Advertisment

ಯೂಟ್ಯೂಬರ್​ ಮುಕಳೆಪ್ಪ ಮದ್ವೆ ಕೇಸ್​ಗೆ ಟ್ವಿಸ್ಟ್​..! ಪತ್ನಿ ಗಾಯತ್ರಿಯಿಂದ ಮಹತ್ವದ ಹೇಳಿಕೆ

ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ಮದುವೆ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಮುಕಳೆಪ್ಪ ವಿರುದ್ಧ ಯುವತಿ ತಂದೆ ತಾಯಿ, ಹಿಂದೂಪರ ಸಂಘಟನೆಗಳು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಮತ್ತೊಮ್ಮೆ ಈ ಇಬ್ಬರ ಗದ್ದಲ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

author-image
Ganesh Kerekuli
mukaleppa
Advertisment

ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ಮದುವೆ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಮುಕಳೆಪ್ಪ ವಿರುದ್ಧ ಯುವತಿ ತಂದೆ ತಾಯಿ, ಹಿಂದೂಪರ ಸಂಘಟನೆಗಳು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಮತ್ತೊಂದು ಈ ಇಬ್ಬರ ಗದ್ದಲ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Advertisment

ಮುಕುಳೆಪ್ಪ ಮೇಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಿದೆ. ಇದರ ಬೆನ್ನಲ್ಲೇ ಮುಕಳೆಪ್ಪ ಪತ್ನಿ ಗಾಯತ್ರಿ.. ವಕೀಲರ ಜೊತೆ ಪೊಲೀಸ್​ ಠಾಣೆಗೆ ಆಗಮಿಸಿ, ವಿಚಾರಣೆಗೆ ಹಾಜರಾದ್ರು.. ಯುವತಿ ಠಾಣೆಗೆ ಬರ್ತಿದ್ದಂತೆ ಹಿಂದೂ ಪರ ಸಂಘಟನೆಗಳು, ಗಾಯತ್ರಿ ಜೊತೆ ಮಾತನಾಡಲು ಅವಕಾಶ ಕೊಡುವಂತೆ ಪಟ್ಟು ಹಿಡಿದ್ರು. ಈ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆದು ಹೈಡ್ರಾಮಾ ಸೃಷ್ಟಿ ಆಗಿತ್ತು.

3 ಗಂಟೆಗಳ ವಿಚಾರಣೆ ಬಳಿಕ ಸಾಂತ್ವನ ಕೇಂದ್ರಕ್ಕೆ ಶಿಫ್ಟ್​

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮಿ ಪಾಟೀಲ್  ಸಮ್ಮುಖದಲ್ಲಿ ಪೊಲೀಸರು ಮುಕಳೆಪ್ಪ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದ್ರು. ಈ ವೇಳೆ ಲವ್​ ಜಿಹಾದ್​ ಆರೋಪ ನಿರಾಕರಿಸಿದ ಯುವತಿ. ನಾವಿಬ್ಬರು ಎರಡೂವರೆ ವರ್ಷ ಪ್ರೀತಿಸಿ.. ಸ್ವ-ಇಚ್ಛೆಯಿಂದ ಮದುವೆ ಆಗಿದ್ದೇವೆ. ನಮಗೆ ಜೀವ ಬೆದಿರಕೆ ಇದ್ದು ರಕ್ಷಣೆ ನೀಡಬೇಕು. ನಮ್ಮ ತಾಯಿ ನಮ್ಮಿಬ್ಬರ ಮದುವೆಗೆ ತುಂಬಾನೇ ಸಪೋರ್ಟ್ ಮಾಡಿದ್ದಾರೆ. ಅವರು ಮಾಡಿರುವ ದಾಖಲೆಗಳೆಲ್ಲ ನನ್ನ ಬಳಿ ಇದೆ. ಆದರೆ ಇವತ್ತು ಯಾರ ಮಾತನ್ನು ಕೇಳಿಕೊಂಡು ಹೀಗೆ ಮಾಡ್ತಿದ್ದಾಳೆ ಅಂತಾ ನನಗೆ ಗೊತ್ತಾಗುತ್ತಿಲ್ಲ ಎಂದು ಬೇಸರ ಹೊರ ಹಾಕಿದ್ದಾಳೆ. 

ಇದನ್ನೂ ಓದಿ:ದಸರಾದಲ್ಲಿ ಅತ್ಯಂತ ದೊಡ್ಡ ಸೆಲೆಬ್ರೇಟಿ ಯಾರು.. ಯದುವೀರ್‌ ಒಡೆಯರ್‌ ಹೇಳಿದ ಹೆಸರು..?

Advertisment

ವಿಚಾರಣೆ ಬಳಿಕ ಗಾಯತ್ರಿಯನ್ನು ಬಿಗಿ ಭದ್ರತೆಯಲ್ಲಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್​ ಮಾಡಲಾಯ್ತು. ಉತ್ತರ ಕನ್ನಡ ಜಿಲ್ಲೆ ಮುಂಡಗೋಡಿನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಕಲಿ ದಾಖಲೆ ಸಲ್ಲಿಸಿ, ಮುಕಳೆಪ್ಪ ಮದುವೆ ಆಗಿರೋದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ನಿಯಮ ಬಾಹಿರ ವಿವಾಹ ನೋಂದಣಿ ಮಾಡಿದ್ದಾರೆಂದು ಆರೋಪಿಸಿ ಯುವತಿಯ ತಾಯಿ, ಸಬ್ ರಿಜಿಸ್ಟರ್ ಕಚೇರಿ ಸಿಬ್ಬಂದಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ.. ಸಿಬ್ಬಂದಿ ವಿರುದ್ಧ ಮುಂಡಗೋಡು ಠಾಣೆಗೆ ದೂರು ನೀಡಿದ್ದಾರೆ.

ಒಟ್ಟಾರೆ.. ಯೂಟ್ಯೂಬರ್​ ಮುಕಳೆಪ್ಪ ಮದುವೆ ಧರ್ಮ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಸದ್ಯ ಯುವತಿ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾಳೆ.

ಇದನ್ನೂ ಓದಿ:ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ CD ಬಾಂಬ್.. ಕಾಶಪ್ಪನವರ್ ಹೇಳಿಕೆ ಭಾರೀ ಸಂಚಲನ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

mukaleppa case
Advertisment
Advertisment
Advertisment