/newsfirstlive-kannada/media/media_files/2025/09/23/bengalore-case-2025-09-23-08-50-00.jpg)
ಬೆಂಗಳೂರು: ರಾಜ್ಯದಲ್ಲಿ ‘ಪ್ರಜ್ವಲ್ ರೇವಣ್ಣ ಮಾದರಿ’ಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕನ ಮೇಲೆ ಸಂತ್ರಸ್ತೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ನನ್ನನ್ನ ದೈಹಿಕವಾಗಿ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಅಲ್ಲದೇ ಕೆಲವು ಮಹಿಳೆಯರು ಮತ್ತು ಯುವತಿಯರ ಜೊತೆಗಿರುವ ಖಾಸಗಿ ಕ್ಷಣವನ್ನು ಸೆರೆ ಹಿಡಿದುಕೊಂಡಿದ್ದಾನೆ. ಆತನ ಬಳಿ ಸುಮಾರು 2500 ವಿಡಿಯೋಗಳಿವೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ.
ಇದನ್ನೂ ಓದಿ:ಮ್ಯಾಥಿವ್ ಬಳಿ 2500 ಅಶ್ಲೀಲ ವಿಡಿಯೋ ಆರೋಪ.. ಸಂತ್ರಸ್ತೆಗೆ ಮೋಸ ಮಾಡಿದ್ದು ಹೇಗೆ..?
ಮ್ಯಾಥಿವ್ ಎಂಬ ವ್ಯಕ್ತಿ ವಿರುದ್ಧ ಈ ಆರೋಪ ಕೇಳಿಬಂದಿದೆ. ಆಘಾತಕ್ಕೆ ಒಳಗಾಗಿರುವ ಸಂತ್ರಸ್ತೆ ಮಹಿಳಾ ಆಯೋಗದ ಕದ ತಟ್ಟಿದ್ದಾರೆ. ಮ್ಯಾಥಿವ್​ ಎನ್ನಲಾಗುತ್ತಿರುವ ಕೆಲ ಅಶ್ಲೀಲ ಫೋಟೋಗಳು, ವಿಡಿಯೋಗಳು ಸಂತ್ರಸ್ತೆ ಬಳಿಯಿವೆ. ಆ ವಿಡಿಯೋಗಳು ಸಂತ್ರಸ್ತೆ ಮಾಡುತ್ತಿರುವ ಆರೋಪಗಳಿಗೆ ಪುಷ್ಟಿ ನೀಡುತ್ತಿವೆ. ಕೆಲ ಯುವತಿಯರು, ಮಹಿಳೆಯರ ಜೊತೆಗಿನ ವಿಡಿಯೋಗಳು ಅದಾಗಿವೆ.
ಇನ್ನು, ನ್ಯೂಸ್​ಫಸ್ಟ್ ಜೊತೆ ಸಂತ್ರಸ್ತೆ ಮಾತನಾಡಿ, ಆರೋಪಿ ಎಂದು ಹೇಳಲಾಗುತ್ತಿರುವ ವ್ಯಕ್ತಿಯು ಕ್ರಿಶ್ಚಿಯನ್ ಆಗಿದ್ದು, ಈತ ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡ್ತಿದ್ದ. ಅವರನ್ನು ದೈಹಿಕವಾಗಿ ಬಳಸಿಕೊಂಡು ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ.
ಪರಿಚಯ ಆಗಿದ್ದು ಹೇಗೆ..?
ಸಂತ್ರಸ್ತೆಗೆ ಈಗಾಗಲೇ ಮದುವೆಯಾಗಿತ್ತು. ಇವರಿಗೆ ಒಂದು ಹೆಣ್ಣು ಮಗು ಇದೆ. ಪತಿಯ ಜೊತೆ ಕಾನೂನಾತ್ಮಕವಾಗಿ ಡಿವೋರ್ಸ್ ಸಂತ್ರಸ್ತೆ ಡಿವೋರ್ಸ್ ಪಡೆದುಕೊಂಡಿದ್ದಾಳೆ. ಇವರ ಮಗಳು ಓದುತ್ತಿದ್ದ ಖಾಸಗಿ ಶಾಲೆಯಲ್ಲಿ ಮ್ಯಾಥಿವ್​ನ ಪರಿಚಯವಾಗಿದೆ. ಮ್ಯಾಥಿವ್, ಆ ಶಾಲೆಯಲ್ಲಿ ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕನಾಗಿ ಕೆಲಸ ಮಾಡ್ತಿದ್ದಾನೆ.
ಇಬ್ಬರ ನಡುವೆ ಪರಿಚಯ, ಬಳಿಕ ಜೊತೆಯಾಗಿ ವಾಸ ಮಾಡಿದ್ದಾರೆ. ಸಂತ್ರಸ್ತೆ ಹೇಳಿಕೆ ಪ್ರಕಾರ ಇಬ್ಬರು ಚರ್ಚ್ ಮುಂದೆ ಮದ್ವೆಯಾಗಿದ್ದಾರಂತೆ. ಜೊತೆಗಿದ್ದಾಗ ದೈಹಿಕ ಸಂಪರ್ಕ ಕ್ಷಣದ ವಿಡಿಯೋವನ್ನ ಮ್ಯಾಥಿವ್ ಮಾಡಿದ್ದಾನೆ. ಮದುವೆ ಆದಮೇಲೆ ನನಗೆ ಈತನ ಅಸಲಿ ವಿಚಾರ ಗೊತ್ತಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಕಾಂತಾರ ಚಾಪ್ಟರ್ -1 ಟ್ರೈಲರ್​ಗೆ ಭಾರೀ ಮೆಚ್ಚುಗೆ; ಕೆಲವೇ ಗಂಟೆಯಲ್ಲಿ ಕೋಟಿಗಟ್ಟಲೆ ವೀಕ್ಷಣೆ..!
ನಾವು ಕೆಲ ವರ್ಷಗಳ ಕಾಲ ಜೊತೆಯಾಗಿದ್ವಿ. ಮೊನ್ನೆ ರಾತ್ರಿ ಮಲಗಿದ್ದಾಗ ನನ್ನ ಮೊಬೈಲ್ ಸಮೇತ ಈತ ಪರಾರಿ ಆಗಿದ್ದಾನೆ. ನನ್ನ ಮೊಬೈಲ್​ನಲ್ಲಿ ಮತ್ತಷ್ಟು ಸಾಕ್ಷಿ ಇತ್ತು. ಅದಕ್ಕೆ ಮೊಬೈಲ್ ಸಮೇತ ಜೂಟ್ ಆಗಿದ್ದಾನೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ