಿಶೇಷವೆಂದರೆ ಸಾಂಪ್ರದಾಯಿಕ ಅಲ್ಬೇನಿಯನ್ ಜಾನಪದ ವೇಷಭೂಷಣ ಧರಿಸಿರುವ AI ಅವತಾರ ಇದಾಗಿದೆ. ಇದು ಬಳಕೆದಾರರಿಗೆ ಸರ್ಕಾರಿ ಸೇವೆಗಳ ಬಗ್ಗೆ ಮಾಹಿತಿ ನೀಡುತ್ತಿತ್ತು.
ಇದನ್ನೂ ಓದಿ:ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿಗೆ ಬ್ರೇಕ್.. ಖಾಸಗಿ ಸಂಸ್ಥೆಯಿಂದ 3 ಡಿವೈಸ್!
ಈ ಪ್ರಯೋಗ ಸಕ್ಸಸ್ ಆಗುತ್ತಾ..?
ಕಾನೂನು ತಜ್ಞರ ಪ್ರಕಾರ.. AI ಸಚಿವೆ ಡೀಲಾರ ಅಧಿಕೃತ ಸ್ಥಾನಮಾನ ಮತ್ತು ಸಾಂವಿಧಾನಿಕ ಸ್ಥಾನಮಾನದ ಬಗ್ಗೆ ಪ್ರಶ್ನೆಗಳಿವೆ. ಆದರೆ ರಾಮ ಸರ್ಕಾರದ ಈ ಪ್ರಯೋಗ ಭ್ರಷ್ಟಾಚಾರವನ್ನು ನಿಗ್ರಹಿಸುವುದಾಗಿದೆ. ಡಿಜಿಟಲ್ ಆಡಳಿತದಲ್ಲಿ ಅಲ್ಬೇನಿಯಾಗೆ ಹೊಸ ಮೈಲಿಗಲ್ಲು ಕೊಂಡೊಯ್ಯಲಿದೆ ಎಂದು ಹೇಳುತ್ತಿದ್ದಾರೆ. ಅಲ್ಬೇನಿಯಾದಲ್ಲಿ ಇತ್ತೀಚೆಗೆ ಸಂಸತ್ ಚುನಾವಣೆ ನಡೆಯಿತು. ಆಡಳಿತಾರೂಢ ಸಮಾಜವಾದಿ ಪಕ್ಷವು 140 ಸ್ಥಾನಗಳಲ್ಲಿ 83 ಸ್ಥಾನಗಳನ್ನ ಗೆದ್ದು ಸತತ 4ನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. 1990 ರಲ್ಲಿ ಕಮ್ಯುನಿಸ್ಟ್ ಆಡಳಿತದ ಪತನದ ನಂತರ ಭ್ರಷ್ಟಾಚಾರವು ಅಲ್ಬೇನಿಯಾದ ಅತಿದೊಡ್ಡ ಸವಾಲಾಗಿದೆ. ವಾಸ್ತವ ಸಚಿವೆ ಡಿಯೆಲ್ಲಾ ನಿಜವಾಗಿಯೂ ‘ಸೂರ್ಯ’ನಂತೆ ಬೆಳಕನ್ನು ಹರಡುತ್ತಾರೋ ಅಥವಾ ಕೇವಲ ರಾಜಕೀಯ ಪ್ರದರ್ಶನವಾಗಿ ಉಳಿಯುತ್ತಾರೋ ಎಂಬುದನ್ನು ಈಗ ನೋಡಬೇಕಾಗಿದೆ.
ಇದನ್ನೂ ಓದಿ:ಐಫೋನ್ 17 ಸರಣಿ ರಿಲೀಸ್.. ಭಾರತದಲ್ಲಿ ರೇಟ್ ಎಷ್ಟು? ಯಾವಾಗ ಸಿಗುತ್ತೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ