/newsfirstlive-kannada/media/media_files/2025/09/22/pak_salman-2025-09-22-19-17-02.jpg)
ಏಷ್ಯಾಕಪ್​ನಲ್ಲಿ ಭಾರತ ತಂಡದ ವಿರುದ್ಧ ಸತತ ಎರಡು ಪಂದ್ಯಗಳನ್ನು ಸೋಲುತ್ತಿದ್ದಂತೆ ಪಾಕಿಸ್ತಾನದ ನಾಯಕನ ವಿರುದ್ಧ ಅಪಸ್ವರಗಳು ಕೇಳಿ ಬರುತ್ತಿವೆ. ಪಂದ್ಯದಲ್ಲಿ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ಪ್ರಶ್ನೆ ಮಾಡಲಾಗುತ್ತಿದೆ. ಸೂರ್ಯಕುಮಾರ್ ಸೇನೆ ಜೊತೆ ಪಾಕಿಸ್ತಾನ ನೆಲಕಚ್ಚುತ್ತಿದ್ದಂತೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್, ನಾಯಕ ಸಲ್ಮಾನ್ ಅಲಿ ಆಘಾನನ್ನ ತೀವ್ರವಾಗಿ ಟೀಕಿಸಿದ್ದಾರೆ.
ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು, ಭಾರತದ ವಿರುದ್ಧ ಪಾಕ್ ತಂಡ ಸೋಲುತ್ತಿದ್ದಂತೆ ನಾಯಕ ಸಲ್ಮಾನ್ ಅಲಿ ವಿರುದ್ಧ ಹರಿಹಾಯ್ದಿದ್ದಾರೆ. ಪಂದ್ಯದ ವೇಳೆ ಸಲ್ಮಾನ್ ತಾನು ಏನು ನಿರ್ಧಾರ ತೆಗೆದುಕೊಳ್ಳುತ್ತಿದ್ದಾನೆ ಎಂಬುದು ಅವನಿಗೆ ಸರಿಯಾಗಿ ಗೊತ್ತಾಗುತ್ತಿಲ್ಲ. ತಂಡದ ನಾಯಕನಾಗಿ ಅತ್ಯಂತ ಕಳಪೆ ತೀರ್ಮಾನ ತೆಗೆದುಕೊಳ್ಳುತ್ತಿದ್ದಾನೆ. ಬೌಲರ್​ಗಳನ್ನ ಹೇಗೆ ಬಳಸಿಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನ ಕೂಡ ಅವನಿಗಿಲ್ಲ ಎಂದು ಜರಿದಿದ್ದಾರೆ.
ಭಾರತದ ವಿರುದ್ಧ ಮ್ಯಾಚ್ ನಡೆಯುವಾಗ ಸಲ್ಮಾನ್ ಅಲಿ ಏನು ಮಾಡುತ್ತಿದ್ದಾನೆ ಎಂದು ಅವನಿಗೆ ಸರಿಯಾದ ಅರಿವು ಇಲ್ಲ. ಯಾವುದೋ ದುರ್ಬಲವಾದ ಲಿಂಕ್ ಹೊಂದಿದ್ದಾನೆ. ಸಲ್ಮಾನ್ ಆಡುತ್ತಿರುವ ಸ್ಪಾಟ್​ಗೆ ಅರ್ಹನೆ, ಅವನು ಏನು ಮಾಡುತ್ತಿದ್ದಾನೆ?. ಅವನು ಒಳ್ಳೆಯ ಹುಡುಗ ಆಗಿರಬಹುದು. ಆದರೆ ಆತನಿಂದ ಸರಿಯಾದ ನಿರ್ಧಾರ ಹೊರ ಬರುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬಗ್ಗೆ ಗೊತ್ತಿಲ್ಲ. ಪವರ್​ ಪ್ಲೇನಲ್ಲಿ ಸರಿಯಾಗಿ ಆಡಿಸುತ್ತಿಲ್ಲ. ತೆಗೆದುಕೊಳ್ಳುತ್ತಿರುವ ತಪ್ಪು ನಿರ್ಧಾರಗಳಿಂದ ಮ್ಯಾಚ್​ ಕೈ ತಪ್ಪುತ್ತಿದೆ ಎಂದು ಶೋಯೆಬ್ ಅಖ್ತರ್ ತಮ್ಮದೇ ದೇಶದ ತಂಡದ ನಾಯಕನ ವಿರುದ್ಧ ಕಿಡಿ ಕಾರಿದ್ದಾರೆ.
ಪಾಕ್ ನಾಯಕ ಸಲ್ಮಾನ್ ಅಲಿ ಆಘಾ ತಂಡದಲ್ಲಿ ಆಲ್​ರೌಂಡರ್ ಆಗಿದ್ದಾರೆ. ಅದರಂತೆ ಏಷ್ಯಾಕಪ್​ನಲ್ಲಿ ಸರಿಯಾದ ಪ್ರದರ್ಶನ ನೀಡುತ್ತಿಲ್ಲ. ಸದ್ಯ ನಾಲ್ಕು ಪಂದ್ಯಗಳನ್ನು ಆಡಿರುವ ಸಲ್ಮಾನ್ 0, 3, 20 ಹಾಗೂ 17 ರನ್​ಗಳು ಗಳಿಸಿದ್ದಾರೆ. ಒಟ್ಟು 40 ರನ್​ಗಳಿಂದ 13.33 ರಷ್ಟು ಸರಾಸರಿ ಹೊಂದಿದ್ದಾರೆ ಅಷ್ಟೇ. ಇದು ಪಾಕಿಸ್ತಾನ ನಾಯಕನ ಅತ್ಯಂತ ಕಳಪೆ ಪ್ರದರ್ಶನ ಎಂದು ಅಲ್ಲಿನವರು ಟೀಕೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ