/newsfirstlive-kannada/media/media_files/2025/09/22/cares-2025-09-22-08-54-52.jpg)
ದಸರಾ ಮತ್ತು ದೀಪಾವಳಿಗೆ ಮೋದಿ ಸರ್ಕಾರ ದೇಶದ ಜನರಿಗೆ ಸಿಹಿ ಸುದ್ದಿ ನೀಡಿದೆ. ಗ್ರಾಹಕರ ತಲೆ ಮೇಲಿದ್ದ ಜಿಎಸ್‌ಟಿ ತೆರಿಗೆ ಭಾರವನ್ನ ಕೇಂದ್ರ ಸರ್ಕಾರ ಇಳಿಸಿದೆ. ಅಂದು ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ಮೋದಿ ನೀಡಿದ್ದ ವಾಗ್ದಾನ ನಿಜವಾಗಿದ್ದು, ಹೊಸ ಜಿಎಸ್​​ಟಿ ನಿಯಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ..
ಇಂದು ಸೆಪ್ಟೆಂಬರ್​ 22.. ನವರಾತ್ರಿ ಮೊದಲ ದಿನ.. ರಾಜ್ಯದಲ್ಲಿ ನಾಡಹಬ್ಬ ದಸರಾ ಸಂಭ್ರಮ.. ಈ ಸುದಿನದಂದೇ ಕೇಂದ್ರ ಸರ್ಕಾರ ದೇಶದ ಜನಸಮಾನ್ಯರಿಗೆ ಭರ್ಜರಿ ಗಿಫ್ಟ್ ಕೊಟ್ಟಿದೆ.. ಇಂದಿನಿಂದ ಜಿಎಸ್​ಟಿ .20 ಪರಿಷ್ಕರಣೆ ಜಾರಿ ಬರಲಿದ್ದು, ಉಳಿತಾಯ ಉತ್ಸವ ಶುರುವಾಗಲಿದೆ.
ದೇಶಾದ್ಯಂತ ಜಿಎಸ್​ಟಿ 2.0 ಜಾರಿ
ಇಷ್ಟು ದಿನ ದರ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ.. ಇಂದಿನಿಂದ ದೇಶಾದ್ಯಂತ ಜಿಎಸ್​ಟಿ 2.0 ಜಾರಿಯಾಗಲಿದ್ದು, ಡೈರಿಯಿಂದ ಕಾರುಗಳು ಮತ್ತು ಎಲೆಕ್ಟ್ರಾನಿಕ್ಸ್‌ವರೆಗೆ ಸುಮಾರು 375 ವಸ್ತುಗಳು ಅಗ್ಗವಾಗಲಿವೆ. ಇಂದಿನಿಂದ 4 ಸ್ಲ್ಯಾಬ್​ಗಳ ಬದಲು 2 ಸ್ಲ್ಯಾಬ್​​​ಗಳಲ್ಲಿ ಜಿಎಸ್​ಟಿ ಜಾರಿಯಾಗಲಿದೆ. ಇದ್ರಿಂದ ದೇಶದ ಮಧ್ಯಮ ವರ್ಗದವರ ಜೀವನ ನಿರ್ವಹಣೆಯ ಹೊರೆ ಕೊಂಚ ಕಡಿಮೆ ಆಗಲಿದೆ.
ಯಾವ ವಸ್ತುಗಳು ಶೇ.12 ರಿಂದ 5ಕ್ಕೆ ಇಳಿಕೆ?
ದಿನಬಳಕೆ ವಸ್ತುಗಳಾದ ಟೂತ್‌ಪೇಸ್ಟ್, ಶಾಂಪೂ ಸೋಪುಗಳ ಬೆಲೆ ಶೇ.12ರಿಂದ 5ಕ್ಕೆ ಇಳಿಕೆಯಾಗಲಿದೆ. ಪ್ಯಾಕೇಜ್ ಕುರುಕಲು ತಿಂಡಿ, ಅಡುಗೆ ಸಾಮಗ್ರಿಗಳು, ಬೈಸಿಕಲ್​​, ಸ್ಟೇಷನರಿ ವಸ್ತುಗಳು, ಮಕ್ಕಳ ನ್ಯಾಪ್‌ಕಿನ್ ಹಾಗೂ ಹೊಲಿಗೆ ಯಂತ್ರಗಳ ಮೇಲಿನ ಜಿಎಸ್​ಟಿಯನ್ನ ಕೇಂದ್ರ ಸರ್ಕಾರ ಕಡಿಮೆ ಮಾಡಿದೆ.
ಯಾವುದು ಶೇ28ರಿಂದ 18ಕ್ಕೆ ಇಳಿಕೆ
ಎಲ್ಲ ಮಾದರಿಯ ಟಿವಿ, ಎಸಿ ಹಾಗೂ ಫ್ರಿಡ್ಜ್​ಗಳ ಬೆಲೆ ಕಡಿಮೆಯಾಗಲಿದೆ.. ಇನ್ನು, ಆಟೋ ಮೊಬೈಲ್​ ಕ್ಷೇತ್ರದಲ್ಲಿ ಬಂಪರ್​ ಲಾಟರಿ ಹೊಡೆದಿದ್ದು, 350 ಸಿಸಿ ಒಳಗಿನ ಬೈಕ್​ ಹಾಗೂ 1200 ಸಿಸಿ ಒಳಗಿನ ಕಾರುಗಳ ಬೆಲೆ ಹೊಸ ಜಿಎಸ್​ಟಿ ನಿಯಮದಿಂದ ಕಡಿಮೆಯಾಗಲಿದೆ.
ಹಾಲಿನ ಉತ್ಪನಗಳ ಬೆಲೆಯೂ ಇಳಿಕೆ, ಕಾರು​ ಖರೀದಿ ಸುಲಭ​
ಜಿಎಸ್​ಟಿ ಇಳಿಕೆ ಹಿನ್ನೆಲೆ ಕೆಎಂಎಫ್ ತನ್ನ ನಂದಿನಿ ಬ್ರಾಂಡ್‌ನ ಹಾಲಿನ ಉತ್ಪನ್ನಗಳ ದರವನ್ನು ಕಡಿಮೆ ಮಾಡಿದ್ದು, ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಒಂದು ಕೆ.ಜಿ ನಂದಿನಿ ತುಪ್ಪ 40 ರೂಪಾಯಿ ಕಡಿಮೆ ಆಗಲಿದೆ. ಬೆಣ್ಣೆ, ಚೀಸ್, ಪನ್ನೀರ್ ಬೆಲೆಯೂ ಕಡಿಮೆ ಆಗಲಿದೆ. ಇನ್ನು ಮಧ್ಯಮ ವರ್ಗದ ಕುಟುಂಬಗಳಿಗೆ ಕಾರು ಖರೀದಿ ಮತ್ತಷ್ಟು ಸುಲಭವಾಗಲಿದೆ. ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿಯ ಸಣ್ಣ ಕಾರಿನಿಂದ SUVವರೆಗಿನ ಹಲವು ಮಾದರಿಗಳಲ್ಲಿ ಬೆಲೆ ₹1 ಲಕ್ಷಕ್ಕಿಂತ ಹೆಚ್ಚು ಕಡಿಮೆಯಾಗಿವೆ.
ಆಟೋ ಮೊಬೈಲ್ ಉತ್ಪಾದಕ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ನಿನ್ನೆಯಿಂದಲೇ ಹೊಸ ಬೆಲೆಗಳನ್ನು ಜಾರಿಗೆ ತಂದಿದೆ. ಈಗ ಮಹೀಂದ್ರಾ ಕಂಪನಿಯ ಕಾರುಗಳನ್ನು ಖರೀದಿಸೋದ್ರಿಂದ 1.56 ಲಕ್ಷ ರೂಪಾಯಿ ಅಗ್ಗವಾಗಿದೆ.
ಯಾವ ವಾಹ ಖರೀದಿಸಿದ್ರೆ ಎಷ್ಟು ಲಾಭ..? |
ಮಾಡೆಲ್ | ಪ್ರಸ್ತುತ GST + ಸೆಸ್ | ಹೊಸ GST | GST ಪ್ರಯೋಜನ |
ಬೊಲೆರೋ /ನಿಯೋ | 31% | 18% | ₹1.27 ಲಕ್ಷ |
XUV3XO ಪೆಟ್ರೋಲ್ | 29% | 18% | ₹1.40 ಲಕ್ಷ |
XUV3XO ಡೀಸೆಲ್ | 31% | 18% | ₹1.56 ಲಕ್ಷ |
ಥಾರ್ 2WD ಡೀಸೆಲ್ | 31% | 18% | ₹1.35 ಲಕ್ಷ |
ಥಾರ್ 4WD ಡೀಸೆಲ್ | 48% | 40% | ₹1.01 ಲಕ್ಷ |
ಸ್ಕಾರ್ಪಿಯೋ ಕ್ಲಾಸಿಕ್ | 48% | 40% | ₹1.01 ಲಕ್ಷ |
ಸ್ಕಾರ್ಪಿಯೋ ಎನ್ | 48% | 40% | ₹1.45 ಲಕ್ಷ |
ಥಾರ್ ರಾಕ್ಸ್ | 48% | 40% | ₹1.33 ಲಕ್ಷ |
XUV700 | 48% | 40% | ₹1.43 ಲಕ್ಷ |
ಕಾರಿನ ರೇಟ್​ನಲ್ಲಿ 1 ಲಕ್ಷ ಅಗ್ಗ |
ಕಾರು | ಹೊಸ ಆರಂಭಿಕ ಬೆಲೆ | ಎಕ್ಸ್-ಶೋರೂಂ ಬೆಲೆಯಲ್ಲಿ ಇಳಿಕೆ |
ಆಲ್ಟೋ | ₹3.69 ಲಕ್ಷ | (₹1.07 ಲಕ್ಷ ಇಳಿಕೆ) |
ಎಸ್-ಪ್ರೆಸ್ಸೊ | ₹3.49 ಲಕ್ಷ | (₹1.29 ಲಕ್ಷ ಇಳಿಕೆ) |
ಸೆಲೆರಿಯೊ | ₹4.69 ಲಕ್ಷ | (₹94,100 ಇಳಿಕೆ) |
ಸ್ವಿಫ್ಟ್ | ₹5.78 ಲಕ್ಷ | (₹84,600 ಇಳಿಕೆ) |
ಡಿಸೈರ್ | ₹6.25 ಲಕ್ಷ | (₹87,700 ಇಳಿಕೆ) |
ಫ್ರಾಂಕ್ಸ್ | ₹6.84 ಲಕ್ಷ | (₹1.12 ಲಕ್ಷ ಇಳಿಕೆ) |
ಜಿಎಸ್​ಟಿ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದ್ದು, ಇದನ್ನು ಉಳಿತಾಯ ಉತ್ಸವ ಎಂದು ಪ್ರಧಾನಿ ಮೋದಿ ಕರೆದಿದ್ದಾರೆ. ಆದ್ರೆ ಇದನ್ನು ವಿಪಕ್ಷಗಳು ಟೀಕಿಸಿದ್ದು, ಜಿಎಸ್‌ಟಿ ಕೌನ್ಸಿಲ್‌ನ ನಿರ್ಧಾರಗಳಿಗೆ ಮೋದಿ ಕ್ರೆಡಿಟ್ ಪಡೆಯುತ್ತಿದ್ದಾರೆ. ಈಗಾಗಲೇ ಆಗಿರುವ ಗಾಯಕ್ಕೆ ಬ್ಯಾಂಡೇಜ್ ಹಾಕಿದಂತಿದೆ ಎಂದು ಕಿಡಿಕಾರಿವೆ.
ಅದೇನೆ ಇರಲಿ ಕೇಂದ್ರ ಸರ್ಕಾರದ ಹೊಸ ಜಿಎಸ್‌ಟಿ ನಿಯಮ ಮಧ್ಯವರ್ಗದ ಕುಟುಂಬದ ಹೊರೆಯನ್ನು ಕೊಂಚ ಕಡಿಮೆ ಮಾಡಲಿದೆ. ಈ ಮೂಲಕ ದೇಶವಾಸಿಗಳಿಗೆ ನವರಾತ್ರಿ ಹಾಗೂ ದಸರಾ ಹಬ್ಬಕ್ಕೆ ಮೋದಿ ಸರ್ಕಾರ ಶುಭ ಸುದ್ದಿ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ