/newsfirstlive-kannada/media/media_files/2025/09/22/kantara-trailer-2025-09-22-12-50-37.jpg)
ಹೊಂಬಾಳೆ ಫಿಲಂನ ಸ್ಯಾಂಡಲ್​ವುಡ್​ನ ಬಿಗ್​ ಬಜೆಟ್ ಮೂವಿಯಾಗಿರುವ ಕಾಂತಾರ ಪ್ರೀಕ್ವೆಲ್ ಸಿನಿಮಾದ ಟ್ರೈಲರ್​ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ವಿಶೇಷ ಏನೆಂದರೆ ಪ್ಯಾನ್ ಇಂಡಿಯಾ ಸ್ಟಾರ್ಸ್​ ಆಯಾಯ ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
ತೆಲುಗಿನಲ್ಲಿ ಕಾಂತಾರ ಚಾಪ್ಟರ್​ 1 ಟ್ರೈಲರ್​ ಅನ್ನು ರೆಬೆಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ರಿಲೀಸ್ ಮಾಡಿದ್ದಾರೆ. ಅದರಂತೆ ಮಲಯಾಲಂ ಭಾಷೆಯ ಟ್ರೈಲರ್ ಅನ್ನು ಪ್ರಭಾಸ್ ಜೊತೆ ಸಲಾರ್​ನಲ್ಲಿ ನಟಿಸಿರುವ ಪೃಥ್ವಿರಾಜ್ ಸುಕುಮಾರನ್ ರಿಲೀಸ್ ಮಾಡಿದ್ದಾರೆ.
ಆದರೆ ಕನ್ನಡದಲ್ಲಿ ಕಾಂತಾರ ಚಾಪ್ಟರ್​ 1 ಸಿನಿಮಾದ ಟ್ರೈಲರ್​ ಅನ್ನ ಕನ್ನಡ ಜನತೆಯೇ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಕಾಂತಾರ ಸಿನಿಮಾಗೆ ದೊಡ್ಡ ಯಶಸ್ಸು ಕೊಟ್ಟ ಹಿನ್ನೆಲೆಯಲ್ಲಿ ಕನ್ನಡಿಗರಿಂದಲೇ ಕಾಂತಾರ ಪ್ರೀಕ್ವೆಲ್ ರಿಲೀಸ್ ಮಾಡಿಸಲಾಯಿತು.ಇದರ ಜೊತೆಗೆ ನಿಮ್ಮ ಪ್ರೀತಿಯೇ ನಮಗೆ ದೊಡ್ಡ ಶಕ್ತಿ ಎಂದು ಚಿತ್ರತಂಡ ಹೇಳಿರುವುದು ತುಂಬಾ ವಿಶೇಷ ಎನಿಸಿದೆ.
ತೆಲುಗು, ಮಲಯಾಲಂ ಆಯ್ತು ಇನ್ನು ತಮಿಳಿನಲ್ಲಿ ಕಾಂತಾರ ಪ್ರೀಕ್ವೆಲ್ ಟ್ರೈಲರ್ ಅನ್ನ ನಟ ಶಿವಕಾರ್ತಿಕೇಯನ್ ಅವರು ಬಿಡುಗಡೆ ಮಾಡಿದ್ದಾರೆ. ಹಾಗೇ ಬಾಲಿವುಡ್ ಸಿನಿ ರಂಗದಲ್ಲಿ ಬಿಗ್ ಸ್ಟಾರ್ ​ಹೃತಿಕ್ ರೋಷನ್ ಹಿಂದಿ ವರ್ಷಿನ್​ ಟ್ರೈಲರ್​ ಅನ್ನ ರಿಲೀಸ್ ಮಾಡಿದ್ದಾರೆ.
ಸದ್ಯ ಕಾಂತಾರ ಚಾಪ್ಟರ್​ 1 ಸಿನಿಮಾದ ಟ್ರೈಲರ್​ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕಾಂತಾರ ಪ್ರೀಕ್ವೆಲ್ ಮೂವಿ ಟ್ರೈಲರ್​ನಿಂದ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ. ಇದೇ ಅಕ್ಟೋಬರ್​ 2ರಂದು ಕಾಂತಾರ ಚಾಪ್ಟರ್​ 1 ಸಿನಿಮಾ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಬಿಜೆಪಿಗರ ಟೀಕೆಗೆ ಸೆಡ್ಡು ಹೊಡೆದ ಬಾನು ಮುಷ್ತಾಕ್, ತಾಯಿ ಚಾಮುಂಡಿಯ ಆಶೀರ್ವಾದ ಪಡೆದು ಭಾವುಕ