/newsfirstlive-kannada/media/media_files/2025/09/22/kantara-trailer-4-2025-09-22-13-43-30.jpg)
‘ಇದೇ ನಮ್ಮ ಮೂಲಗ, ಇಲ್ಲೇ ಅದೊಂದು ದೊಡ್ಡ ದಂತಕತೆ’ ಎನ್ನುತ್ತ ಕಾಂತಾರ ಪ್ರೀಕ್ವೇಲ್​ನ ಟ್ರೈಲರ್​ ರಿಲೀಸ್ ಆಗಿದ್ದು, ರಿಷಬ್ ಶೆಟ್ಟಿ ಮತ್ತೊಮ್ಮೆ ರೋಮಾಂಚನಕಾರಿ ದೃಶ್ಯಕಾವ್ಯದೊಳಗೆ ನಮ್ಮನ್ನ ಕರೆದೊಯ್ಯುತ್ತಿದ್ದಾರೆ. ಚಿತ್ರದ ಟ್ರೈಲರ್​ ಅದ್ಭುತವಾಗಿ ಮೂಡಿಬಂದಿದ್ದು, ಅಕ್ಟೋಬರ್​ 2 ಯಾವಾಗ ಬರುತ್ತೆ ಅಂತಾ ಸಿನಿ ವೀಕ್ಷಕರು ಎಕ್ಸೈಟ್ ಆಗಿದ್ದಾರೆ.
ಹೇಗಿದೆ ಟ್ರೈಲರ್​​..?
ದಂತಕತೆಯ ಮುನ್ನುಡಿ, ಕಾರ್ಣಿಕದ ಆದಿ ಪರ್ವ ಹೇಳಲು ಹೊರಟಿರುವ ಕಾಂತಾರ ಪ್ರೀಕ್ವೆಲ್​​ನ ಟ್ರೈಲರ್​ನಲ್ಲಿ ಬರುವ ಒಂದೊಂದು ದೃಶ್ಯವೂ ರೋಮಾಂಚನಕಾರಿಯಾಗಿದೆ. ‘ಅಪ್ಪಯ್ಯ ಎಂತಕ್ಕೆ ಇದೇ ಜಾಗದಲ್ಲಿ ಕಾಣೆಯಾದ್ದು’ ಅನ್ನೋ ಮೂಲಕ ಆರಂಭವಾಗುವ ಟ್ರೈಲರ್​ನ ಕಥೆಯು ಕಾಂತಾರ ಎಂಬ ದಟ್ಟ ಕಾನಿನ ಮಧ್ಯೆ ಈ ದಂತಕತೆ ತೆರೆದುಕೊಳ್ಳುತ್ತ ಸಾಗಿದೆ..
ಇದನ್ನೂ ಓದಿ:ಕಾಂತಾರ ಪ್ರೀಕ್ವೆಲ್ ಟ್ರೈಲರ್​ ರಿಲೀಸ್​.. ವಿಡಿಯೋ ಲಿಂಕ್ ಇಲ್ಲಿದೆ..!
ಜಲಮೂಲದಲ್ಲಿ ಸಿಗುವ ‘ಕಾರ್ಣಿಕದ ಕಲ್ಲಿ’ನ ಸುತ್ತ ತೆರೆದುಕೊಳ್ಳುವ ಚಿತ್ರದ ದಂತೆಕತೆಯು ಕೈಲಾಸದಲ್ಲಿರುವ ಶಿವನ ಬಳಿ ಹೋಗುತ್ತದೆ. ಯಾವಾಗ ಮನುಷ್ಯರು ಅಧರ್ಮದ ಕಡೆಗೆ ಹೊರಟಾಗ ಧರ್ಮ ಕಾಪಾಡಿಕೊಳ್ಳಲು ಈಶ್ವರನು ಗಣಗಳನ್ನು ಕಳುಹಿಸ್ತಾನೆ ಇರುತ್ತಾನೆ. ಈ ಎಲ್ಲಾ ಗಣಗಳು ಬಂದು ನೆಲೆಸಿದ್ದೇ ಈ ಪುಣ್ಯಭೂಮಿಯಲ್ಲಿ ಎಂಬ ಸಂದೇಶ ಟ್ರೈಲರ್ ಸಾರಿದೆ. ಧರ್ಮ ಕಾಪಾಡಲು ಬಂದಿರುವ ಗಣಗಳು ಸುತ್ತ ಹಾಗೂ ಸಿಕ್ಕಿರುವ ಕಾರ್ಣಿಕ ಕಲ್ಲಿನ ಹಿಂದಿರುವ ಸ್ಟೋರಿ ಏನು ಅನ್ನೋ ಕುತೂಹಲ ಹೆಚ್ಚಾಗಿದೆ.
ಕಾಂತಾರ ಕಾಡಿನಲ್ಲಿರುವ ಬ್ರಹ್ಮ ರಾಕ್ಷಸನ ಕುರಿತ ನಂಬಿಕೆ ಮತ್ತು ನಂಬಿಕೆ ಇಲ್ಲದಿರುವ ಬಗ್ಗೆಯೂ ಟ್ರೈಲರ್​ ಹೇಳುತ್ತಿದ್ದು, ಉಳ್ಳವರು ಮತ್ತು ಇಲ್ಲದವರ ನಡುವಿನ ಕಾಡ ಕದನದ ವ್ಯಾಪಾರವನ್ನೂ ತೋರಿಸಲಾಗಿದೆ. ಭಯಾನಕವಾಗಿರುವ ರೋಮಾಂಚನಕಾರಿಯ ದೃಶ್ಯಗಳ ಜೊತೆ ಸಣ್ಣ ಪ್ರೇಮಕಾವ್ಯವೂ ದೃಶ್ಯಕಾವ್ಯದಲ್ಲಿ ಬಂದು ಹೋಗಲಿದೆ.
ಇದರ ಮಧ್ಯೆ ಆರಂಭವಾಗುವ ಕಾಡ ಬೆಂಕಿಯು ಊರಿನವರೆಗೂ ಜ್ವಲಿಸಿದ್ದು, ಪರಿಣಾಮವಾಗಿ ಈಶ್ವರ ನೆಲಗೊಂಡ ಕತೆಯನ್ನ ಚಿತ್ರದಲ್ಲಿ ಹೇಳುತ್ತಿದ್ದಂತೆ ಕಾಣ್ತಿದೆ. ಆದರೆ ಈಶ್ವರೂ ಈಗಲೂ ಅಲ್ಲಿ ನೆಲೆಸಿದ್ದಾನಾ? ಯಾವ ರೂಪದಲ್ಲಿ ಅವತಾರಗೊಂಡಿದ್ದಾನೆ. ಅಧರ್ಮದ ವಿರುದ್ಧ ದೈವ ಗಣಗಳ ಹೊರಾಟ ಮತ್ತು ನಂಬಿಕೆಯ ಕುರಿತು ಚಿತ್ರದ ಟ್ರೈಲರ್​​ ಕ್ಯೂರಿಯಾಸಿಟಿಯನ್ನ ಹೆಚ್ಚಿಸಿದೆ.
ಇದನ್ನೂ ಓದಿ:ಮಾಜಿ ಸಚಿವ, ಹಾಲಿ ಸಂಸದ ಡಾ. ಸುಧಾಕರ್​ ಪತ್ನಿಗೆ ಡಿಜಿಟಲ್ ಅರೆಸ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ