/newsfirstlive-kannada/media/media_files/2025/09/21/abhishek_sharma_gill-2025-09-21-23-18-40.jpg)
ಪಾಕಿಸ್ತಾನ ವಿರುದ್ಧ ನಡೆದ ಏಷ್ಯಾ ಕಪ್​ನ ಸೂಪರ್-4 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ವಿಜಯ ಸಾಧಿಸಿದೆ. ಭಾರತದ ವಿರುದ್ಧ ಒಂದೇ ಟೂರ್ನಿಯಲ್ಲಿ ಎರಡು ಬಾರಿ ಸೋತು ಪಾಕಿಸ್ತಾನ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಸದ್ಯ ಪಾಕಿಸ್ತಾನ ವಿರುದ್ಧದ ಪಂದ್ಯ ಹೀಗಿದ್ದರೇ ಟೀಮ್ ಇಂಡಿಯಾದ ಮುಂದಿನ ಪಂದ್ಯ ಎಲ್ಲಿ, ಯಾವಾಗ, ಆ ಎದುರಾಳಿ ಟೀಮ್ ಯಾವುದು ಎನ್ನುವುದರ ಮಾಹಿತಿ ಇಲ್ಲಿ ನೀಡಲಾಗಿದೆ.
ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸೂರ್ಯಕುಮಾರ್ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ ಸಲ್ಮಾನ್ ಅಲಿ ಆಘಾ ನೇತೃತ್ವದ ಪಾಕಿಸ್ತಾನ ನಿಗದಿತ 20 ಓವರ್​ಗಳಲ್ಲಿ 171 ಗುರಿ ನೀಡಿತ್ತು. ಈ ಟಾರ್ಗೆಟ್​ ಬೆನ್ನತ್ತಿದ್ದ ಟೀಮ್ ಇಂಡಿಯಾ ಇನ್ನು 7 ಎಸೆತಗಳು ಇರುವಾಗಲೇ ಗೆಲುವಿಗೆ ಮುತ್ತಿಕ್ಕಿತು. ಸೂಪರ್-4 ಮೊದಲ ಪಂದ್ಯ ಮುಗಿದಿದ್ದು 2ನೇ ಪಂದ್ಯ ಟೀಮ್ ಇಂಡಿಯಾ ಆಡಬೇಕಿದೆ.
ಇದನ್ನೂ ಓದಿ: ವಿಶ್ವವಿಖ್ಯಾತ ದಸರಾ ಮಹೋತ್ಸವ.. ಅರಮನೆಯಲ್ಲಿ ಖಾಸಗಿ ದರ್ಬಾರ್​ ಜೋರು!
ಸದ್ಯ ಪಾಕಿಸ್ತಾನದ ವಿರುದ್ಧದ ಸೂಪರ್-4 ಪಂದ್ಯ ಮುಗಿದಿದ್ದು ಸೂರ್ಯಕುಮಾರ್ ಸೇನೆ ಮುಂದಿನ ಸೂಪರ್-4 ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಈ ಪಂದ್ಯವು ದುಬೈ ಇಂಟರ್​​ನ್ಯಾಷನಲ್​ ಸ್ಟೇಡಿಯಂನಲ್ಲಿ ಸೆಪ್ಟೆಂಬರ್​ 24 ರಂದು ರಾತ್ರಿ 8 ಗಂಟೆಗೆ ನಡೆಯಲಿದೆ. ಸೂಪರ್-4 ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಈಗಾಗಲೇ ಒಂದು ಪಂದ್ಯ ಗೆದ್ದಿದೆ. ಹಾಗೇ ಟೀಮ್ ಇಂಡಿಯಾ ಕೂಡ ಒಂದು ಪಂದ್ಯ ಗೆದ್ದಿದೆ.
ಹೀಗಾಗಿ ಮುಂದಿನ ಮ್ಯಾಚ್ ಬಾಂಗ್ಲಾ ಹಾಗೂ ಭಾರತ ಎರಡಕ್ಕೂ ತುಂಬಾ ಮುಖ್ಯವಾಗಿದೆ. ಏಕೆಂದರೆ 2ನೇ ಸೂಪರ್​-4 ಪಂದ್ಯದಲ್ಲಿ ಗೆದ್ದಂತಹ ಪಂದ್ಯ ಇನ್ನೊಂದು ಪಂದ್ಯದಲ್ಲಿ ಗೆಲುವು ಪಡೆದರೆ ಫೈನಲ್​ಗೆ ನೇರವಾಗಿ ಎಂಟ್ರಿಯಾಗಲಿದೆ. ಇಲ್ಲಿ ಸೆಮಿಫೈನಲ್ ಅನ್ನೋದು ಇರುವುದಿಲ್ಲ. ಸದ್ಯ ಉಳಿದಿರುವ ಎರಡು ಪಂದ್ಯಗಳಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಅವರಿಗೆ ಫೈನಲ್ ಟಿಕೆಟ್​ ಕನ್​ಫರ್ಮ್ ಆಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ