ಒಂದು ಮೊಬೈಲ್ ನಂಬರ್​ಗೆ ಎಷ್ಟು ಆಧಾರ್​ ಕಾರ್ಡ್ ಲಿಂಕ್ ಮಾಡಬಹುದು?

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ದೇಶದ ನಾಗರಿಕರಿಗೆ ಆಧಾರ್ ಕಾರ್ಡ್‌ಗಳನ್ನು ನೀಡುತ್ತದೆ. ಈ ಕಾರ್ಡ್ 12 ಅಂಕೆಗಳ ಸಂಖ್ಯೆಗಳನ್ನು ಹೊಂದಿರುತ್ತದೆ. ಜೊತೆಗೆ ಹೆಸರು, ವಿಳಾಸ, ವಯಸ್ಸು, ಲಿಂಗ, ಬೆರಳಚ್ಚುಗಳು, ಐರಿಸ್ ನಂತಹ ಪ್ರಮುಖ ಮಾಹಿತಿಯನ್ನ ಒಳಗೊಂಡಿರುತ್ತದೆ.

author-image
Ganesh Kerekuli
ಆಧಾರ್​ ಕಾರ್ಡ್​ ಮೇಲೆ ಸರ್ಕಾರದಿಂದ 5 ಹೊಸ ರೂಲ್ಸ್ ಜಾರಿ; ತಿಳಿದುಕೊಳ್ಳದಿದ್ದರೆ ಮುಂದೆ ಸಮಸ್ಯೆ
Advertisment

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ದೇಶದ ನಾಗರಿಕರಿಗೆ ಆಧಾರ್ ಕಾರ್ಡ್‌ಗಳನ್ನು (Aadhar card) ನೀಡುತ್ತದೆ. ಈ ಕಾರ್ಡ್ 12 ಅಂಕೆಗಳ ಸಂಖ್ಯೆಗಳನ್ನು ಹೊಂದಿರುತ್ತದೆ. ಜೊತೆಗೆ ಹೆಸರು, ವಿಳಾಸ, ವಯಸ್ಸು, ಲಿಂಗ, ಬೆರಳಚ್ಚುಗಳು, ಐರಿಸ್ ನಂತಹ ಪ್ರಮುಖ ಮಾಹಿತಿಯನ್ನ ಒಳಗೊಂಡಿರುತ್ತದೆ. ಇದು ಒಬ್ಬ ವ್ಯಕ್ತಿ ಭಾರತೀಯ ಪ್ರಜೆ ಎಂದು ಖಚಿತಪಡಿಸುತ್ತದೆ. ಹೀಗಾಗಿ ಇದನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಇದನ್ನೂ ಓದಿ:ಬಿದ್ದರೋ ಬಿದ್ದರೋ ಲವ್ವಲ್ಲಿ ಬಿದ್ದರೋ.. ಅಭಿ ಆಫ್​ ದ ಫೀಲ್ಡ್​​ನಲ್ಲಿ ಕ್ಲೀನ್​ ಬೋಲ್ಡ್..!

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ನಿಯಮಗಳ ಪ್ರಕಾರ, ಒಂದು ಮೊಬೈಲ್ ಸಂಖ್ಯೆಗೆ ಬಹು ಆಧಾರ್ ಕಾರ್ಡ್‌ಗಳ ಲಿಂಕ್​​ಗೆ ಅವಕಾಶವಿದೆ. ಆದರೆ ಅದರ ಮೇಲೆ ಕೆಲವು ನಿರ್ಬಂಧಗಳಿವೆ. ಒಂದೇ ಕುಟುಂಬದ ಸದಸ್ಯರು ತಮ್ಮ ಆಧಾರ್ ಕಾರ್ಡ್‌ಗಳನ್ನು ಒಂದೇ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬಹುದು.

ಹೇಗೆ..? 

ಉದಾಹರಣೆಗೆ.. ಮಕ್ಕಳು ತಮ್ಮ ಆಧಾರ್ ಕಾರ್ಡ್‌ಗಳನ್ನು ತಮ್ಮ ತಂದೆ ಅಥವಾ ತಾಯಿಯ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬಹುದು. ಅದೇ ರೀತಿ, ಕುಟುಂಬ ಸದಸ್ಯರು ಯಾವುದೇ ಕುಟುಂಬದ ಸದಸ್ಯರ ಆಧಾರ್ ಕಾರ್ಡ್‌ಗಳನ್ನು ಯಾವುದೇ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬಹುದು. ಕುಟುಂಬ ಸದಸ್ಯರಲ್ಲದ ಸ್ನೇಹಿತರು ಸೇರಿದಂತೆ ಯಾರ ಆಧಾರ್ ಕಾರ್ಡ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲು ಅನುಮತಿ ಇಲ್ಲ.

ಇದನ್ನೂ ಓದಿ: ಉಗ್ರನಂತೆ ಪೋಸ್, ಆಮೇಲೆ ಬಿಲ ಸೇರಿದ​.. ಭಾರತ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Aadhar card
Advertisment