/newsfirstlive-kannada/media/media_files/2025/09/09/darshan-6-2025-09-09-11-51-10.jpg)
ಆರೋಪಿ ದರ್ಶನ್
ಬೆಂಗಳೂರು: ಜೈಲಾಧಿಕಾರಿಗಳ ವಿರುದ್ಧ ಕೋರ್ಟ್ ಆದೇಶ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿ ದರ್ಶನ್​ ಪರ ವಕೀಲರು ಕೋರ್ಟ್​ ಮೆಟ್ಟಿಲೇರಿದ್ದರು. ನ್ಯಾಯಾಲಯದ ಆದೇಶದ ಬಳಿಕವೂ ಜೈಲಾಧಿಕಾರಿಗಳು ದರ್ಶನ್​ಗೆ ಹೆಚ್ಚುವರಿ ದಿಂಬು, ಹಾಸಿಗೆ ಕೊಟ್ಟಿಲ್ಲ ಎಂದು ವಕೀಲರು ಆರೋಪ ಮಾಡಿದ್ದರು.
ಅದರಂತೆ ಇಂದು ದರ್ಶನ್​ಗೆ ಹೆಚ್ಚುವರಿ ದಿಂಬು, ಹಾಸಿಗೆ ಕೊಡುವ ಬಗ್ಗೆ ಸೆಷನ್​ ಕೋರ್ಟ್​ನಿಂದ ಆದೇಶ ಹೊರಬೀಳಲಿದೆ. ಜೈಲಾಧಿಕಾರಿಗಳ ವಿರುದ್ಧ ದರ್ಶನ್​ ಪರ ವಕೀಲರು ಹಲವು ಆರೋಪಗಳನ್ನ ಮಾಡಿದ್ದಾರೆ. ಆರೋಪಿ ದರ್ಶನ್​ನ ಒಂದು ತಿಂಗಳಿಂದ ಕ್ವಾರಂಟೈನ್ ಬ್ಯಾರೆಕ್​ನಲ್ಲಿ ಇಡಲಾಗಿದೆ.
ಆದ್ರೆ ಕೋರ್ಟ್ ಆದೇಶ ಇದ್ರೂ ಕೂಡ ಯಾವ ಸೌಲಭ್ಯವನ್ನೂ ಜೈಲಾಧಿಕಾರಿಗಳು ಕೊಡ್ತಿಲ್ಲ. ದರ್ಶನ್ ಮುಂದೆ 24ಗಂಟೆ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಜೈಲಿನಲ್ಲಿ ದರ್ಶನ್‌ಗೆ ಸ್ವಾತಂತ್ರ್ಯ ಇಲ್ಲ ಎಂದು ಆರೋಪಿಸಿದ್ದರು. ವಾದ-ಪ್ರತಿವಾದವನ್ನ ಆಲಿಸಿರುವ ಕೋರ್ಟ್​ ಇಂದಿಗೆ ತೀರ್ಪನ್ನು ಕಾಯ್ದಿರಿಸಿದೆ. ಸಾಲು ಸಾಲು ಆರೋಪಗಳ ಬಳಿಕ ಜೈಲು ವಾಸಿ ದರ್ಶನ್​​ಗೆ ನೆಮ್ಮದಿ’ಯ ನಿದ್ದೆ ಭಾಗ್ಯ ಸಿಗುತ್ತಾ ಅಂತ ಕಾದು ನೋಡಬೇಕಿದೆ.
ಇದನ್ನೂ ಓದಿ: 2500 ವಿಡಿಯೋಗಳು! ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ