Advertisment

ಬಿಜೆಪಿಗರ ಟೀಕೆಗೆ ಸೆಡ್ಡು ಹೊಡೆದ ಬಾನು ಮುಷ್ತಾಕ್, ತಾಯಿ ಚಾಮುಂಡಿಯ ಆಶೀರ್ವಾದ ಪಡೆದು ಭಾವುಕ

ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ನಾಡಿನ ಹಿರಿಯ ಸಾಹಿತಿ ಬಾನು ಮುಷ್ತಾಕ್ (Banu Mushtaq) ಅವರು ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉದ್ಘಾಟಿಸಿದರು.

author-image
Ganesh Kerekuli
mysore dasara (4)
Advertisment

ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ನಾಡಿನ ಹಿರಿಯ ಸಾಹಿತಿ ಬಾನು ಮುಷ್ತಾಕ್ (Banu Mushtaq) ಅವರು ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉದ್ಘಾಟಿಸಿದರು.

Advertisment

ಬೆಳಗ್ಗೆ ವೃಶ್ಚಿಕ ಶುಭ ಲಗ್ನದಲ್ಲಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ‘ಮೈಸೂರು ದಸರಾ’ಗೆ ಚಾಲನೆ ನೀಡಿದರು. ಉದ್ಘಾಟನೆಗೂ ಮುನ್ನ, ಬಾನು ಮುಷ್ತಾಕ್​ ಅವರು ಕುಟುಂಬ ಸಮೇತ ಚಾಮುಂಡಿ ಸನ್ನಿಧಿಗೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ:ಈ ಕಾರು ಖರೀದಿಸೋರಿಗೆ ಸೂಪರ್ ಸುದ್ದಿ.. 1.56 ಲಕ್ಷ ರೂಪಾಯಿವರೆಗೆ ಇಳಿಕೆ..!

mysore dasara (3)

ಮಲ್ಲಿಗೆ ಹೂ ಮುಡಿದು ಬಂದಿದ್ದ ಮುಷ್ತಾಕ್ 

ವಿಶೇಷ ಅಂದರೆ ಬಾನು ಮುಷ್ತಾಕ್ ಅವರು ಕೇಸರಿ ಬಣ್ಣದ ಸೀರೆ, ಹಸಿರು ಬಣ್ಣದ ರವಿಕೆ, ತಲೆಯಲ್ಲಿ ಮಲ್ಲಿಗೆ ಹೂ ಮೂಡಿದು ಬಂದಿದ್ದರು. ಚಾಮುಂಡಿತಾಯಿ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಿದ ಮುಷ್ತಾಕ್ ಅವರನ್ನು ಅಭಿನಂದಿಸಲಾಯಿತು. ಇನ್ನು ಬಿಜೆಪಿ ನಾಯಕರ ಹೇಳಿಕೆಗೆ ಬಾನು ಮುಷ್ತಾಕ್ ಸೆಡ್ಡು ಹೊಡೆದರು. ದಸರಾ ಉದ್ಘಾಟನೆಗೆ ಬಾನು ಅವರ ಆಯ್ಕೆಯನ್ನು ಬಿಜೆಪಿ ಪ್ರಶ್ನೆ ಮಾಡಿತ್ತು. ಅಲ್ಲದೇ ಚಾಮುಂಡಿ ಸನ್ನಿಧಿಗೆ ಹೋಗುವ ಅವರು ಮಂಗಳಾರತಿ ತಗೋತಾರ? ಕೈಮುಗಿತಾರ ಅಂತಾ ಬಿಜೆಪಿ ಹೇಳಿತ್ತು. ಆದರೆ ಮುಷ್ತಾಕ್ ಅವರು ಚಾಮುಂಡೇಶ್ವರಿಗೆ ಕೈಮುಗಿದು, ಮಂಗಳಾರತಿ ತೆಗೆದುಕೊಂಡು ಭಾವುಕರಾದರು. 

Advertisment

ಇದನ್ನೂ ಓದಿ:ಮೈಸೂರು ದಸರಾಗೆ ಅಧಿಕೃತವಾಗಿ ಚಾಲನೆ ಕೊಟ್ಟ ಬಾನು ಮುಷ್ತಾಕ್

ದಸರಾ ಉದ್ಘಾಟಿಸಿ ಮಾತನಾಡಿದ ಬಾನು ಮುಷ್ತಾಕ್.. ಪ್ರೀತಿಯ ಸಮಾಜ ಕಟ್ಟೋಣ, ಎಲ್ಲರಿಗೂ ಸಮಪಾಲು ಸಮಬಾಳು ಇರಲಿ. ನಾನು ನೂರಾರು ದೀಪಗಳನ್ನು ಬೆಳಗಿದ್ದೇನೆ. ಇವತ್ತು ಪುಷ್ಪಾರ್ಚನೆ ಮಾಡಿದೇವೆ. ಮಂಗಳಾರತಿ ಸ್ವೀಕರಿಸಿದ್ದೇವೆ. ನನ್ನ ಹಿಂದೂ ಧರ್ಮದ ಸಂಬಂಧ ನನ್ನ ಆತ್ಮಕಥೆಯಲ್ಲಿ ಬರೆದಿದ್ದೇನೆ. ಅದು ನಾಳೆ ಪ್ರಕಟ ಆಗಲಿದೆ. ಎಷ್ಟೇ ಸವಾಲು ಬಂದ್ರೂ ದಿಟ್ಟವಾಗಿ ಆಹ್ವಾನ ನೀಡಿ ನೈತಿಕ ಬೆಂಬಲ ಕೊಟ್ಟ ಸಿಎಂ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mysore Mysore news Mysore Dasara Banu Mushtaq Dasara Pratap Simha vs Banu Mushtaq ದಸರಾ
Advertisment
Advertisment
Advertisment