/newsfirstlive-kannada/media/media_files/2025/09/23/abhishek-sharma-2025-09-23-10-01-40.jpg)
ಟೀಮ್​ ಇಂಡಿಯಾ ಡೇರಿಂಗ್​ ಬ್ಯಾಟರ್​​ ಅಭಿಷೇಕ್ ಶರ್ಮಾ ಕ್ರಿಕೆಟ್​ ಲೋಕದ ಸೆನ್ಸಷನ್​ ಆಗ್ಬಿಟ್ಟಿದ್ದಾರೆ. ಪಂಜಾಬ್​ ಪುತ್ತರ್​​ ರಣಾರ್ಭಟ ಕಂಡು ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ. ಸೆನ್ಸೇಷನ್​ ಆಟದ ಬಳಿಕ ಸೋಷಿಯಲ್​ ಮೀಡಿಯಾದಲ್ಲಂತೂ ಅಭಿಷೇಕ್ ಹೆಸ್ರು ಸಖತ್​ ಟ್ರೆಂಡಿಂಗ್​ನಲ್ಲಿದೆ. ಇದ್ರ ನಡುವೆ ಓರ್ವ ಸುಂದರಿಯೊಂದಿಗೆ ಅಭಿಷೇಕ್​ ಹೆಸರು ತಳುಕು ಹಾಕಿಕೊಂಡಿದೆ. ಆಕೆಯ ಹೆಸರು ಲೈಲಾ ಫೈಸಲ್​..!
ಇದನ್ನೂ ಓದಿ:2500 ವಿಡಿಯೋಗಳು! ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ
ಆನ್​​ಫೀಲ್ಡ್​​​ನಲ್ಲಿ ಅಭಿಷೇಕ್ ಶರ್ಮಾ ಆರ್ಭಟ ನೋಡಿದವರೆಲ್ಲಾ ಗೂಗಲ್​ನಲ್ಲಿ ಸರ್ಚಿಂಗ್​​ ಜೋರಾಗಿ ನಡೆದಿದೆ. ಅಭಿಷೇಕ್​ ಹಿನ್ನಲೆ, ಕುಟುಂಬ ಬಗ್ಗೆ ಎಲ್ಲಾ ಸರ್ಚ್​ ಮಾಡಿದ್ದಾರೆ. ಇದೇ ವೇಳೆ ​ಅಭಿಷೇಕ್​ ಹುಡುಗಿಯ ಯಾರು ಅನ್ನೋ ಪ್ರಶ್ನೆಗೂ ಉತ್ತರ ಹುಡುಕಾಟ​ ನಡೆಸಿದ್ದಾರೆ. ಹಾಗೇ ಹುಡುಕಾಟ ನಡೆಸಿದವರಿಗೆ ಸಿಕ್ಕ ಉತ್ತರ ಲೈಲಾ ಫೈಸಲ್​
ವೈರಲ್​ ಆಯ್ತು ಫೋಟೋ.. ಶುರುವಾಯ್ತು ಹಲ್​ಚಲ್​.!
ಈ ಲೈಲಾ ಫೈಸಲ್​ಗೂ ಅಭಿಷೇಕ್ ಶರ್ಮಾ ಎಲ್ಲಿಂದ ಸಂಬಂಧ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡಿರಬಹುದು. ಈ ಪ್ರಶ್ನೆಗೆ ಪಕ್ಕಾ ಉತ್ತರ ಸದ್ಯಕ್ಕಂತೂ ಸಿಕ್ಕಿಲ್ಲ. ಆದ್ರೆ, ಇವರಿಬ್ಬರು ತುಂಬಾ ಕ್ಲೋಸ್ ಆಗಿ​​ ಕಾಣಿಸಿಕೊಂಡಿರೋ ಒಂದು ಫೋಟೋ ವೈರಲ್​ ಆಗ್ತಿದೆ. ಈ ಫೋಟೋ ಕಾರಣದಿಂದಲೇ ಇವರಿಬ್ಬರು ರಿಲೇಶನ್​ಶಿಪ್​ನಲ್ಲಿದ್ದಾರೆ ಎಂಬ​ ರೂಮರ್ಸ್​ ಹುಟ್ಟಿದೆ.
ಇದನ್ನೂ ಓದಿ:ಮ್ಯಾಥಿವ್ ಬಳಿ 2500 ಅಶ್ಲೀಲ ವಿಡಿಯೋ ಆರೋಪ.. ಸಂತ್ರಸ್ತೆಗೆ ಮೋಸ ಮಾಡಿದ್ದು ಹೇಗೆ..?
ಇನ್ಸ್​​ಸ್ಟಾಗ್ರಾಂನಲ್ಲಿ ಲೈಲಾ ಫೈಸಲ್​ ಹಾಗೂ ಅಭಿಷೇಕ್​ ಶರ್ಮಾ ಪರಸ್ಪರ ಫಾಲೋ ಮಾಡ್ತಿದ್ದಾರೆ. ಅಭಿಷೇಕ್​ ಶರ್ಮಾ ಜೊತೆಗೆ ಅವರು ತಾಯಿ ಹಾಗೂ ತಂಗಿ ಕೋಮಲ್​ ಶರ್ಮಾ ಕೂಡ ಫಾಲೋ ಮಾಡ್ತಿದ್ದಾರೆ. ಜೊತೆಗೆ ಅಭಿಷೇಕ್ ಶರ್ಮಾ ಆನ್​ಫೀಲ್ಡ್​ನಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿದಾಗೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಹಾಕಿ ಲೈಲಾ ಫೈಸಲ್ ಶುಭಾಶಯ ಕೋರ್ತಾರೆ. ಪೋಟೋ ಹಾಗೂ ಪೋಸ್ಟ್​ಗಳೇ ಸದ್ಯ ಡೇಟಿಂಗ್​ ಗಾಸಿಪ್​ಗೆ ಆಹಾರವಾಗಿವೆ.
ಈ ಲೈಲಾ ಫೈಸಲ್​ ಹಿನ್ನಲೆ ಏನು.?
ಅಭಿಷೇಕ್ ಶರ್ಮಾ ಜೊತೆಗೆ ಲೈಲಾ ಫೈಸಲ್​ ಸದ್ಯ ಸಖತ್​ ಸದ್ದು ಮಾಡ್ತಿದೆ. ದೆಹಲಿಯ ಲೈಲಾ ಫೈಸಲ್​​ social media influencer, ಮಾಡೆಲ್​.! LRF ಅನ್ನೋ ಮಹಿಳೆಯರ ಲಕ್ಸುರಿ clothing brand ಇದ್ಯಲ್ಲ.. ಅದ್ರ ಓನರ್ ಕೂಡ ಹೌದು​. ಶ್ರೀಮಂತ ಕುಟುಂಬದ ಲೈಲಾ ಫೈಸಲ್​ ಸ್ಕೂಲಿಂಗ್​, ಕಾಲೇಜು ಮುಗಿಸಿದ್ದು ಡೆಲ್ಲಿಯಲ್ಲಿ. ಆ ಬಳಿಕ ಈಕೆ ಲಂಡನ್​ ತೆರಳಿ ಫ್ಯಾಶನ್ ​ಡಿಸೈನ್​ ಮಾಡಿ ಬಂದಿದ್ದಾರೆ. ಸದ್ಯ ಸಹೋದರಿ ಜೊತೆಗೂಡಿ LRF clothing brand ನಡೆಸ್ತಿದ್ದಾರೆ.
ಲೈಲಾ ಫೈಸಲ್ ಜೊತೆಗೆ ಅಭಿಷೇಕ್ ಹೆಸರು ತಳುಕು ಹಾಕಿಕೊಂಡಿದೆ. ಇದಕ್ಕೂ ಹಿಂದೆ ಮಾಡೆಲ್​ ದಿಯಾ ಮೆಹ್ತಾ ಜೊತೆಗೆ ಅಭಿಷೇಕ್ ಹೆಸ್ರು ಓಡಾಡಿತ್ತು. 2019ರಲ್ಲಿ ಮಿಸ್​ ರಾಜಸ್ತಾನ್​ ಆಗಿ ಹೊರಹೊಮ್ಮಿದ್ದ ಈಕೆಯ ಜೊತೆಗೆ ಅಭಿಷೇಕ್ ಡೇಟಿಂಗ್ ನಡೆಸ್ತಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಐಪಿಎಲ್​ ವೇಳೆ ಸನ್​ರೈಸರ್ಸ್​ ಹೈದ್ರಾಬಾದ್ ತಂಡದ ಡ್ರೆಸ್ಸಿಂಗ್​ ರೂಮ್​​ಗೆ ದಿಯಾ ಮೆಹ್ತಾ ಎಂಟ್ರಿಕೊಟ್ಟಿದ್ರು. ದಿಯಾ ಮೆಹ್ತಾ ಅಭಿಷೇಕ್ ಶರ್ಮಾ ಕೈ ಹಿಡಿದುಕೊಂಡಿದ್ದ ಒಂದು ಫೋಟೋ ಕೂಡ ವೈರಲ್ ಆಗಿತ್ತು.
ಒಟ್ಟಿನಲ್ಲಿ, ಸದ್ಯ ಅಭಿಷೇಕ್​ ಶರ್ಮಾ ಜೊತೆಗೆ ಲೈಲಾ ಫೈಸಲ್​ ಹೆಸ್ರು ಸಖತ್ತಾಗಿ ಸೌಂಡ್​ ಮಾಡ್ತಿದೆ. ಅಭಿಷೇಕ್​-ಲೈಲಾ ಮಾತ್ರ ಈ ವಿಚಾರದಲ್ಲಿ ಸೈಲೆಂಟಾಗಿದ್ದಾರೆ. ಇವ್ರು ಮೌನ ಮುರಿದ್ರೆ ಮಾತ್ರ ಈ ಗಾಸಿಪ್​ಗೆ ಉತ್ತರ ಸಿಗಲಿದೆ.
ಇದನ್ನೂ ಓದಿ : BCCI ಎಲೆಕ್ಷನ್​ ಕ್ಲೈಮ್ಯಾಕ್ಸ್.. ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಎಲ್ಲಾ ಸ್ಥಾನಗಳಿಗೂ ಹೆಸರು ಫೈನಲ್!