/newsfirstlive-kannada/media/media_files/2025/09/23/kantara-trailer-1-2025-09-23-07-53-57.jpg)
ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆ ಆಗಿದ್ದು, ನಿರೀಕ್ಷೆಗೂ ಮೀರಿದ ಮೆಚ್ಚುಗೆ ಗಳಿಸ್ತಿದೆ. ಇದ್ರ ಬೆನ್ನಲ್ಲೇ ಇಡೀ ಕಾಂತಾರ ಟೀಂ ಫಸ್ಟ್ ಟೈಂ ಪ್ರೆಸ್ ಮೀಟ್ ಆಯೋಜಿಸಿದ್ದು, ಡಿವೈನ್ ಸ್ಟಾರ್ ರಿಷಬ್ ತಮ್ಮ ಸಾವು - ಬದುಕಿನ ರೋಚಕ ಕಥೆ ಹಂಚಿಕೊಂಡಿದ್ದಾರೆ.
ಕಾಂತಾರ.. ಒಮ್ಮೆಲೆಗೆ ಇಡೀ ದೇಶವನ್ನೇ ಭಕ್ತಿ ರಸದಲ್ಲಿ ಮುಳುಗಿಸಿದ ಸಿನಿಮಾ. ಕಾಂತಾರದಲ್ಲಿ ವರಾಹ.. ಗುಳಿಗ.. ಕಾಂತಾರ ಚಾಪ್ಟರ್​ 1ನಲ್ಲಿ ಈಶ್ವರ ದೇವರು.. ದೈವ ಶಕ್ತಿ.. ದೇವರ ಭಕ್ತಿ.. ಜನರ ಹೋರಾಟವನ್ನ ತೆರೆ ಮೇಲೆ ದೃಶ್ಯಕಾವ್ಯದ ಮೂಲಕ ಅಬ್ಬರಿಸಲು ಸಿದ್ಧವಾಗಿದೆ. ಇದೀಗ ಕಾಂತಾರದ ಪ್ರೀಕ್ವೆಲ್ ಬಿಡುಗಡೆ ಆಗ್ತಿದ್ದು, ಸದ್ಯ ಟ್ರೈಲರ್ ಮೂಲಕ ದೊಡ್ಡ ಸೆನ್ಷೇಷನ್ ಕ್ರಿಯೇಟ್ ಮಾಡಿದೆ.
ಕೆಲವೇ ಗಂಟೆಗಳಲ್ಲಿ ಕೋಟಿಗಟ್ಟಲೆ ವೀಕ್ಷಣೆ
ಕಾತುರ.. ಕೌತುಕ.. ಕುತೂಹಲದಿಂದ ಕಾಯ್ತಿದ್ದ ಕಾಂತಾರ ಚಾಪ್ಟರ್​ 1 ಟ್ರೈಲರ್​ ಕೊನೆಗೂ ಔಟ್​ ಆಗಿದೆ.. ಕನ್ನಡ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಟ್ರೈಲರ್ ರಿಲೀಸ್​ ಆಗಿದ್ದು, ಭರ್ಜರಿ ಮೆಚ್ಚುಗೆ ಗಳಿಸಿದೆ.. ಮಿಲಿಯನ್ ಗಟ್ಟಲೆ ವೀಕ್ಷಣೆ ಸಿಕ್ಕಿದೆ. ಕೆಲವೇ ಗಂಟೆಗಳಲ್ಲಿ 5 ಮಿಲಿಯನ್​ ದಾಟಿ.. 6 ಮಿಲಿಯನತ್ತ ಮುನ್ನುಗ್ಗುತ್ತಿದ್ದು, ಕಥೆಯ ಕುರಿತು ಚರ್ಚೆಗಳು ಸ್ಟಾರ್ಟ್ ಆಗಿವೆ. ಈ ಟ್ರೈಲರ್ ಮೂಲಕ ನಟ ರಿಷಭ್​ ಕಾಂತಾರ ‘ದಂತಕಥೆ’ಯ ಕ್ಲೂ ಕೊಟ್ಟಿದ್ದಾರೆ.
ಸುಮಾರು ಮೂರುವರೆ ವರ್ಷಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ಇದೂವರೆಗೂ ಕಾಂತಾರ ಚಾಪ್ಟರ್ 1ರ ಬಗ್ಗೆ ಚಿಕ್ಕದೊಂದು ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಕಾಂತಾರ ಚಾಪ್ಟರ್ 1 ಟ್ರೈಲರ್​ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದ್ದು, ಇದರ ಖುಷಿಯಲ್ಲೇ ಚಿತ್ರ ತಂಡ ಇದೇ ಮೊದಲ ಬಾರಿಗೆ ಸುದ್ದಿಗೋಷ್ಟಿ ನಡೆಸಿ, ಅನುಭವ ಹಂಚಿಕೊಂಡಿದೆ. ರಿಷಬ್ ಪತ್ನಿ, ಪ್ರಗತಿ ಸಿನಿಮಾಗೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದು, ಪತಿ ಪಟ್ಟ ಕಷ್ಟವನ್ನ ಇಂಚಿಂಚಾಗಿ ಹೇಳಿಕೊಂಡರು.
ಇದನ್ನೂ ಓದಿ:ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ CD ಬಾಂಬ್.. ಕಾಶಪ್ಪನವರ್ ಹೇಳಿಕೆ ಭಾರೀ ಸಂಚಲನ
ಕಾಂತಾರದ ಈ ಜಗತ್ತು ಈ ಮಟ್ಟಿಗೆ ಸದ್ದಾಗ್ತಿದೆ ಅಂದ್ರೆ.. ಅದೆಲ್ಲದಕ್ಕೂ ಕಾರಣ ರಿಷಬ್ ಶೆಟ್ಟಿ, ಈ ಸಿನಿಮಾಗಾಗಿ ಶೆಟ್ರು ರಕ್ತ - ಬೆವರು ಹರಿಸಿದ್ದು, ಕಾಂತಾರ ತಮಗೆ ಯಾವ ಮಟ್ಟಿಗೆ ಚಾಲೆಂಜ್ ಆಗಿತ್ತು ಅನ್ನೋ ಬಗ್ಗೆ ಮತ್ತು ನಾಲ್ಕೈದು ಬಾರಿ ಸಾವಿನ ಕದ ತಟ್ಟಿದನ್ನ ರಿಷಬ್ ಹಂಚಿಕೊಂಡಿದ್ದಾರೆ.
ಸಿನಿಮಾದ ಎಲ್ಲ ಹಾಡುಗಳನ್ನು ರಿಲೀಸ್ ಮಾಡುತ್ತೇವೆ. ಸ್ವಲ್ಪ ತಡ ಆಗುತ್ತದೆ. ಪ್ಯಾನ್ ಇಂಡಿಯಾ ಮೂವಿ ಆಗಿದ್ದರಿಂದ ಕೆಲಸ ತುಂಬಾ ಇದೆ. ಮ್ಯೂಸಿಕ್ ಡೈರೆಕ್ಟರ್ ಕೆಲಸ ಇನ್ನು ಇದೆ. ಹೀಗಾಗಿ ಇಲ್ಲಿಗೆ ಅವರು ಬಂದಿಲ್ಲ. ಈಗಾಗಲೇ ನನ್ನ ಸಿನಿಮಾ ರಿಲೀಸ್ ಆಗಿ ಮೂರು ವರ್ಷಗಳು ಆಗಿವೆ. ಊರಲ್ಲಿ ಇದ್ದು ಸಿನಿಮಾ ಮಾಡಿ ಮುಗಿಸಿದ್ದೇವೆ. ಇದೀಗ ಫಸ್ಟ್ ಟೈಮ್ ಬೆಂಗಳೂರಿಗೆ ಈ ಕಾಂತಾರ ಬಂದಿದೆ.ಮೂರು- ನಾಲ್ಕು ಬಾರಿ ನಾನು ಸತ್ತೆ ಹೋಗಬೇಕಿತ್ತು. ಆ ಮಟ್ಟಿಗೆ ತೊಂದರೆ ಆಗಿದೆ. ಮೂರು ತಿಂಗಳಿಂದ ನಾವು ಸರಿಯಾಗಿ ನಿದ್ದೆನೇ ಮಾಡಿಲ್ಲ. ಎಲ್ಲರೂ ನಮ್ಮ ಸಿನಿಮಾ ಅಂತಾ ಕೆಲಸ ಮಾಡಿದರು. ಈ ವೇಳೆ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇವೆ. ಈ ಸಿನಿಮಾನ ಈ ಹಂತಕ್ಕೆ ತಂದಿದ್ದೇ ಕನ್ನಡಿಗರು. ಕನ್ನಡಿಗರಿಂದ ಈ ಮೂವಿ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಬಹುತೇಕ ಕನ್ನಡ ಕಲಾವಿದರೇ ಸಿನಿಮಾದಲ್ಲಿ ಇದ್ದಾರೆ.
ಕಾಂತಾರ ಸಿನಿಮಾದಲ್ಲಿ ಮುಳುಗೋಗಿದ್ದರಿಂದ ಹೊರಗಡೆ ಏನು ಆಗುತ್ತಿದೆ ಎನ್ನುವುದು ನನ್ನ ಗಮನಕ್ಕೆ ಇಲ್ಲ. ಸಿನಿಮಾದ ಕಥೆ ಚೆನ್ನಾಗಿದ್ದರೇ ಇಂಡಸ್ಟ್ರಿ ಚೆನ್ನಾಗಿರುತ್ತದೆ. ಅಭಿಮಾನಿಗಳಲ್ಲಿ ಸಿನಿಮಾದ ಅಭಿರುಚಿಗಳು ಬದಲಾವಣೆ ಆದಾಗ ಸಿನಿಮಾದವರು ಅವುಗಳನ್ನು ನೀಗಿಸಬೇಕು. ಆಗ ಸಕ್ಸಸ್ ಸಿಗುತ್ತದೆ. ಅಮೆರಿಕದಲ್ಲಿ ಕಾಂತಾರ ಕನ್ನಡದಲ್ಲಿ ರಿಲೀಸ್ ಆಗುತ್ತದೆ. ಜೊತೆಗೆ ಎಲ್ಲ ಭಾಷೆಗಳಲ್ಲೂ ಇರುತ್ತದೆ.
ರಿಷಬ್ ಶೆಟ್ಟಿ
ಒಟ್ಟಾರೆ, ಕಾಂತಾರ ಚಾಪ್ಟರ್ 1 ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದ್ದು, ಚಿತ್ರರಂಗದಲ್ಲಿ ದಾಖಲೆ ಸಿನಿಮಾವಾಗಿ ನಿಲ್ಲುವ ಎಲ್ಲಾ ಲಕ್ಷಣ ಕಾಣ್ತಿವೆ. ದಸರಾ ಹಬ್ಬಕ್ಕೊಂದು ಡಿವೈನ್ ಟ್ರೀಟ್ ಆಗಿರಲಿದೆ.
ಇದನ್ನೂ ಓದಿ:ನೀವು ಆರೋಗ್ಯವಾಗಿರಬೇಕಾ.. ಹಾಗಾದ್ರೆ ಊಟ ಆದ್ಮೇಲೆ ಯಾರೂ ಹೀಗೆ ಮಾಡಬೇಡಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ