Advertisment

BCCI ಎಲೆಕ್ಷನ್​ ಕ್ಲೈಮ್ಯಾಕ್ಸ್.. ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಎಲ್ಲಾ ಸ್ಥಾನಗಳಿಗೂ ಹೆಸರು ಫೈನಲ್!

ರೋಜರ್​ ಬಿನ್ನ ಪಟ್ಟ ತ್ಯಜಿಸಿದ ಬಳಿಕ ಸೌರವ್​ ಗಂಗೂಲಿ, ಹರ್ಭಜನ್​ ಸಿಂಗ್​.. ಸೇರಿದಂತೆ ಹಲವರ ಹೆಸರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದ್ದವು. ಆದ್ರೆ, ಈಗ ನೋಡಿದ್ರೆ, ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿಯ ಹೆಸರು ಎಂಟ್ರಿಯಾಗಿದೆ.

author-image
Bhimappa
BCCI (4)
Advertisment

ವಿಶ್ವದ ಶ್ರೀಮಂತ ಕ್ರಿಕೆಟ್​​ ಬೋರ್ಡ್ ಬಿಸಿಸಿಐನ ಚುನಾವಣಾ ಪ್ರಕ್ರಿಯೆ ಕ್ಲೈಮ್ಯಾಕ್ಸ್​ ಹಂತ ತಲುಪಿದೆ. ಮುಂದಿನ ಅಧ್ಯಕ್ಷ, ಉಪಾದ್ಯಕ್ಷ, ಖಜಾಂಜಿ.. ಎಲ್ಲಾ ಸ್ಥಾನಗಳಿಗೂ ಹೆಸರು ಫೈನಲ್​ ಆಗಿದೆ. ಅಧಿಕೃತ ಘೋಷಣೆ ಅಷ್ಟೇ ಬಾಕಿ ಉಳಿದಿರೋದು. ಅಚ್ಚರಿಯ ಹೆಸರು ಅಧ್ಯಕ್ಷ ಸ್ಥಾನಕ್ಕೆ ಫೈನಲ್​ ಆಗಿದ್ರೆ, ಹೊಸ ಕಮಿಟಿಯಲ್ಲಿ ಕನ್ನಡಿಗ ರಘುರಾಮ್​​ ಭಟ್​ಗೂ ಸ್ಥಾನ ಕನ್​ಫರ್ಮ್​ ಆಗಿದೆ. ಬಿಸಿಸಿಐ ಪದಾಧಿಕಾರಿಗಳು ಸಲ್ಲಿಸಿದ್ದ ಪಟ್ಟಿಗೆ ಹೋಮ್​ ಮಿನಿಸ್ಟರ್​ ಅಮಿತ್​ ಶಾ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. 

Advertisment

ಬಿಸಿಸಿಐ ಎಲೆಕ್ಷನ್​​ ಕ್ಲೈಮ್ಯಾಕ್ಸ್​ ಹಂತವನ್ನ ತಲುಪಿದೆ. ಹೋಮ್​ ಮಿನಿಸ್ಟರ್​​ ಅಮಿತ್​ ಶಾ ಮನೆಯಲ್ಲಿ ನಡೆದ ಬಿಸಿಸಿಐ ಬಾಸ್​ಗಳ ಜೊತೆಗಿನ ಮಹತ್ವದ ಸಭೆಯಲ್ಲಿ ನೂತನ ಕಮಿಟಿ ರಚನೆಯಾಗಿದೆ. ಎಲ್ಲಾ ಸ್ಥಾನಕ್ಕೂ ಹೊಸ ಕ್ಯಾಂಡಿಡೇಟ್​​ಗಳ ಹೆಸರನ್ನ ಅಮಿತ್​ ಶಾ ಫೈನಲ್​ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಯೂ ಆಗಿದ್ದು, ಅಧಿಕೃತವಾಗಿ ಘೋಷಣೆಯೊಂದೆ ಸದ್ಯ ಬಾಕಿ ಉಳಿದಿರೋದು. 

BCCI (3)

ಮಿಥುನ್​ ಮನ್ಹಾಸ್​​​ ಮುಂದಿನ ಬಿಸಿಸಿಐ ಬಾಸ್​​.!

ರೋಜರ್​ ಬಿನ್ನ ಪಟ್ಟ ತ್ಯಜಿಸಿದ ಬಳಿಕ ಸೌರವ್​ ಗಂಗೂಲಿ, ಹರ್ಭಜನ್​ ಸಿಂಗ್​.. ಸೇರಿದಂತೆ ಹಲವರ ಹೆಸರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದ್ದವು. ಆದ್ರೆ, ಈಗ ನೋಡಿದ್ರೆ, ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿಯ ಹೆಸರು ಎಂಟ್ರಿಯಾಗಿದೆ. ದೆಹಲಿಯ ಮಾಜಿ ಕ್ರಿಕೆಟಿಗ, ಗುಜರಾತ್​ ಟೈಟನ್ಸ್​ ತಂಡದ ಅಸಿಸ್ಟೆಂಟ್​ ಕೋಚ್​ ಮಿಥುನ್​ ಮನ್ಹಾಸ್​​ ಅಧ್ಯಕ್ಷ ಹುದ್ದೆಗೆ ನಾಮಿನೇಷನ್​ ಫೈಲ್​ ಮಾಡಿದ್ದಾರೆ. ಕೊಹ್ಲಿ ಆಪ್ತನ ಸರ್​​​ಪ್ರೈಸ್​ ಎಂಟ್ರಿ ಎಲ್ಲರನ್ನೂ ಅಚ್ಚರಿಗೆ ದೂಡಿದೆ. 

ರಾಜೀವ್​ ಶುಕ್ಲಾ ಉಪಾಧ್ಯಕ್ಷ, ದೇವಜಿತ್​ ಸೈಕಿಯಾ ಸೆಕ್ರೆಟರಿ.!

ಮುಂದಿನ ಅಧ್ಯಕ್ಷ ಎಂದೇ ಬಿಂಬಿತವಾಗಿದ್ದ ಹಾಲಿ ಉಪಾಧ್ಯಕ್ಷ ರಾಜೀವ್​ ಶುಕ್ಲಾ, ವೈಸ್​ ಪ್ರೆಸಿಡೆಂಟ್​ ಆಗಿಯೇ ಮುಂದುವರೆಯಲಿದ್ದಾರೆ. ಜೊತೆಗೆ ಕಾರ್ಯದರ್ಶಿ ದೇವಜಿತ್​ ಸೈಕಿಯಾ ಮತ್ತೊಂದು ಅವಧಿಗೆ ಮುಂದುರುವರೆಯಲಿದ್ದಾರೆ. ಈ ಎರಡೂ ಹುದ್ದೆಗಳಿಗೆ ನಿನ್ನೆ ಮುಂಬೈನ ಬಿಸಿಸಿಐ ಕಚೇರಿಯಲ್ಲಿ ಇಬ್ಬರೂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 

Advertisment

ಕನ್ನಡಿಗ ರಘುರಾಮ್​ ಭಟ್​​ಗೂ ಮಹತ್ವದ ಸ್ಥಾನ 

ಹೊಸ ಕಮಿಟಿಯಲ್ಲಿ ಕನ್ನಡಿಗ, ಹಾಲಿ ಕೆಎಸ್​​ಸಿಎ ಅಧ್ಯಕ್ಷ ರಘುರಾಮ್​ ಭಟ್​ ಸ್ಥಾನವೂ ಕನ್​ಫರ್ಮ್​ ಆಗಿದೆ. ಹಾಲಿ ಖಜಾಂಜಿ ಪ್ರಭ್​ತೇಜ್ ಸಿಂಗ್​​ ಭಾಟಿಯಾ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಖಜಾಂಜಿ ಸ್ಥಾನಕ್ಕೆ ರಘುರಾಮ್​ ಭಟ್​ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 

IPL ಅಧ್ಯಕ್ಷರಾಗಿ ಅರುಣ್​ ಧುಮಾಲ್​ ಮುಂದುವರಿಕೆ.!

ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಅಧ್ಯಕ್ಷರಾಗಿ ಅರುಣ್​ ಧುಮಾಲ್​ ಮುಂದುವರಿಕೆ ಕನ್​ಫರ್ಮ್​ ಆಗಿದೆ. ಮತ್ತೊಮ್ಮೆ ಐಪಿಎಲ್​ ಪ್ರೆಸಿಡೆಂಟ್​ ಸ್ಥಾನಕ್ಕೆ ಧುಮಾಲ್​ ನಾಮಿನೇಷನ್​ ಫೈಲ್​ ಮಾಡಲಿದ್ದಾರೆ. ಅಪೆಕ್ಸ್​​ ಕೌನ್ಸಿಲ್​ ಮೆಂಬರ್​ ಆಗಿ ಜಯದೇವ್​ ಶಾ ಹಾಗೂ ಐಪಿಎಲ್​ ಗೌವರ್ನಿಂಗ್​ ಕೌನ್ಸಿಲ್​ನ ಸದಸ್ಯ ಸ್ಥಾನಕ್ಕೆ ಜಮಾಲ್​ ಮುಜುಂದಾರ್​ ನಾಮಪತ್ರವನ್ನ ಸಲ್ಲಿಸಿದ್ದಾರೆ. 

ಎದುರಾಳಿಗಳೇ ಇಲ್ಲ.. ಅವಿರೋಧ ಆಯ್ಕೆ ಪಕ್ಕಾ.! 

ಅಮಿತ್​ ಶಾ ಜೊತೆಗಿನ ಸಭೆಯಲ್ಲಿ ನಿರ್ಧಾರವಾದ ವ್ಯಕ್ತಿಗಳ ಹೊರತಾಗಿ ಬೇರಾರೂ ಕೂಡ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಅವಿರೋಧವಾಗಿ ಈ ಅಭ್ಯರ್ಥಿಗಳೇ ಆಯ್ಕೆಯಾಗಲಿದ್ದು, ಇದೇ ಬಿಸಿಸಿಐನ ನೂತನ ಕಮಿಟಿಯಾಗಲಿದೆ. 

Advertisment

ಇದನ್ನೂ ಓದಿ: ಪಾಕ್​ ವಿರುದ್ಧ ಗೆದ್ದ ಟೀಮ್ ಇಂಡಿಯಾದ ಮುಂದಿನ ಪಂದ್ಯ ಯಾರ ಜೊತೆ, ಎಲ್ಲಿ, ಯಾವಾಗ?

BCCI (1)

ನಮ್ಮ ಕಮಿಟಿ ರೆಡಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮಿಥುನ್​ ಮನ್ಹಾಸ್​, ಉಪಾಧ್ಯಕ್ಷ ಸ್ಥಾನಕ್ಕೆ ನಾನು, ಸೆಕ್ರೆಟರಿ ಸ್ಥಾನಕ್ಕೆ ದೇವಜಿತ್​ ಸೈಕಿಯಾ, ಪ್ರಭ್​ತೆಜ್​ ಸಿಂಗ್​ ಭಾಟಿಯಾ ಜಂಟಿ ಕಾರ್ಯದರ್ಶಿ ಮತ್ತು ಖಜಾಂಜಿ ಸ್ಥಾನಕ್ಕೆ ರಘುರಾಮ್​ ಭಟ್​​ ನಾಮಪತ್ರ ಸಲ್ಲಿಸಿದ್ದೇವೆ. ಮುಂದಿನ ಅವಧಿಗೆ ಹೊಸ ಕಮಿಟಿ ಸಿದ್ಧವಾಗಿದೆ. 

ರಾಜೀವ್​ ಶುಕ್ಲಾ, ಬಿಸಿಸಿಐ ಉಪಾಧ್ಯಕ್ಷ 

ದೊಡ್ಡ ಹೆಸರುಗಳನ್ನೇ ಸೈಡ್​​ಲೈನ್​ ಮಾಡಿದ ಅಮಿತ್​ ಶಾ.!

ಸದ್ಯ ನಾಮಪತ್ರ ಸಲ್ಲಿಕೆ ಮಾಡಿರುವವರ ಪಟ್ಟಿ ಕ್ರಿಕೆಟ್​​ ಲೋಕವನ್ನ ಅಚ್ಚರಿಗೆ ದೂಡಿದೆ. ಯಾಕಂದ್ರೆ, ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ, ಹರ್ಭಜನ್​ ಸಿಂಗ್​, ಕಿರಣ್​ ಮೋರೆ ಸೇರಿದಂತೆ ಹಲವರು ಹೆಸರು ಚುನಾವಣಾ ಕಣದಲ್ಲಿ ಸದ್ದು ಮಾಡಿದ್ವು. ಆದ್ರೆ, ಬಿಗ್​ ನೇಮ್​ಗಳನ್ನ ಅಮಿತ್​ ಶಾ ಸೈಡ್​ಲೈನ್​ ಮಾಡಿದ್ದಾರೆ. ಇದ್ರೊಂದಿಗೆ ಮತ್ತೊಮ್ಮೆ ಬಿಸಿಸಿಐ ಎಲೆಕ್ಷನ್​ ವಿಚಾರದಲ್ಲಿ ಜಯ್​ ಶಾ ಬಣ ಸ್ಪಷ್ಟವಾಗಿ ಮೇಲುಗೈ ಸಾಧಿಸಿದೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

BCCI BCCI Farewell bcci president Asia Cup 2025
Advertisment
Advertisment
Advertisment