/newsfirstlive-kannada/media/media_files/2025/09/23/jayamrutyunjaya-swamiji-2025-09-23-07-16-25.jpg)
ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಉಚ್ಘಾಟನೆ ಸಮುದಾಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಹಿಂದುತ್ವ ಜಪ.. ಅಕ್ರಮ ಆಸ್ತಿ ಗಳಿಸಿದ್ದಾರೆಂದು ಆರೋಪಿಸಿ ಉಚ್ಛಾಟನೆ ಮಾಡಲಾಗಿತ್ತು. ಇದೀಗ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ವಿಜಯಾನಂದ ಕಾಶಪ್ಪನವರ್ ಸಿಡಿ ಬಾಂಬ್ ಸಿಡಿಸಿದ್ದು, ಚರ್ಚೆಯನ್ನು ಹುಟ್ಟು ಹಾಕಿದೆ.
ಬಸವ ಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆಗೂ ಮುನ್ನ ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ಮಹತ್ವದ ಸಭೆ ನಡೆಯಿತು. ಈ ಕಾರ್ಯಕಾರಿ ಸಭೆಯಲ್ಲಿ ಸ್ವಾಮೀಜಿ ವಿರುದ್ಧ ಕಾಶಪ್ಪನವರ ಗಂಭೀರ ಆರೋಪ ಮಾಡಿದ್ರು. ಸ್ವಾಮೀಜಿ ಮಾರಿಕೊಂಡು ಹೋಗಿದ್ದಾನೆ. ಎಲ್ಲೆಲ್ಲಿ ಸಿಡಿ ಹೋಗ್ಯಾವ, ಎಲ್ಲೆಲ್ಲಿ ಏನೇನ್ ಹೋಗ್ಯಾವ ಎಂದು ಎಲ್ಲಾ ದಾಖಲೆಗಳಿವೆ. ಟೈಮ್ ಬಂದಾಗ ತೋರಿಸ್ತೀನಿ ಎಂದು ವಿಜಯಾನಂದ ಕಾಶಪ್ಪನವರ್ ಸ್ಫೋಟಕ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ದಸರಾದಲ್ಲಿ ಅತ್ಯಂತ ದೊಡ್ಡ ಸೆಲೆಬ್ರೇಟಿ ಯಾರು.. ಯದುವೀರ್ ಒಡೆಯರ್ ಹೇಳಿದ ಹೆಸರು..?
ಅವರು ರೊಕ್ಕಕ್ಕೆ, ಇನ್ನೊಂದಕ್ಕ ಮಾರಿಕೊಂಡು ಹೋಗಿದ್ಯಾರ ಅಂತನೂ ಹೇಳ್ತೀನಿ ನಾನು. ಇವ್ರು ಸ್ವಯಂ ಘೋಷಿತ ಆಸ್ತಿ ಮಾಡ್ಯಾರಾ.. ಯಾವುದೇ ಈ ಪೀಠದ ಜಗದ್ಗುರುಗಳು ಅವರು ಸ್ವಂತ ಆಸ್ತಿಯನ್ನ ಹೊಂದಬಾರದು. ಅದು ಸಮಯ ಸಂದರ್ಭ ಬಂದಾಗ ಪೂರ್ತಿ ಎಳೆಎಳೆಯಾಗಿ ಬಿಚ್ಚಿಡುತ್ತೀನಿ. ಎಲ್ಲ್ಲೆಲ್ಲಿ ಆಸ್ತಿ ಮಾಡ್ಯಾರ, ಎಲ್ಲೆಲ್ಲಿ ಮನಿ ಮಾಡ್ಯಾರ, ಎಲ್ಲೆಲ್ಲಿ ಯಾರ್ ಯಾರ್ ಜೊತೆಗೆ ಅದಾರ. ಎಲ್ಲೆಲ್ಲಿ ಸಿಡಿ ಹೋಗ್ಯಾವ ಎಲ್ಲ ಕೊಡ್ತೀನಿ
ವಿಜಯಾನಂದ ಕಾಶಪ್ಪನವರ್​, ಪಂಚಮಸಾಲಿ ಪೀಠದ ಟ್ರಸ್ಟ್ ಅಧ್ಯಕ್ಷ
ಸ್ವಾಮೀಜಿ ತಿರುಗೇಟು
ಉಚ್ಛಾಟನೆಯನ್ನು ಖಂಡಿಸಿ, ಬಸವ ಮೃತ್ಯುಂಜಯ ಸ್ವಾಮೀಜಿ ಬಸವಣ್ಣನವರ ಐಕ್ಯ ಮಂಟಪದ ಬಳಿ ಇರೋ ಆಲದ ಮರದ ಕೆಳಗೆ ಭಕ್ತರ ಜೊತೆ ಸಭೆ ನಡೆಸಿದ್ರು. ಭಕ್ತರು ಸ್ವಾಮೀಜಿಯ ಬೆನ್ನಿಗೆ ನಿಂತಿದ್ದಾರೆ. ಖಂಡನಾ ಸಭೆ ಬಳಿಕ ಮಾತನಾಡಿದ ಸ್ವಾಮೀಜಿ, ಇತ್ತೀಚಿನ ಎಐ ತಂತ್ರಜ್ಞಾನ ಬಳಸಿ ಕುತಂತ್ರ ಮಾಡ್ತಿದ್ದಾರೆ. ಅದಕ್ಕೆಲ್ಲ ನಾವು ಹೆದರುವುದೂ ಇಲ್ಲ.. ಕುಗ್ಗುವುದೂ ಇಲ್ಲ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಉಚ್ಚಾಟನೆ ಮಾಡುವ ಅಧಿಕಾರ ಯಾರಿಗೂ ಇಲ್ಲ, ಪರ್ಯಾಯ ಪೀಠ ಕಟ್ಟಲ್ಲ ಎಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಒಟ್ಟಾರೆ.. ಉಚ್ಛಾಟಿತ ಸ್ವಾಮೀಜಿ ಮತ್ತು ಪಂಚಮ ಸಾಲಿ ಟ್ರಸ್ಟ್​ ನಡುವಿನ ವೈಮನಸ್ಸು, ಸಮುದಾಯದ ಭಕ್ತರನ್ನು ಆತಂಕಗೊಳಿಸಿದೆ. ಕೆಲ ಪಂಚಮಸಾಲಿ ಭಕ್ತರು ಸ್ವಾಮೀಜಿ ಬೆನ್ನಿಗೆ ನಿಂತಿದ್ದಾರೆ. ಇದು ಮುಂದೆ ಇನ್ಯಾವ ಸ್ವರೂಪ ಪಡೆಯುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ