/newsfirstlive-kannada/media/media_files/2025/09/22/pak_sahibzada_farhan-2025-09-22-17-48-24.jpg)
ಏಷ್ಯಾಕಪ್​ನ ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಜಯ ದಾಖಲಿಸಿ ಸಂಭ್ರಮಿಸಿದೆ. ಹ್ಯಾಂಡ್​ಶೇಕ್ ಸೇರಿದಂತೆ ಕೆಲ ಸನ್ನಿವೇಶಗಳು ಈ ಪಂದ್ಯದಲ್ಲಿ ಕಂಡು ಬಂದವು. ಇದರಲ್ಲಿ ಪಾಕಿಸ್ತಾನದ ಓಪನರ್ ಸಾಹಿಬ್‌ಜಾದಾ ಫರ್ಹಾನ್ ಅರ್ಧಶತಕ ಬಾರಿಸುತ್ತಿದ್ದಂತೆ ಬ್ಯಾಟ್​ ಅನ್ನು ಗನ್​ ರೀತಿ ಹಿಡಿದು ಸೆಲೆಬ್ರೇಷನ್ ಮಾಡಿದರು. ಸದ್ಯ ಈ ಸಂಬಂಧ ಸಾಹಿಬ್‌ಜಾದಾ ಫರ್ಹಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಟಾಸ್ ಗೆದ್ದು ಸೂರ್ಯಕುಮಾರ್ ಅವರು ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಮೊದಲ ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 172 ರನ್​ಗಳ ಗುರಿ ನೀಡಿತ್ತು. ಪಾಕ್ ಪರ ಓಪನರ್ ಸಾಹಿಬ್‌ಜಾದಾ ಫರ್ಹಾನ್ ಬ್ಯಾಟಿಂಗ್​ ಹೆಚ್ಚು ನೆರವಾಯಿತು. ಪಂದ್ಯದಲ್ಲಿ 45 ಬಾಲ್​ಗಳನ್ನ ಎದುರಿಸಿದ್ದ ಸಾಹಿಬ್‌ಜಾದಾ ಫರ್ಹಾನ್ 5 ಬೌಂಡರಿ, 3 ಸಿಕ್ಸರ್​ಗಳಿಂದ ಅರ್ಧಶತಕ ಸಿಡಿಸಿದರು.
ಇದನ್ನೂ ಓದಿ: ಪಾಕ್​ ವಿರುದ್ಧ ಗೆದ್ದ ಟೀಮ್ ಇಂಡಿಯಾದ ಮುಂದಿನ ಪಂದ್ಯ ಯಾರ ಜೊತೆ, ಎಲ್ಲಿ, ಯಾವಾಗ?
ಒಂದು ರೀತಿಯಲ್ಲಿ ಪಾಕ್ 170 ರನ್​ವರೆಗೆ ಹೋಗಲು ಫರ್ಹಾನ್ ಬ್ಯಾಟಿಂಗ್​ ಹೆಚ್ಚು ಸಹಕಾರಿ ಆಯಿತು. ಪಂದ್ಯದಲ್ಲಿ ಸಾಹಿಬ್‌ಜಾದಾ ಫರ್ಹಾನ್ ಹಾಫ್​ಸೆಂಚುರಿ ಬಾರಿಸುತ್ತಿದ್ದಂತೆ ಬ್ಯಾಟ್​ ಅನ್ನು ಗನ್​ ರೀತಿ ಹಿಡಿದು ಸಂಭ್ರಮಿಸಿದರು. ಆದರೆ ಈ ಬಗ್ಗೆ ಎಲ್ಲೆಡೆಯಿಂದ ಭಾರೀ ಟೀಕೆಗಳು ಕೇಳಿ ಬಂದವು. ಸದ್ಯ ಈ ಸಂಬಂಧ ಮಾತನಾಡಿರುವ ಸಾಹಿಬ್‌ಜಾದಾ ಫರ್ಹಾನ್ ಯಾರೇ ಏನೇ ಅಂದರೂ ನಾನು ತಲೆ ಕಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.
ಪಂದ್ಯದಲ್ಲಿ ಆ ಕ್ಷಣಕ್ಕೆ ಮಾತ್ರ ನಾನು ಸೆಲೆಬ್ರೇಟ್ ಮಾಡಿದ್ದು ಅಷ್ಟೇ. ಅರ್ಧಶತಕ ಗಳಿಸಿದಾಗ ಯಾವಾಗಲೂ ಅಷ್ಟೊಂದು ಆಗಿ ಸಂಭ್ರಮಿಸಲ್ಲ. ಆದರೆ ನಿನ್ನೆ ಭಾರತದ ವಿರುದ್ಧ ಆಡುವಾಗ ತಕ್ಷಣಕ್ಕೆ ನನ್ನ ಮೈಂಡ್​ಗೆ ಅದು ಬಂದಿದ್ದರಿಂದ ಬ್ಯಾಟ್ ಅನ್ನು ಗನ್ ರೀತಿ ಹಿಡಿದು ಸೆಲೆಬ್ರೇಟ್ ಮಾಡಿದೆ. ಇದನ್ನು ಜನರು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದು ನನಗೆ ಬೇಕಾಗಿಲ್ಲ. ಆ ಬಗ್ಗೆ ನಾನು ಕೇರ್ ಮಾಡೋದಿಲ್ಲ. ಎಲ್ಲಿಯೇ ಹೋಗಲಿ ನಾವು ಅಗ್ರೇಸ್ಸಿವ್ ಆಗಿ ಆಡಬೇಕು. ಭಾರತದ ಜೊತೆ ಮಾತ್ರ ಹೀಗೆ ಮಾಡಿಲ್ಲ. ಪ್ರತಿ ತಂಡದ ಜೊತೆಯೂ ಅಗ್ರೇಸ್ಸಿವ್ ಆಗಿ ಆಡುತ್ತೇವೆ. ಅದರಂತೆ ನಾನು ಬ್ಯಾಟಿಂಗ್ ಮಾಡಿದೆ ಎಂದು ಪಾಕ್ ಓಪನರ್ ಸಾಹಿಬ್‌ಜಾದಾ ಫರ್ಹಾನ್ ಹೇಳಿದ್ದಾರೆ.
​ ​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ