ಐಫೋನ್ 17 ಸರಣಿ ರಿಲೀಸ್.. ಭಾರತದಲ್ಲಿ ರೇಟ್ ಎಷ್ಟು? ಯಾವಾಗ ಸಿಗುತ್ತೆ..?

ದೀರ್ಘ ಕಾಯುವಿಕೆಯ ನಂತರ ಆಪಲ್ ಕೊನೆಗೂ ಐಫೋನ್ 17 ಸರಣಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ 4 ಮಾದರಿಗಳನ್ನು ಪರಿಚಯಿಸಿದೆ. ಸ್ಟ್ಯಾಂಡರ್ಡ್ ಮಾಡೆಲ್ ಐಫೋನ್ 17, ಅಲ್ಟ್ರಾ-ಸ್ಲಿಮ್ ಐಫೋನ್ 17 ಏರ್, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಬಿಡುಗಡೆ ಮಾಡಿದೆ.

author-image
Ganesh Kerekuli
iphone 17
Advertisment

ದೀರ್ಘ ಕಾಯುವಿಕೆಯ ನಂತರ ಆಪಲ್ ಕೊನೆಗೂ ಐಫೋನ್ 17 (iPhone 17) ಸರಣಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ 4 ಮಾದರಿಗಳನ್ನು ಪರಿಚಯಿಸಿದೆ. 

ಸ್ಟ್ಯಾಂಡರ್ಡ್ ಮಾಡೆಲ್ ಐಫೋನ್ 17 (standard iPhone 17), ಅಲ್ಟ್ರಾ-ಸ್ಲಿಮ್ ಐಫೋನ್ 17 ಏರ್ (, iPhone 17 Air), ಐಫೋನ್ 17 ಪ್ರೊ (iPhone 17 Pro) ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ (iPhone 17 Pro Max) ಬಿಡುಗಡೆ ಮಾಡಿದೆ. ಕಂಪನಿಯು ಐಫೋನ್ ಪ್ಲಸ್ ಮಾಡೆಲ್ ಸ್ಥಗಿತಗೊಳಿಸಿ ಹೊಸದಾಗಿ ಏರ್ ಮಾಡೆಲ್ ಪರಿಚಯಿಸಿದೆ. 

ಇದನ್ನೂ ಓದಿ:ಡಿಜಿಟಲ್ ಆರೆಸ್ಟ್ ಮೂಲಕ ಗುರುಗ್ರಾಮದ ಮಹಿಳೆಯ 5.85 ಕೋಟಿ ರೂ ಹಣ ದೋಚಿದ ಸೈಬರ್ ಖದೀಮರು, ಬ್ಯಾಂಕ್ ಬಗ್ಗೆ ಮಹಿಳೆಯ ಪ್ರಶ್ನೆ

iphone 17 (1)

ಐಫೋನ್ 17

6.3 ಇಂಚಿನ ಈ ಐಫೋನ್ 17, 120Hz ರಿಫ್ರೆಶ್ ರೇಟ್ ಹೊಂದಿದೆ. ಯಾವಾಗಲೂ ಡಿಸ್​​ಪ್ಲೇ ಆನ್ ಆಗಿಯೇ ಇರಲಿದೆ. ಅಲ್ಯೂಮಿನಿಯಂ ಮತ್ತು ಗ್ಲಾಸ್ ಫಿನಿಶಿಂಗ್ ಹೊಂದಿರುವ ಇದು 7.3mm ದಪ್ಪ ಇದೆ. ಇತ್ತೀಚಿನ A19 ಚಿಪ್ ಅಳವಡಿಸಲಾಗಿದೆ. 8GB RAM, ಹಿಂಭಾಗದಲ್ಲಿ 48MP + 12MP ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಇನ್ನು ಫ್ರಂಟ್​ನಲ್ಲಿ ಸೆಂಟರ್ ಸ್ಟೇಜ್ ಕ್ಯಾಮೆರಾ ಇದೆ. 

ಐಫೋನ್ ಏರ್

ಇದು 5.6mm ದಪ್ಪ ಇದೆ. ಸುದೀರ್ಘ ಬಾಳಿಕೆಯ ಗಮನದಲ್ಲಿ ಇಟ್ಟುಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಅಂದರೆ ಸೆರಾಮಿಕ್ ಶೀಲ್ಡ್‌ ಹೊಂದಿದೆ. ಇದರ ಫ್ರೇಮ್ ಟೈಟಾನಿಯಂನಿಂದ ಮಾಡಲ್ಪಟ್ಟಿದೆ. ಜೊತೆಗೆ 4 ಬಣ್ಣಗಳಲ್ಲಿ ಐಫೋನ್ ಏರ್ ಸಿಗಲಿದೆ. A19 ಪ್ರೊ ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿದೆ. ಐಫೋನ್ ಇತಿಹಾಸದಲ್ಲೇ ಅತ್ಯಂತ ಗಟ್ಟಿಫೋನ್ ಎಂದು ಕಂಪನಿ ಹೇಳಿಕೊಂಡಿದೆ. 48MP ಫ್ಯೂಷನ್ ಕ್ಯಾಮೆರಾ (ಕ್ಯಾಕ್​ಸೈಡ್ ಕ್ಯಾಮೆರಾ) 18MP ಸೆಂಟರ್ ಸ್ಟೇಜ್ ಕ್ಯಾಮೆರಾ (ಫ್ರಂಟ್) ಹೊಂದಿದೆ.

ಐಫೋನ್ 17 ಪ್ರೊ

ಈ ಬಾರಿ ಆಪಲ್ ಪ್ರೊ ಮಾದರಿಯ ಲುಕ್ ತುಂಬಾನೇ ಡಿಫ್ರೆಂಟ್ ಆಗಿದೆ. 6.3 ಇಂಚಿನ ಸ್ಕ್ರೀನ್ ಹೊಂದಿದೆ. ಆಂಟಿ-ರಿಫ್ಲೆಕ್ಟಿವ್ ಡಿಸ್​ಪ್ಲೇ ಜೊತೆಗೆ ಅಲ್ಯೂಮಿನಿಯಂ ಮತ್ತು ಗ್ಲಾಸ್ ಫಿನಿಶಿಂಗ್‌ ಹೊಂದಿದೆ. 8.7mm ಹೊಂದಿದ್ದು, A19 ಪ್ರೊ ಚಿಪ್‌ಸೆಟ್ ಅಳವಡಿಸಲಾಗಿದೆ. 12GB RAM ಸ್ಟೋರೇಜ್​ ಸಾಮರ್ಥ್ಯ ಹೊಂದಿದೆ. ಕ್ಯಾಮೆರಾ ಬಗ್ಗೆ ಹೇಳುವುದಾದರೆ.. ಹಿಂಭಾಗದಲ್ಲಿ 48MP + 48MP + 48MP ಟ್ರಿಪಲ್ ಸೆಟಪ್ ಹಾಗೂ ಫ್ರಂಟ್​​ನಲ್ಲಿ 18MP ಸೆಂಟರ್ ಸ್ಟೇಜ್ ಫ್ರಂಟ್ ಕ್ಯಾಮೆರಾ ಇದೆ. ಇದು 8K ವೀಡಿಯೊ ರೆಕಾರ್ಡಿಂಗ್ ಹಾಗೂ ಡ್ಯುಯಲ್ ಕ್ಯಾಮೆರಾ ರೆಕಾರ್ಡಿಂಗ್ ಸಪೋರ್ಟ್ ಮಾಡಲಿದೆ. 

ಐಫೋನ್ 17 ಪ್ರೊ ಮ್ಯಾಕ್ಸ್

ಇದು ಬ್ಯಾಟರಿ ಮತ್ತು ಡಿಸ್​ಪ್ಲೇ ಹೊರತುಪಡಿಸಿ ಎಲ್ಲಾ ವೈಶಿಷ್ಟ್ಯಗಳು ಪ್ರೊ ಮಾದರಿಯಂತೆಯೇ ಇವೆ. 6.9 ಡಿಸ್​​ಪ್ಲೇ ಹೊಂದಿದೆ. A19 ಪ್ರೊ ಚಿಪ್‌ಸೆಟ್ ಮತ್ತು ವೇಪರ್ ಚೇಂಬರ್ ಕೂಲಿಂಗ್ ಇದೆ. 

ಭಾರತದಲ್ಲಿ ಬೆಲೆ ಎಷ್ಟು..?

iPhone 1782,900 ರೂಪಾಯಿ
iPhone 17 Air1,19,900 ರೂಪಾಯಿ
iPhone 17 Pro 1,34,900 ರೂಪಾಯಿ
iPhone 17 Pro Max1,49,900 ರೂಪಾಯಿ

ಯಾವಾಗ ಬುಕ್ ಮಾಡಬಹುದು..?

ಶುಕ್ರವಾರದಿಂದ ಮುಂಗಡ ಬುಕ್ ಮಾಡಬಹುದು.  ಅವುಗಳ ಮಾರಾಟ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ:ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿಗೆ ಬ್ರೇಕ್.. ಖಾಸಗಿ ಸಂಸ್ಥೆಯಿಂದ 3 ಡಿವೈಸ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

APPLE IPHONE STORE IN BANGALORE iPhone
Advertisment