Advertisment

ವಿಶ್ವವಿಖ್ಯಾತ ದಸರಾ ಮಹೋತ್ಸವ.. ಅರಮನೆಯಲ್ಲಿ ಖಾಸಗಿ ದರ್ಬಾರ್​ ಜೋರು!

ವಿಶ್ವವಿಖ್ಯಾತ 2025ರ ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜೊತೆಗೆ ಯದುವಂಶದ ಖಾಸಗಿ ದರ್ಬಾರ್​​ ಆರಂಭಗೊಂಡಿದೆ. ಸಿಂಹಾಸನವೇರಿ ದರ್ಬಾರ್ ನಡೆಸುತ್ತಿರುವ ಯದುವೀರ್ ಒಡೆಯರ್, ಗುಲಾಬಿ ಬಣ್ಣದ ರಾಜಪೋಷಾಕಿನಲ್ಲಿ ಕಂಗೊಳಿಸುತ್ತಿದ್ದಾರೆ.

author-image
Ganesh Kerekuli
Updated On
khasagi darbar1
Advertisment

ಮೈಸೂರು:ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಖಾಸಗಿ ದರ್ಬಾರ್​ ಆರಂಭವಾಗಿದೆ. ಅಂಬಾವಿಲಾಸ ಅರಮನೆಯಲ್ಲಿ ಯದುವಂಶದ ಖಾಸಗಿ ದರ್ಬಾರ್ ಆರಂಭವಾಗಿದೆ. ರಾಜವಂಶಸ್ಥ ಯದುವೀರ್ ಒಡೆಯರ್​ ಸಿಂಹಾಸನವೇರಿ ಧಾರ್ಮಿಕ ವಿಧಿ ವಿಧಾನ ನಡೆಸುತ್ತಿದ್ದಾರೆ. 

Advertisment

khasagi darbar1

ಬೆಳಗ್ಗೆ 5.30 ರಿಂದ 6.45 ರ ಒಳಗಿನ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖ ಜೋಡಣೆ ಮಾಡಲಾಗಿತ್ತು. ಬಳಿಕ ಬೆಳಗ್ಗೆ  9:55 ರಿಂದ 10 : 15 ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ರವರಿಗೆ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧಾರಣೆ ಮಾಡಲಾಯಿತು. ಬೆಳಗ್ಗೆ 11: 35ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಪಟ್ಟದ ಆನೆ ಹಾಗೂ ಕುದುರೆ, ಹಸು ಸೇರಿದಂತೆ ಮಹಿಳೆಯರು ಕಳಸ ಹೊತ್ತು ಆಗಮಿಸಿದ್ದು, ಮಂಗಳವಾದ್ಯದೊಂದಿಗೆ ಸವಾರ್ ತೊಟ್ಟಿಯ ಬಳಿ  ಪೂಜಾ ಕಂಕೈರ್ಯಗಳು ನೆರವೇರಿದವು. ನಂತರ ಮಧ್ಯಾಹ್ನ 2:05 ರ ಒಳಗೆ ಚಾಮುಂಡೇಶ್ವರಿ ಅಮ್ಮನವರ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ವಿಜಯ ಯಾತ್ರೆ ಸಾಗಿತು.

ಸೆಪ್ಟೆಂಬರ್​ 23 ರಿಂದ 29ರ  ಸಂಜೆವರೆಗೆ ಖಾಸಗಿ ದರ್ಬಾರ್ ಜರುಗಲಿದೆ. ಸೆಪ್ಟೆಂಬರ್ 29 ರಂದು ಬೆಳಗ್ಗೆ 10: 10 ರಿಂದ 10:30 ರ ಒಳಗೆ ಒಡೆಯರ್ ಸರಸ್ವತಿ ಪೂಜೆ ನೆರವೇರಿಸಲಿದ್ದಾರೆ. ಅಂದು ರಾತ್ರಿ  ಖಾಸಗಿ ದರ್ಬಾರ್ ಕೊನೆಗೊಳ್ಳಲಿದೆ. ಖಾಸಗಿ ದರ್ಬಾರ್ ಮುಗಿದ ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳ ರಾತ್ರಿ ಪೂಜೆ ನಡೆಯಲಿದೆ. 

ಆಯುಧ ಪೂಜೆಯ ದಿನದಂದು ಬೆಳಿಗ್ಗೆ 6 ಗಂಟೆಗೆ ಚಂಡಿ ಹೋಮ ನಡೆಯಲಿದೆ. ಬಳಿಕ ಬೆಳಗ್ಗೆ 7:30 ರಿಂದ 7: 42 ರ ಒಳಗೆ ಪಟ್ಟದ ಕತ್ತಿ ಸೇರಿದಂತೆ ಖಾಸ ಆಯುಧಗಳನ್ನ ಅರಮನೆಯಿಂದ ಕೋಡಿ ಸೋಮೇಶ್ವರ ದೇವಸ್ಥಾನದ ಕಳುಹಿಸಿ ಪೂಜೆ. ನಂತರ ಬೆಳಗ್ಗೆ 8 ರಿಂದ 8: 40 ರ ಒಳಗೆ ಕತ್ತಿ ಹಾಗೂ ಖಾಸ ಆಯುಧಗಳನ್ನ ಕಲ್ಯಾಣ ಮಂಟಪಕ್ಕೆ ಕರೆತಂದು ಪೂಜೆ. ಬೆಳಗ್ಗೆ 10: 35 ಕ್ಕೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಲಿದೆ. ಅಂದಿನ ಸಂಜೆ ಸಿಂಹ  ಹಾಗೂ ಯದುವೀರ್, ತ್ರಿಷಿಕಾ ಕುಮಾರಿ ಒಡೆಯರ್ ಕಂಕಣ ವಿಸರ್ಜನೆ ಮಾಡಲಿದ್ದಾರೆ.

Advertisment

ಅಕ್ಟೋಬರ್ 2 ರಂದು ಬೆಳಗ್ಗೆ 10 ಗಂಟೆಗೆ ವಿಜಯ ದಶಮಿ ಪೂಜೆ ನಡೆಯಲಿದೆ. ಬಳಿಕ ಬೆಳಗ್ಗೆ 10:55ಕ್ಕೆ ವಿಜಯ ಯಾತ್ರೆ ಆರಂಭಗೊಳ್ಳಲಿದೆ. ಎಲ್ಲಾ ಪೂಜೆ ಕೈಂಕರ್ಯ ಮುಗಿದ ಬಳಿಕ ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿ ಸಾಗಲಿದೆ.

ಇದನ್ನೂ ಓದಿ:ಶಿವಗಣ, ಕಾರ್ಣಿಕ ಕಲ್ಲು, ಕಾಂತಾರ ಬೆಂಕಿ! ಕ್ಯೂರಿಯಾಸಿಟಿ ಹೆಚ್ಚಿಸಿದ ಟ್ರೈಲರ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Yaduveer Krishnadatta Chamaraja Wadiyar mysore palace mysore dasara darbar Mysore Dasara
Advertisment
Advertisment
Advertisment