/newsfirstlive-kannada/media/post_attachments/wp-content/uploads/2024/03/Jio-and-Airtel.jpg)
ಇತ್ತೀಚೆಗಿನ ದಿನಗಳಲ್ಲಿ ಮೊಬೈಲ್ ಬಳಕೆದಾರರು ಕರೆ ಅಥವಾ ಡೇಟಾಗೆ ‘ಸೀಮಿತ ರೀಚಾರ್ಜ್ ಪ್ಲಾನ್’ (recharge plan) ಹುಡುಕುತ್ತಿಲ್ಲ. ಬದಲಾಗಿ, ಮನರಂಜನಾ ಪ್ಯಾಕ್​​ ಕೂಡ ಅವರಿಗೆ ಮುಖ್ಯವಾಗಿದೆ. ಅಂತವರಿಗಾಗಿ ಜಿಯೋ ಮತ್ತು ಏರ್‌ಟೆಲ್ (jio, airtel) ವಿಶೇಷ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿವೆ.
ಗ್ರಾಹಕರಿಗೆ ಕೈಗೆಟುಕುವ ಪ್ಲಾನ್​ಗಳನ್ನು ಪರಿಚಯಿಸಿದ್ದು, ಅವು ಸಾಕಷ್ಟು ಡೇಟಾ ಒದಗಿಸುತ್ತವೆ. ಮಾತ್ರವಲ್ಲ, 22ಕ್ಕೂ ಹೆಚ್ಚು OTT ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಚಂದಾದಾರಿಕೆ ನೀಡುತ್ತವೆ. ವಿಶೇಷವೆಂದರೆ ಈ ಯೋಜನೆಗಳ ರೀಚಾರ್ಜ್​ ಬೆಲೆ 200 ರೂಪಾಯಿಗಿಂತ ಕಡಿಮೆ! ಕಮ್ಮಿ ಬಜೆಟ್‌ನಲ್ಲಿ ಸಂಪೂರ್ಣ ಮನರಂಜನಾ ಪ್ಯಾಕೇಜ್ ಪಡೆಯಬಹುದು.
ಏರ್‌ಟೆಲ್ ರೂ 195 ಯೋಜನೆ
ಇದು ಏರ್​ಟೆಲ್​​ನ ವಿಶೇಷ ಪ್ಯಾಕ್ ಆಗಿದೆ. 30 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಯಾಕ್‌ನಲ್ಲಿ, ಕಂಪನಿಯು 12GB ಹೈ-ಸ್ಪೀಡ್ ಡೇಟಾ ನೀಡುತ್ತಿದೆ. ಜಿಯೋಹಾಟ್‌ಸ್ಟಾರ್‌ಗೆ ಒಂದು ತಿಂಗಳ ಉಚಿತ ಚಂದಾದಾರಿಕೆ ಇದೆ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂಗೆ ಪ್ರವೇಶ ಪಡೆಯುತ್ತೀರಿ. ಆ ಮೂಲಕ, ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 22 ಕ್ಕೂ ಹೆಚ್ಚು OTT ಅಪ್ಲಿಕೇಶನ್‌ಗಳಿಗೆ ಎಂಟ್ರಿ ನೀಡಬಹುದು.
ಏರ್‌ಟೆಲ್ 181 ರೂಪಾಯಿ ಪ್ಲಾನ್
ಹೆಚ್ಚಿನ ಡೇಟಾ ಬೇಕಾದರೆ ಏರ್‌ಟೆಲ್‌ನ 181 ರೂಪಾಯಿ ಪ್ಯಾಕ್ ಒಳ್ಳೆಯದು. ಇದು 30 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ. 15GB ಡೇಟಾ ಸಿಗುತ್ತದೆ. ಜೊತೆಗೆ ಏರ್‌ಟೆಲ್ Xstream Play Premium ಗೆ ಉಚಿತ ಚಂದಾದಾರಿಕೆ ಸಿಗಲಿದೆ. ಅಂದರೆ ನೀವು Netflix, Zee5, SonyLive, Lionsgate ಮತ್ತು ಇತರ ಹಲವು ಪ್ಲಾಟ್‌ಫಾರ್ಮ್‌ಗಳಿಗೆ ಉಚಿತವಾಗಿ ಪ್ರವೇಶ ಪಡೆಯಬಹುದು.
ಜಿಯೋ ರೂ. 195 ಪ್ಲಾನ್
ಜಿಯೋದ ಈ ಪ್ಯಾಕ್ ದೀರ್ಘಕಾಲದವರೆಗೆ ಬಹಳ ಪ್ರಯೋಜನಕಾರಿ. ಇದರ ವ್ಯಾಲಿಡಿಟಿ 90 ದಿನಗಳು. ಕಂಪನಿಯು ಒಟ್ಟು 15GB ಡೇಟಾ ನೀಡುತ್ತಿದೆ. ವಿಶೇಷವೆಂದರೆ ಜಿಯೋಹಾಟ್‌ಸ್ಟಾರ್‌ಗೆ 90 ದಿನಗಳ ಉಚಿತ ಪ್ರವೇಶ ಇದೆ. ಒಮ್ಮೆ ರೀಚಾರ್ಜ್ ಮಾಡುವ ಮೂಲಕ ಮೂರು ತಿಂಗಳವರೆಗೆ OTT ಪ್ಯಾಕ್ ಪಡೆಯಬಹುದು.
ಜಿಯೋ ರೂ. 175 ಯೋಜನೆ
ಫುಲ್ ಎಂಟರ್ಟೈನ್ಮೆಂಟ್ ಬೇಕು ಅನ್ನೋರಿಗೆ 175 ರೀಚಾರ್ಜ್​ ಪ್ಲಾನ್ ಕೂಡ ಉತ್ತಮ ಆಯ್ಕೆ. 28 ದಿನ ವ್ಯಾಲಿಟಿಟಿ ಹೊಂದಿದೆ. ಈ ಪ್ಲಾನ್​ನಲ್ಲಿ ಒಟ್ಟು 10GB ಡೇಟಾ ಸಿಗಲಿದೆ. ಜೊತೆಗೆ ಕಂಪನಿಯು 10 OTT ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶ ನೀಡುತ್ತಿದೆ. ಆ ಮೂಲಕ ನೀವು ವಿವಿಧ ಫ್ಲಾಟ್​ಫಾರ್ಮ್​​ಗಳಲ್ಲಿ ವೆಬ್ ಸೀರೀಸ್, ಸಿನಿಮಾ ನೋಡಬಹುದು.
ಇದನ್ನೂ ಓದಿ:ಐಫೋನ್ 17 ಸರಣಿ ರಿಲೀಸ್.. ಭಾರತದಲ್ಲಿ ರೇಟ್ ಎಷ್ಟು? ಯಾವಾಗ ಸಿಗುತ್ತೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us