/newsfirstlive-kannada/media/media_files/2025/09/23/sahibzada-farhan-2025-09-23-10-06-16.jpg)
ಪಾಕ್ ಎದುರಿನ ಸೂಪರ್​​-4 ಮ್ಯಾಚ್​​ನಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ. ದುಬೈನಲ್ಲಿ ಟೀಮ್​ ಇಂಡಿಯಾದ ಮಿಸೈಲ್​ ದಾಳಿಗೆ ಪಾಕ್​ ಚಿಂದಿ ಚಿತ್ರಾನ್ನವಾಗಿದೆ. ಹೈವೋಲ್ಟೇಜ್​​ ಕದನಲ್ಲಿ ಆನ್​ಫೀಲ್ಡ್​ನಲ್ಲೇ ನರಿಬುದ್ಧಿ ತೋರಿಸೋಕೆ ಬಂದ ಪಾಕ್​ಗೆ ಟೀಮ್ ಇಂಡಿಯಾ ಆಟಗಾರರು ಅಖಾಡದಲ್ಲೇ ಕೌಂಟರ್ ಕೊಟ್ಟಿದ್ದಾರೆ.
ಏಷ್ಯಾಕಪ್​​ನಲ್ಲಿ ಟೀಮ್ ಇಂಡಿಯಾ ನಾಗಲೋಟ ಮುಂದುವರಿದಿದೆ. ಸೂಪರ್-4 ಮ್ಯಾಚ್​​ನಲ್ಲಿ ಪಾಪಿ ಪಾಕಿಸ್ತಾನಕ್ಕೆ ಡಿಚ್ಚಿ ನೀಡಿರುವ ಟೀಮ್ ಇಂಡಿಯಾ, ಜಿದ್ದಾಜಿದ್ದಿನ ಪಂದ್ಯದಲ್ಲಿ ಸರಿಯಾಗೇ ತಿರುಗೇಟು ನೀಡಿದೆ. ನಮ್ಮನ್ನ ಕೆಣಕಿ ಅಖಾಡದಲ್ಲಿ ಉಳಿದವರಿಲ್ಲ ಎಂಬ ಸಂದೇಶ ಸಾರಿದೆ. ಇದೇ ಜಿದ್ದಾಜಿದ್ದಿನ ಕದನದಲ್ಲಿ ಪಾಕ್​​ನ ನೌಟಂಕಿ ಆಟವೂ ಬಟಾಬಯಲಾಗಿದೆ.
ಏಷ್ಯಾಕಪ್​ ಆರಂಭದಿಂದಲೂ ಇಂಡೋ ಪಾಕ್ ಪಂದ್ಯವೇ ಕೇಂದ್ರ ಬಿಂದುವಾಗಿತ್ತು. ಲೀಗ್​ ಮ್ಯಾಚ್​​ನಲ್ಲಿ ಹ್ಯಾಂಡ್ ಶೇಕ್​ ಮಾಡದೇ ಟೀಮ್ ಇಂಡಿಯಾ, ಸರಿಯಾಗೇ ಕೌಂಟರ್ ನೀಡಿತ್ತು. ಸೋಲಿನ ಜೊತೆಗೆ ಮತ್ತೊಂದು ಮುಖಭಂಗ ಅನುಭವಿಸಿದ, ಸೂಪರ್​​​-4ನಲ್ಲಿ ಹೇಗಾದ್ರೂ ಮಾಡಿ ಗೆಲ್ಲೋ ಕನಸುಕಾಣ್ತಿತ್ತು. ಈ ಗೆಲುವಿಗಾಗಿ ಒಳ್ಳೆ ಆಟ ಆಡೋದು ಬಿಟ್ಟು ಅಡ್ಡದಾರಿ ತುಳೀತು.
ಸೂಪರ್​-4 ಮ್ಯಾಚ್​ಗೂ ಮುನ್ನವೇ ಕೆಣಕಿದ್ದ ಪಾಕಿಗಳು
ಸೂಪರ್​-4 ಮ್ಯಾಚ್​ಗೂ ಮುನ್ನವೇ ಇಂಡೋ ಪಾಕ್ ವೈರತ್ವ ಧಗಧಗಿಸಿತ್ತು. ಸೇಡಿಗಾಗಿ ಕತ್ತಿ ಮಸೆಯುತ್ತಿದ್ದ ಪಾಕಿಗಳು ಪಂದ್ಯಕ್ಕೂ ಮುನ್ನವೇ ಆಫ್​​ ದ ಫೀಲ್ಡ್​ನಲ್ಲಿ ನರಿ ಬುದ್ದಿ ತೋರಿಸಿದ್ರು. ಅಭ್ಯಾಸದ ವೇಳೆ ಹ್ಯಾರಿಸ್​ ರೌಫ್ ಭಾರತೀಯ ಅಭಿಮಾನಿಗಳ ಕಡೆಗೆ 6-0 ಎಂದು ಕೂಗಿ ಆಪರೇಷನ್​ ಸಿಂಧೂರ ದಾಳಿ ವೇಳೆ ನಾವು ಭಾರತದ 6 ಯುದ್ಧ ವಿಮಾನ ಹೊಡೆದುಳಿಸಿದ್ವಿ ಎಂದು ಪಾಕಿಸ್ತಾನ ಹಬ್ಬಿಸಿದ್ದ ಹಸಿ ಸುಳ್ಳನ್ನ ಇಟ್ಟುಕೊಂಡು ಕೆಣಕಿದ್ರು. ಇನ್ನು, ಅಭಿಮಾನಿಗಳಿಗೆ ಆಟೋಗ್ರಾಫ್​ ನೀಡುತ್ತಿದ್ದ ವೇಳೆ ಫಕಾರ್​ ಜಮಾನ್​ ಭಾರತೀಯ ಅಭಿಮಾನಿಗಳನ್ನ ನಗ್ಲೇಟ್​ ಮಾಡಿದ್ದರು.
ಉಗ್ರನಂತೆ ಸಂಭ್ರಮಿಸಿದ ಸಾಹಿಬ್‌ಜಾದಾ ಫರ್ಹಾನ್
ಏನೇ ಆದ್ರೂ ನಾಯಿ ಬಾಲ ಡೊಂಕೇ. ಈ ಗಾದೆ ಮಾತು ಪಾಕ್​ಗೆ ಸರಿಯಾಗಿ ಅನ್ವಯಿಸುತ್ತೆ. ಭಯೋತ್ಪಾದಕ ಕೃತ್ಯಗಳಿಂದಲೇ ಪಾಕ್​​​, ಕುಖ್ಯಾತಿ ಪಡೆದಿದೆ. ಪಾಕ್ ಆಟಗಾರರೂ ಒಂತರಾ ಈ ಟೆರರಿಸ್ಟ್​ಗಳಂತೆ ಆಡ್ತಿದ್ದಾರೆ. ಅರ್ಧಶತಕದ ಬಳಿಕ ಸಾಹಿಬ್‌ಜಾದಾ ಫರ್ಹಾನ್ ಸಂಭ್ರಮಿಸಿದ ರೀತಿ ಈತ ಟೆರೆರಿಸ್ಟೋ ಅಥವಾ ಆಟಗಾರನೋ ಅನ್ನೋ ಅನುಮಾನ ಹುಟ್ಟಿಸಿದೆ.
ಗಿಲ್​, ಅಭಿಷೇಕ್​ ಜೊತೆ ಶಾಹೀನ್, ರೌಫ್ ಕಿರಿಕ್​​
ಮೊದಲ ಪಂದ್ಯದ ಸೋಲಿನ ಹತಾಶೆಯಲ್ಲಿದ್ದ ಪಾಕ್, ಸೂಪರ್​-4ನಲ್ಲಾದರು ಗೆದ್ದು ಮಾನ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿತ್ತು. ಪಾಕ್​ ಬೌಲಿಂಗ್ ದಾಳಿಯನ್ನು ಗಿಲ್, ಅಭಿಷೇಕ್ ಶರ್ಮಾ ಚಿಂದಿ ಉಡಾಯಿಸಿದರು. ಇವರಿಬ್ಬರ ಆರ್ಭಟ ಅರಗಿಸಿಕೊಳ್ಳಲಾಗದ ಶಾಹೀನ್ ಆಫ್ರಿದಿ, ಶುಭ್​ಮನ್ ಗಿಲ್​​​ ಮೇಲೆ ಸ್ಲೆಡ್ಜಿಂಗ್​ಗೆ ನಿಂತರು. ಕಾಲು ಕೆರೆದುಕೊಂಡು ಬಂದ್ರೆ ನಮ್ಮ ಹುಡುಗ್ರು ಸುಮ್ಮನೇ ಬಿಡ್ತಾರಾ? ಹಾರಿಸ್ ರೌಫ್ ಎಸೆದ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಶುಭ್​ಮನ್ ಬೌಂಡರಿ ಬಾರಿಸಿದ್ದರು. ಆಗ ನಾನ್ ಸ್ಟ್ರೈಕ್ ನಲ್ಲಿದ್ದ ಅಭಿಷೇಕ್ ಹಾಗೂ ಹ್ಯಾರಿಸ್ ನಡುವೆ ಮಾತಿನ ಚಕಮಕಿ ನಡೆಯಿತು.
ಅನ್​​​ಫೀಲ್ಡ್​ನಲ್ಲೂ ಸುಳ್ಳನ್ನ ಸಮರ್ಥಿಸಿಕೊಂಡ ರೌಫ್
ಆನ್​​ಫೀಲ್ಡ್​ನಲ್ಲೂ ಪಾಕಿಸ್ತಾನ ಸೇನೆಯ ಸುಳ್ಳನ್ನ ಹ್ಯಾರೀಸ್​​ ರೌಫ್​ ಸಮರ್ಥಿಸಿಕೊಂಡ್ರು. ಶುಭ್​ಮನ್-ಅಭಿಷೇಕ್​ನ ಕೆಣಕಿ ಕೈ ಸುಟ್ಟುಕೊಂಡಿದ್ದ ರೌಫ್​ನ ಫ್ಯಾನ್ಸ್​ ಕಿಚಾಯಿಸಿದ್ರು. ಎಮ್​ಸಿಜಿಯಲ್ಲಿ ಕಿಂಗ್​ ಕೊಹ್ಲಿ, ರೌಫ್​​​ ಬೌಲಿಂಗ್​ ದಾಳಿಯನ್ನ ಚಿಂದಿ ಉಡಾಯಿಸಿದ್ದನ್ನ ನೆನಪಿಸಿದ್ರು. ಆಗ ಮತ್ತೆ ಕೈ ಸನ್ನೆ ಮಾಡಿದ ಯುದ್ಧ ವಿಮಾನ ಹೊಡೆದುರುಳಿಸಿದ ಹಸಿ ಸುಳ್ಳನ್ನ ಸಮರ್ಥಿಸಿಕೊಂಡ್ರು.
ಟೀಮ್ ಇಂಡಿಯಾ ಉತ್ತರ..!
ಪಾಕ್ ಆಟಗಾರರ ನೌಟಂಕಿ ಆಟಕ್ಕೆ ಶುಭ್​ಮನ್, ಅಭಿಷೇಕ್, ಆನ್​​ಫಿಲ್ಡ್​ನಲ್ಲಿ ಕೇವಲ ಮಾತಿಗೆ ಮಾತಿನ ಉತ್ತರವನ್ನಷ್ಟೇ ನೀಡಲಿಲ್ಲ. ಬ್ಯಾಟ್​​ನಿಂದ ಮುಟ್ಟಿನೋಡಿಕೊಳ್ಳೋ ಆನ್ಸರ್​ ಕೊಟ್ರು. ಸ್ಟೇಡಿಯಂನ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸಿದರು. ಬೌಂಡರಿ, ಸಿಕ್ಸರ್​ಗಳ ಮಳೆ ಸುರಿಸಿದ ಸ್ನೇಹಿತರ ಸೈತಾನ್ ಆಟಕ್ಕೆ ಪಾಕ್ ಫಿನಿಷ್ ಆಯ್ತು. ಪಂದ್ಯ ಮುಗಿದ ಬಳಿಕ ಅಭಿಷೇಕ್ ಶರ್ಮಾ, ಪಾಕ್​ಗೆ ಮಾತಿನ ಕೌಂಟರ್ ಕೊಟ್ರು. ಇವತ್ತಿನ ಗೇಮ್ ಪ್ಲಾನ್ ಸರಳವಾಗಿತ್ತು. ಆದ್ರೆ ಅವರು ಯಾವುದೇ ಕಾರಣವಿಲ್ಲದೆ ನಮ್ಮ ಬಳಿಗೆ ಬರುತ್ತಿದ್ದ ರೀತಿ, ನನಗೆ ಅದು ಇಷ್ಟವಾಗಲಿಲ್ಲ. ಅವರಿಗೆ ನನ್ನ ಬ್ಯಾಟ್​​ನಿಂದಲೇ ಉತ್ತರ ನೀಡಿದೆ-ಅಭಿಷೇಕ್ ಶರ್ಮಾ
ಯುವರಾಜ್ ನೆನಪಿಸಿದ ಅಭಿಷೇಕ್
ಪಾಕ್ ಎದುರಿನ ಸೂಪರ್-4 ಮ್ಯಾಚ್​ನಲ್ಲಿ ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್ ಆಟ ಯುವರಾಜ್ ಸಿಂಗ್​​ನ ನೆನಪಿಸಿದ್ದು ಸುಳ್ಳಲ್ಲ. ಅದರಲ್ಲೂ ಅಭಿಷೇಕ್ ಶರ್ಮಾರ ಆಕ್ರಮಣಕಾರಿ ಆಟ, ಕೆಚ್ಚೆದೆಯ ಹೋರಾಟದ ಪರಿ ಗುರುವಿಗೆ ತಕ್ಕ ಶಿಷ್ಯ ಅನ್ನೋದನ್ನೇ ಸಾರಿ ಸಾರಿ ಹೇಳಿತ್ತು.
ಇದನ್ನೂ ಓದಿ:BCCI ಎಲೆಕ್ಷನ್​ ಕ್ಲೈಮ್ಯಾಕ್ಸ್.. ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಎಲ್ಲಾ ಸ್ಥಾನಗಳಿಗೂ ಹೆಸರು ಫೈನಲ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ